ಸಾರಿಗೆ ಸಿಬ್ಬಂದಿ ವೋಟು ಯಾರಿಗೆ?

ಬೆಂಗಳೂರು: ಯೋಧರಿಗೂ ಮತದಾನ ಅವಕಾ ಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿರುವಾಗ ಕೆಎಸ್ಆರ್ಟಿಸಿ ಬಸ್ ಚಾಲಕರು ಮತ್ತು ನಿರ್ವಾಹಕರು ಮಾತ್ರ ಹಕ್ಕಿನಿಂದ ವಂಚಿತರಾಗಿದ್ದಾರೆ!
ರವಾಂಡಾದಂತಹ ಸಣ್ಣ ರಾಜ್ಯ ಚುನಾವಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿರಿವ 700-800 ಮಂದಿಗೆ ನಗರದಲ್ಲೇ ಒಂದು ಮತಕೇಂದ್ರ ಸ್ಥಾಪಿಸುತ್ತದೆ. ನಾವು ನಮ್ಮದೇ ದೇಶದಲ್ಲಿ 10ಸಾವಿರಕ್ಕೂ ಹೆಚ್ಚು ಸಾರಿಗೆ ಸಿಬ್ಬಂದಿಯನ್ನು ಮತದಾನದಿಂದ ವಂಚಿತರನ್ನಾಗಿ ಮಾಡುತ್ತಿದ್ದೇವೆ!
ರಾಜ್ಯ ರಸ್ತೆ ಸಾರಿಗೆಯಲ್ಲಿ ಕೆಲಸ ಮಾಡುವ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಚಾಲಕರು ಹಾಗೂ ನಿರ್ವಾಹಕರು ಲೋಕಸಭೆ ಚುನಾವಣೆಗೆ ಮತ ಹಾಕುವ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ.
ಇದು ಇಂದು ನಿನ್ನೆಯ ಸಮಸ್ಯೆಯಲ್ಲ. ಪ್ರತಿಬಾರಿ ಚುನಾವಣೆ ನಡೆದಾಗಲೂ ಕೆಎಸ್ಆರ್ಟಿಸಿ ಬಸ್ನ ಸಾಕಷ್ಟು ಚಾಲಕ ಮತ್ತು ನಿರ್ವಾಹಕರದ್ದು ಇದೇ ಸಮಸ್ಯೆ. ಆದರೆ, ಸೈನಿಕರ ಸಮಸ್ಯೆಯೇ ಇತ್ಯರ್ಥವಾಗಿರುವಾಗ ಇವರ ಸಮಸ್ಯೆಯೂ ಇತ್ಯರ್ಥವಾಗಲಿ ಎಂಬ ಹಾರೈಕೆ. ಯಾಕೆಂದರೆ ಈ ಬಗ್ಗೆ ಈವರೆಗೆ ಇಲಾಖೆಯಾಗಲಿ, ಸರ್ಕಾರವಾಗಲಿ ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬುದು ಸಿಬ್ಬಂದಿಯಲ್ಲಿ ಬೇಸರ ಮೂಡಿಸಿದೆ.
ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ಸರ್ಕಾರಿ ಸಿಬ್ಬಂದಿಗೆ ಅಂಚೆ ಮೂಲಕ ಮತ ಹಾಕುವ ವ್ಯವಸ್ಥೆ ಇದೆ. ಆದರೆ, ಚಾಲಕ ಮತ್ತು ನಿರ್ವಾಹಕರಿಗೆ ಇಂತಹ ಯಾವುದೇ ವ್ಯವಸ್ಥೆ ಇಲ್ಲ. ಚುನಾವಣೆ ವೇಳೆ ಮತದಾರರು, ಮತ ಯಂತ್ರ ಬಸ್ನಲ್ಲಿ ಹೊತ್ತೊಯ್ಯುವ ಕೆಲಸ ಮಾತ್ರ ಇವರಿಗೆ. ಇಲಾಖೆಯಲ್ಲಿ ಕೆಲಸ ನಿರ್ವಹಿಸುವಹೊರರಾಜ್ಯಕ್ಕೆ ಹೋಗುವ ಹಾಗೂ ದೂರದೂರಿಗೆ ಹೋಗಿ ರಾತ್ರಿ ಅಲ್ಲಿಯೇ ತಂಗಿ, ಮರುದಿನ ಹಿಂತಿರುಗುವ ಸಿಬ್ಬಂದಿ ಮತದಾನದಿಂದ ವಂಚಿತರಾಗುತ್ತಾರೆ. ಪ್ರತಿ ಡಿಪೋದಿಂದ ನಿತ್ಯ ನೂರಾರು ಮಂದಿ ಬಸ್ ಸಿಬ್ಬಂದಿ ಪ್ರಯಾಣಿಕರನ್ನು ಹೊರರಾಜ್ಯಗಳಿಗೆ ಕರೆದೊಯ್ಯುತ್ತಾರೆ. ಅವರು ಒಮ್ಮೆ ಹೋದರೆ ಹಿಂತಿರುಗುವುದು ಮೂರ್ನಾಲ್ಕು ದಿನವಾಗುತ್ತದೆ. ಪ್ರತಿನಿತ್ಯ ಸುಮಾರು 1700 ಮಂದಿ ಹೊರರಾಜ್ಯಕ್ಕೆ ಹೋಗುತ್ತಾರೆ. ರಾತ್ರಿ ಪಾಳಿ ಹೋಗುವವರು 6175 ಕ್ಕೂ ಅಧಿಕ ಮಂದಿ ಇದ್ದಾರೆ. ಇನ್ನು ಇವರನ್ನು ಹೊರತುಪಡಿಸಿ ರಾಜ್ಯದಲ್ಲೇ ದೂರದ ಊರುಗಳಿಗೆ ಮುಂಜಾನೆ ಹೋಗಿ ಮತ್ತೆ ರಾತ್ರಿ ಹಿಂತಿರುಗುವ (ಓಟಿ ಮಾಡುವ) ಸಿಬ್ಬಂದಿಯೂ ಮತದಾನದಿಂದ ವಂಚಿತರಾಗುತ್ತಾರೆ. ಬಹುತೇಕವಾಗಿ ಅವರೆಲ್ಲ ವೋಲ್ವೋ, ರಾಜಹಂಸ ಬಸ್ನ ಸಿಬ್ಬಂದಿಯಾರಿಗುತ್ತಾರೆ. ಉಳಿದಂತೆ ಬೇರೆ ಬಸ್ಗಳ ಸಿಬ್ಬಂದಿಯೂ ಇದ್ದಾರೆ. ಮತಪೆಟ್ಟಿಗೆ ಮತ್ತು ಮತಗಟ್ಟೆ ಅಧಿಕಾರಿಗಳನ್ನು ಕರೆದುಕೊಂಡು ಹೋಗುವ ಬಸ್ ಸಿಬ್ಬಂದಿಗೂ ಮತ ಹಾಕಲು ಅವಕಾಶ ಕಲ್ಪಿಸಲಾಗಿಲ್ಲ. ಅವರು ನಮ್ಮದೇ ಪ್ರಜೆಗಳಾಗಿದ್ದರೂ ತಮ್ಮ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಇಲಾಖೆಯ ಹಿರಿಯ ಅಧಿಕಾರಿಗಳು, ಮತದಾನದ ದಿನ ಸಿಬ್ಬಂದಿಗೆ ರಜೆ ಕೊಡಲು ಸಾಧ್ಯವಿಲ್ಲ. ಹಾಗಾಗಿ ಸಿಬ್ಬಂದಿ ಕರ್ತವ್ಯ ನಿರ್ವಹಿಸಲೇ ಬೇಕಿದೆ. ಇದರಿಂದ ಸಿಬ್ಬಂದಿಗೆ ತೊಂದರೆಯಾಗುವ ಬಗ್ಗೆ ಗಮನಕ್ಕೆ ಬಂದಿದೆ. ಆದರೆ, ಅವರು ಮತಚಲಾವಣೆ ಮಾಡುವ ಬಗ್ಗೆ ಚಿಂತಿಸಿಲ್ಲ ಎಂದರು.
10 ಸಾವಿರ
ಸಂಸ್ಥೆಯಲ್ಲಿ ಇಷ್ಟು ಸಿಬ್ಬಂದಿ ಇದ್ದು, ಪ್ರತಿ ಚುನಾವಣೆಯಲ್ಲೂ ಇದೇ ಸಮಸ್ಯೆ
ರಾತ್ರಿ ಪಾಳಿ ಹೋಗುವ ಸಿಬ್ಬಂದಿಗೆ ಮತ ಹಾಕಲು ಅವಕಾಶ ಸಿಗುವುದಿಲ್ಲ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳು ಅಥವಾ ಸರ್ಕಾರ ಗಮನಹರಿಸಿದರೆ ಒಳಿತು.
- ವೋಲ್ವೋ ಬಸ್ ಚಾಲಕ
ಸಾಮಾನ್ಯವಾಗಿ ಮಹಿಳಾ ನಿರ್ವಾಹಕಿಯರಿಗೆ ಮತ ಅವಕಾಶ ಸಿಗುತ್ತದೆ. ಆದರೆ, ರಾಜ್ಯದಲ್ಲೇ ಇರುವ ದೂರದ ಊರಿಗೆ ಮುಂಜಾನೆ ಹೋಗಿ ರಾತ್ರಿ ವಾಪಾಸ್ ಬರುವವರಿಗೆ ಅವಕಾಶ ಸಿಗುವುದಿಲ್ಲ. ಅಂತಹವರು ಸಾವಿರಾರು ಮಂದಿ ಇದ್ದಾರೆ.
- ರಾಜಹಂಸ ನಿರ್ವಾಹಕಿ
ಅಂತಾರಾಜ್ಯ ಬಸ್ ವೇಳಾಪಟ್ಟಿ -ಸೇವೆ
(ಚಾಲಕರು, ನಿರ್ವಾಹಕರು)
ಕೆಎಸ್ಆರ್ಟಿಸಿ 1121-779
ವಾಯವ್ಯ 662-430
ಈಶಾನ್ಯ 786-482
ಒಟ್ಟು 2529-1691
ರಾತ್ರಿ ಸೇವೆಸಲ್ಲಿಸುವ ಬಸ್ ವೇಳಾಪಟ್ಟಿ -ಸೇವೆ(ಚಾಲಕರು, ನಿರ್ವಾಹಕರು)
ಕೆಎಸ್ಆರ್ಟಿಸಿ 4268-3049
ವಾಯವ್ಯ 2554-1703
ಈಶಾನ್ಯ 2276-1423
ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


