ಪ್ರಧಾನ ಸುದ್ದಿ

ವಾರಾಣಸಿ ಈಗ ಚುನಾವಣಾ ರಾಜಧಾನಿ

ವಾರಾಣಸಿ ಈಗ ಚುನಾವಣಾ ರಾಜಧಾನಿ
Published On :

ವಾರಾಣಸಿಯಿಂದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಪ್ರಮುಖ ಮಾಧ್ಯಮಗಳು, ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಪ್ರಚಾರಕ್ಕಾಗಿ ಅಲ್ಲಿಗೆ ಧಾವಿಸುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ, ಆಮ್ ಆದ್ಮಿ ಪಕ್ಷ ಸೇರಿದಂತೆ ಪ್ರಮುಖ ಪಕ್ಷಗಳ ನಾಯಕರು, ಕಾರ್ಯಕರ್ತರು ಈಗಾಗಲೇ ಸೇರಿದ್ದಾರೆ. ಈ ಪೈಕಿ ಬಿಜೆಪಿ ಕಾರ್ಯಕರ್ತರೇ ಹೆಚ್ಚಾಗಿದ್ದಾರೆ. ಮೋದಿ ವಿರುದ್ಧ ಕಾಂಗ್ರೆಸ್‌ನ ಅಜಯ್ ರಾಯ್, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಪ್ರಮುಖರಾಗಿ ಸೆಣಸಲಿದ್ದಾರೆ. ಇದರ ಜತೆಗೆ ತೃಣಮೂಲ ಕಾಂಗ್ರೆಸ್, ಬಿಎಸ್‌ಪಿ, ಸಮಾಜವಾದಿ ಪಕ್ಷದ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ. ಮೇ 12ರಂದು ಇಲ್ಲಿ ಚುನಾವಣೆ ನಡೆಯಲಿದೆ.   

ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ 'ದೇಗುಲಗಳ ನಗರಿ' ವಾರಾಣಸಿ ಈಗ 'ರಾಜಕೀಯ ರಾಜಧಾನಿ'ಯಾಗಿ ಬದಲಾಗುತ್ತಿದೆ. ಹೊರಗಿನಿಂದ ಬಂದ ಸುಮಾರು 50 ಸಾವಿರದಷ್ಟು ಮಂದಿ ಇಲ್ಲಿ ಝಂಡಾ ಹೂಡಿದ್ದಾರೆ. ಇವರ್ಯಾರೂ ಪ್ರವಾಸಿಗರಲ್ಲ, ಬದಲಾಗಿ ರಾಜಕೀಯ ಪಕ್ಷಗಳ ಕಾರ್ಯಕರ್ತರು!
 ಹೌದು. ಈಗ ಇಡೀ ದೇಶದ ಗಮನ ವಾರಾಣಸಿಯತ್ತ ನೆಟ್ಟಿದೆ. ಈ ಲೋಕಸಭೆ ಚುನಾವಣೆಯ 'ಬಿಗ್ ಫೈಟ್‌' ನಡೆಯುತ್ತಿರುವುದೇ ಇಲ್ಲಿ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಆಪ್ ನಾಯಕ ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್‌ರಂತಹ ಘಟಾನುಘಟಿಗಳ ಜತೆಗೆ ಎಸ್ಪಿ, ಬಿಎಸ್ಪಿ, ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ. ಒಟ್ಟಾರೆಯಾಗಿ ದೇಗುಲಗಳ ನಗರಿಯಾದ್ಯಂತ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ.
ಬಿಜೆಪಿ ಕಾರ್ಯಕರ್ತರೇ ಹೆಚ್ಚು: ಸದ್ಯಕ್ಕೆ ವಿವಿಧ ಪಕ್ಷಗಳ ಸುಮಾರು 50 ಸಾವಿರದಷ್ಟು ಕಾರ್ಯಕರ್ತರು ವಾರಾಣಸಿಗೆ ಆಗಮಿಸಿದ್ದಾರೆ. ಚುನಾವಣಾ ದಿನ ಸಮೀಪಿಸುತ್ತಿರುವಂತೆ ಈ ಸಂಖ್ಯೆ ಒಂದು ಲಕ್ಷ ಮೀರುವ ಸಾಧ್ಯತೆಯಿದೆ. ಅದರಲ್ಲೂ ಏ.23ರಂದು ಕೇಜ್ರಿವಾಲ್, 24ರಂದು ನರೇಂದ್ರ ಮೋದಿ ಅವರು ನಾಮಪತ್ರ ಸಲ್ಲಿಸಲಿದ್ದು, ಇದರ ಬಳಿಕ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ವಾರಾಣಸಿಯತ್ತ ತೆರಳಲಿದ್ದಾರೆ ಎನ್ನಲಾಗಿದೆ. ಸದ್ಯ ಇರುವ ಕಾರ್ಯಕರ್ತರಲ್ಲಿ ಅತಿ ಹೆಚ್ಚು ಅಂದರೆ 35 ಸಾವಿರದಷ್ಟು ಮಂದಿ ಬಿಜೆಪಿಯವರು.
ಮಾಧ್ಯಮಗಳ ಲಗ್ಗೆ: ಪಕ್ಷಗಳ ಕಾರ್ಯಕರ್ತರು, ನಾಯಕರಷ್ಟೇ ಅಲ್ಲ, ಮಾಧ್ಯಮಗಳೂ ವಾರಾಣಸಿಯತ್ತ ಲಗ್ಗೆಯಿಟ್ಟಿವೆ. ಇನ್ನು ನಡೆಯಲಿರುವ ಮತದಾನದಲ್ಲಿ ಹೈ ಪ್ರೊಫೈಲ್ ಕ್ಷೇತ್ರವೆಂದರೆ ವಾರಾಣಸಿ. ಇಲ್ಲಿ ಸುದ್ದಿಗಳಿಗೇನೂ ಕೊರತೆ ಇರುವುದಿಲ್ಲ. ಹಾಗಾಗಿ ಮಾಧ್ಯಮ ಪ್ರತಿನಿಧಿಗಳು ದೇಗುಲ ನಗರಿಯಲ್ಲಿ ಬೀಡುಬಿಟ್ಟಿದ್ದಾರೆ. ವಾರಾಣಸಿಯಲ್ಲಿ ಸುಮಾರು 16 ಲಕ್ಷ ಮತದಾರರಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.