ಅಮಿತ್ ಶಾ ತಂಡಕ್ಕೆ ಬಿಎಸ್ವೈ ಸೇರ್ಪಡೆ

ನವದೆಹಲಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಬಿ.ಎಲ್. ಸಂತೋಷ್ ಮತ್ತು ವಿ. ಸತೀಶ್ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಚೊಚ್ಚಲ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಶನಿವಾರ ಪ್ರಕಟಿಸಿರುವ ತಂಡದಲ್ಲಿ ಕರ್ನಾಟಕಕ್ಕೆ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿಲ್ಲ. ಯಡಿಯೂರಪ್ಪ ಅವರಿಗೆ ಉಪಾಧ್ಯಕ್ಷ ಸ್ಥಾನ ಮತ್ತು ಸಂತೋಷ್ ಮತ್ತು ಸತೀಶ್ ಅವರಿಗೆ ಜಂಟಿ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಹುದ್ದೆ ನೀಡಲಾಗಿದೆ. ಇದರೊಂದಿಗೆ ಮುಂದೊಂದು ದಿನ ಕೇಂದ್ರ ಸಂಪುಟ ಸೇರುವ ನಿರೀಕ್ಷೆಯಲ್ಲಿದ್ದ ಯಡಿಯೂರಪ್ಪಗೆ ಸಂಪೂರ್ಣ ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ವರಿಷ್ಠರು ಸೂಚಿಸಿದಂತಾಗಿದೆ.
ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆದಿರುವ ಅನಂತಕುಮಾರ್ರನ್ನು ನಿರೀಕ್ಷೆಯಂತೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಡಲಾಗಿದೆ. ಅವರ ಸ್ಥಾನಕ್ಕೆ ಬರುತ್ತಾರೆಂದು ನಂಬಲಾಗಿದ್ದ ಅರವಿಂದ್ ಲಿಂಬಾವಳಿಗೆ ಹುದ್ದೆ ಸಿಕ್ಕಿಲ್ಲ. ಅಚ್ಚರಿ ಎಂದರೆ ಗಾಂಧಿ ಕುಟುಂಬದ ವರುಣ್ಗಾಂಧಿ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಡಲಾಗಿದ್ದು, ಬೇರಾವ ಹುದ್ದೆಯನ್ನು ನೀಡಿಲ್ಲ. ಉತ್ತರ ಪ್ರದೇಶದ ಮುಂದಿನ ಮುಖ್ಯಮಂತ್ರಿ ಕನಸು ಕಾಣುತ್ತಿದ್ದ ವರುಣ್ ಗಾಂಧಿಗೆ ಇದು ಆಘಾತ ತಂದಿದೆ.
ಉಪಾಧ್ಯಕ್ಷರು
ಬಂಡಾರು ದತ್ತಾತ್ತೇಯ, ಬಿ.ಎಸ್. ಯಡಿಯೂರಪ್ಪ, ಸತ್ಯಪಾಲ್ ಮಲಿಕ್, ಮುಖ್ತಾರ್ ಅಬ್ಬಾಸ್ ನಖ್ವಿ, ಪುರುಷೋತ್ತಮ ರುಪಾಲ, ಪ್ರಭಾತ್ ಝಾ, ರಘುವರ್ ದಾಸ್, ಕಿರಣ್ ಮಹೇಶ್ವರಿ, ವಿನಯ್ ಸಹಸ್ರಬುದ್ಧಿ, ರೇಣುದೇವಿ, ದಿನೇಶ್ ಶರ್ಮಾ
ಪ್ರಧಾನ ಕಾರ್ಯದರ್ಶಿಗಳು
ಜಗತ್ ಪ್ರಕಾಶ್ ನಡ್ಡಾ, ರಾಜೀವ್ ಪ್ರತಾಪ್ ರೂಡಿ, ಮುರಳಿಧರ್ ರಾವ್, ರಾಮ್ ಮಾಧವ್, ಸರೋಜ್ ಪಾಂಡೆ, ಭುಪೇಂದ್ರಯಾದವ್, ರಾಮ್ಶಂಕರ್ ಕಟಾರಿಯಾ, ರಾಮ್ಲಾಲ್(ಸಂಘಟನೆ)
-ರೇಣುಕಾಪ್ರಸಾದ್ ಹಾಡ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


