ಸೇಡಿನ ರಾಜಕೀಯ ಇಲ್ಲ, ಭದ್ರತೆಗೂ ಚ್ಯುತಿ ಬರಲ್ಲ

ರಾಬರ್ಟ್ ವಾದ್ರಾ ಅವರನ್ನು ರಾಜಕೀಯವಾಗಿ ಗುರಿಯಾಗಿಸಿಕೊಂಡಿಲ್ಲ. ಅವರ ವಿರುದ್ಧದ ಆರೋಪಗಳ ಬಗ್ಗೆಯಷ್ಟೇ ಮಾತನಾಡುತ್ತಿದ್ದೇವೆ. ಇದಿಷ್ಟೇ ಅಲ್ಲ, ಅಧಿಕಾರಕ್ಕೆ ಬಂದ ತಕ್ಷಣ ವಾದ್ರಾರನ್ನು ಜೈಲಿಗೆ ಕಳುಹಿಸುತ್ತೇವೆ, ಈ ಮೂಲಕ ಸೇಡಿನ ರಾಜಕಾರಣ ಮಾಡುತ್ತೇವೆ ಎಂಬುದೂ ಸುಳ್ಳು. ಇದು ನ್ಯಾಯಾಂಗಕ್ಕೆ ಸಂಬಂಧಿಸಿದ ವಿಷಯ. ಅದು ತನ್ನ ಕೆಲಸ ಮಾಡುತ್ತೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಅವರು ವಿಸ್ತೃತವಾಗಿ ಮಾತನಾಡಿದ್ದಾರೆ.
ಕಾಂಗ್ರೆಸ್
ಕಾಂಗ್ರೆಸ್ ಜಾತ್ಯತೀತತೆಯ ಬಂಕರ್‌ನಲ್ಲಿ ಬಚ್ಚಿಟ್ಟುಕೊಂಡಿದೆ. 100 ಕ್ಷೇತ್ರಗಳನ್ನೂ ಗೆಲ್ಲುವುದು ಕಷ್ಟವಾಗಿರುವ ಸಮಯದಲ್ಲಿ, ಜಾತ್ಯತೀತತೆಯ ಹೆಸರು ಹೇಳಿಕೊಂಡು ಮತ ದೋಚಲು ಯತ್ನಿಸುತ್ತಿದೆ. ಸೋಲುವ ಭೀತಿಯಿಂದಲೇ ಕೈ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.
ಸ್ವರ್ಗವಿಲ್ಲ
ಸೋನಿಯಾ ಅವರು ಆರೋಪಿಸಿರುವಂತೆ ಅಧಿಕಾರಕ್ಕೆ ಬಂದಲ್ಲಿ, ನಾನು ದೇಶವನ್ನು ಸ್ವರ್ಗ ಮಾಡುತ್ತೇನೆ ಎಂದು ಹೇಳಿಲ್ಲ. ಆದರೆ ಎಲ್ಲರೂ ಬದುಕಲು ಉತ್ತಮ ವಾತಾವರಣ ಕಲ್ಪಿಸುವ ಯತ್ನ ಮಾಡುತ್ತೇನೆ ಎಂದಷ್ಟೇ ಹೇಳಿದ್ದೇನೆ.
ವಾದ್ರಾ
ಕಳೆದ 10 ವರ್ಷಗಳ ಯುಪಿಎ ದುರಾಡಳಿತದ ಸಂತ್ರಸ್ತ ಇವರು. ಇವರನ್ನು, ಸೋನಿಯಾ, ರಾಹುಲ್‌ರನ್ನು ಸಮರ್ಥಿಸಿಕೊಳ್ಳಲು ಪ್ರಿಯಾಂಕಾಗೆ ಎಲ್ಲ ರೀತಿಯಲ್ಲೂ ಹಕ್ಕಿದೆ. ಅಧಿಕಾರಕ್ಕೆ ಬಂದಲ್ಲಿ ವಾದ್ರಾ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ ಎಂಬುದು ಸುಳ್ಳು.
ಕೈ ಕೋಟಾ
ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಂಗ್ರೆಸ್‌ಗೆ ಇಂಥ ಭರವಸೆಗಳು ನೆನಪಾಗುತ್ತವೆ. ಆದರೆ ಜನಕ್ಕೆ ಗೊತ್ತಿದೆ, ಇವು ಕೇವಲ ಭರವಸೆಯಾಗಿಯೇ ಉಳಿಯುತ್ತವೆ ಎಂದು. ಹೀಗಾಗಿ ಕಾಂಗ್ರೆಸ್‌ನವರು ಹಿಂದುಳಿದ ಮುಸ್ಲಿಮರಿಗೆ ಒಬಿಸಿ ಕೋಟಾ ಕೊಡುವ ಬಗ್ಗೆ ಮಾತನಾಡಿದೆ.
ರಕ್ಷಣೆ
ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ರಕ್ಷಣೆ ಸಿಗಲ್ಲ ಎಂಬುದು ಸುಳ್ಳು. ಮುಸ್ಲಿಂ, ಸಿಖ್, ಕ್ರಿಶ್ಚಿಯನ್ ಸೇರಿದಂತೆ ಎಲ್ಲ ಧರ್ಮೀಯರಿಗೂ ರಕ್ಷಣೆ ನೀಡುತ್ತೇವೆ. ನಮ್ಮ ಧ್ಯೇಯವಾಕ್ಯ 'ಎಲ್ಲರ ಬೆಂಬಲ, ಎಲ್ಲರ ಅಭಿವೃದ್ಧಿ'. ಈ ರೀತಿಯಲ್ಲೇ ನಡೆದುಕೊಳ್ಳುತ್ತೇವೆ.
ಭ್ರಷ್ಟಾಚಾರ
ಅಧಿಕಾರಕ್ಕೆ ಬಂದ ತಕ್ಷಣ ಹಾಲಿ ಸಂಸದರ ಮೇಲಿರುವ ಕ್ರಿಮಿನಲ್ ಆಪಾದನೆಗಳ ಕುರಿತಂತೆ ವಿಚಾರಣೆಗಾಗಿ ತ್ವರಿತಗತಿ ನ್ಯಾಯಾಲಯ ಆರಂಭಿಸುತ್ತೇವೆ. ಇವರ ಜೊತೆಯಲ್ಲೇ ಶಾಸಕರು, ನಗರ ಮತ್ತು ಸ್ಥಳೀಯ ಸಂಸ್ಥೆಗಳ ಸದಸ್ಯರ ವಿರುದ್ಧವೂ ವಿಚಾರಣೆ ನಡೆಸಲು ಅವಕಾಶ ಕಲ್ಪಿಸುತ್ತೇವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


