ಶ್ರೀಲಂಕಾ ಐಎಸ್‌ಐನ 2ನೇ ಕಾರಸ್ಥಾನ

ನವದೆಹಲಿ: ಶ್ರೀಲಂಕಾದೊಂದಿಗೆ ಗೆಳೆತನ ಬೆಳೆಸಿಕೊಂಡಿರುವ ಪಾಕಿಸ್ತಾನ ಲಂಕಾದ ನೆಲವನ್ನು ಐಎಸ್‌ಐನ ಮತ್ತೊಂದು ನೆಲೆಯಾಗಿ ಪರಿವರ್ತಿಸಲು ಹೊರಟಿದೆ. ನಾಲ್ಕು ವರ್ಷಗಳ ಕಾಲ ಕೊಲಂಬೋದಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಐಎಸ್‌ಐನ ಎರಡನೇ ಮುಖ್ಯ ಕಾರಸ್ಥಾನವನ್ನಾಗಿಸಿಕೊಂಡು ಭಾರತದಲ್ಲಿ ಭಯೋತ್ಪಾದನಾ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಪಾಕ್‌ನ ಬಣ್ಣ ಮತ್ತೊಮ್ಮೆ ವಿಶ್ವ ಸಮುದಾಯದ ಮುಂದೆ ಬಯಲಾಗಿದೆ.
ಕೊಲಂಬೋದಲ್ಲೇ ಕೂತು ಬೆಂಗಳೂರಿನ ಇಸ್ರೇಲ್ ರಾಯಭಾರ ಕಚೇರಿ ಹಾಗೂ ಚೆನ್ನೈನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಸ್ಫೋಟಿಸಲು ಐಎಸ್‌ಐ ಸಂಚು ರೂಪಿಸಿತ್ತು. ತನ್ನ ನೀಚ ಕೃತ್ಯ ಬಯಲಾಗುತ್ತಿದ್ದಂತೆ ಸೇವಾವಧಿ ಮುಕ್ತಾಯವಾಗಿದೆ ಎನ್ನುವ ನೆಪ ಮುಂದಿಟ್ಟುಕೊಂಡು ಪಾಕಿಸ್ತಾನ ತನ್ನ ಉಗ್ರ ರಾಯಭಾರಿ ಅಮಿರ್ ಜುಬೈರ್ ಸಿದ್ಧಿಕಿಯನ್ನು ವಾಪಸ್ ಕರೆಸಿಕೊಂಡಿದೆ.
ಚೆನ್ನೈನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಮತ್ತು ಬೆಂಗಳೂರಿನಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಮಾತ್ರವಲ್ಲದೆ ಕೊಚ್ಚಿನ್ ಮತ್ತು ವಿಶಾಖಪಟ್ಟಣದಲ್ಲಿರುವ ನೌಕಾ ನೆಲೆಯ ಮಾಹಿತಿ ಸಂಗ್ರಹಿಸುವ ಕಾರ್ಯವನ್ನೂ ಸಿದ್ಧಿಕಿ ಹೊತ್ತುಕೊಂಡಿದ್ದ. ಇದಕ್ಕಾಗಿ ಆತ ಶ್ರೀಲಂಕದ ಪ್ರಜೆ ಸಾಕಿರ್ ಹುಸೇನ್ ಮತ್ತಿರರನ್ನು ನೇಮಿಸಿಕೊಂಡಿದ್ದ. ಆದರೆ, ಸಾಕಿರ್ ಚೆನ್ನೈ ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುವುದರೊಂದಿಗೆ ಮುಖವಾಡ ಕಳಚಿ ಬಿದ್ದಿದೆ. ಕೆಲ ತಿಂಗಳ ಹಿಂದೆ ಸಾಕಿರ್‌ನನ್ನು ಬಂಧಿಸಿರುವ ಪೊಲೀಸರು ಸಿದ್ಧಿಕಿ ಆಟದ ಕುರಿತು ಪೂರ್ಣ ಮಾಹಿತಿ ಕಲೆ ಹಾಕಿದ್ದಾರೆ. ಇದೇ ವೇಳೆ, ಈ ಸಂಚಿನ ಭಾಗವಾಗಿದ್ದ ಮತ್ತೊಬ್ಬ ಶ್ರೀಲಂಕಾದ ಪ್ರಜೆ ಮಹಮ್ಮದ್ ಸುಲೇಮಾನ್‌ನ್ನು ಮಲೇಷ್ಯಾ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಆತನೂ ತಪ್ಪೊಪ್ಪಿಕೊಂಡಿದ್ದಾರೆ. ಸಿದ್ಧಿಕಿ ಸೂಚನೆಯಂತೆ ಚೆನ್ನೈ ಮತ್ತು ಬೆಂಗಳೂರಿನ ಕಾನ್ಸುಲೇಟ್‌ಗಳಿಗೆ ದಾಳಿ ನಡೆಸಲು ಇಬ್ಬರು ಉಗ್ರರನ್ನು ಮಾಲ್ಡೀವ್ಸ್ ಮೂಲಕ ಭಾರತಕ್ಕೆ ಕಳುಹಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾಗಿ ಬಾಯಿ ಬಿಟ್ಟಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


