ಪ್ರಧಾನ ಸುದ್ದಿ

ಈತನಿಗೆ ಹಸಿವೇ ಆಗಲ್ವಂತೆ!

Published On :

ಕನಕಗಿರಿ: ಮನುಷ್ಯನ ಬೆಳವಣಿಗೆಗೆ ಆಹಾರ ಮುಖ್ಯ. ಕೆಲವೊಮ್ಮೆ ಒಂದು ಹೊತ್ತು, ಒಂದೆರಡು ದಿನ ಆಹಾರ ಬಿಟ್ಟಿರಬಹುದು. ಆದರೆ, ಆಹಾರ ಸೇವಿಸದೆ, ಕೇವಲ ನೀರು ಕುಡಿಯುತ್ತ ಬದುಕಿರುವ ವ್ಯಕ್ತಿಯನ್ನು ನೋಡಿದ್ದೀರಾ?
ಕನಕಗಿರಿ ಸಮೀಪದ ಕಲಕೇರಿ ಗ್ರಾಮದಲ್ಲಿ ಮೂರು ವರ್ಷಗಳಿಂದ ಆಹಾರ ಸೇವಿಸದೆ ಬದುಕಿ, ವಿಚಿತ್ರವಾಗಿ ಜೀವನ ಸಾಗಿಸಿರುವ ಯಮನೂರಪ್ಪ ಬಟಾರೆ ಈಗ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
ಸುಮಾರು 45 ವರ್ಷ ವಯಸ್ಸಿನ ಯಮನೂರಪ್ಪ ಬಟಾರೆಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳೂ ಇದ್ದಾರೆ. ಮೂರು ವರ್ಷಗಳ ಹಿಂದೆ ಊಟ ಮಾಡಿದ ಮೇಲೆ ಆಯಾಸವಾಯಿತಂತೆ. ಅಲ್ಲಿಂದ ಊಟ ಮಾಡುವುದನ್ನೇ ಬಿಟ್ಟಿದ್ದಾರೆ. ಒಂದು ವರ್ಷ ಬ್ರೆಡ್, ಬಿಸ್ಕತ್ ತಿಂದು ಜೀವಿಸಿದರು. ಆಮೇಲೆ, ಅದನ್ನೂ ಬಿಟ್ಟು, ನೀರನ್ನಷ್ಟೇ ಕುಡಿಯುತ್ತಿದ್ದಾರೆ. ಎರಡು ವರ್ಷಗಳಿಂದ ಇವರು ಆಹಾರ ಸೇವಿಸಿದ ನಿದರ್ಶನವೇ ಇಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಊಟ ಮಾಡಬೇಕೆಂದರೆ ಹಸಿವೆಯೇ ಆಗುವುದಿಲ್ಲ. ಎರಡು ವರ್ಷಗಳಿಂದ ಶೌಚಕ್ಕೂ ಹೋಗಿಲ್ಲ. ಆದರೆ, ಆರೋಗ್ಯ ಹದಗೆಟ್ಟಿಲ್ಲ. ಮೊದಲು ಹೇಗಿದ್ದನೋ, ಈಗಲೂ ಹಾಗೆಯೇ ಇದ್ದಾನೆ. ಹೊಟ್ಟೆಗೇನೂ ತಿನ್ನಲ್ಲ ಅಂತ ಕಾರಟಗಿಯ ಪ್ರಸಿದ್ಧ ಖಾಸಗಿ ವೈದ್ಯರ ಬಳಿ, ಸರ್ಕಾರಿ ಆಸ್ಪತ್ರೆಯಲ್ಲಿ ತೋರಿಸಿದ್ದಾರೆ. ದೇವರಿಗೂ ಹೋಗಿ ಬಂದಿದ್ದಾರೆ. ಬಡತನ ಇರುವ ಕಾರಣ, ದೊಡ್ಡ ಆಸ್ಪತ್ರೆ ಗೋಜಿಗೆ ಹೋಗಿಲ್ಲ ಎಂದು ಗ್ರಾಮಸ್ಥ ಈಶಪ್ಪ ತಿಳಿಸಿದ್ದಾರೆ. ಈತನ ವಿಚಿತ್ರ ಕಾಯಿಲೆ ಪತ್ತೆ ಮಾಡಿ, ಮತ್ತೆ ಆಹಾರ ಸೇವಿಸುವಂತೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

   ಸೋಮಶೇಖರಯ್ಯ ಸ್ವಾಮಿ ಹಿರೇಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.