ಸಂಸದೀಯ ಸಮಿತಿಗೆ ಅಡ್ಡಗಾಲು

ಸಂಸದೀಯ ಸಮಿತಿ ಸದಸ್ಯರ ವಯೋವುತಿ 75ಕ್ಕೆ ನಿಗದಿಗೆ ಚಿಂತನೆ
ಅಟಲ್, ಅಡ್ವಾಣಿ, ಜೋಷಿ ಸದಸ್ಯ ಸ್ಥಾನಗಳಿಗೆ ಕೋಕ್ ಹುನ್ನಾರ
ನವದೆಹಲಿ: ಕೇಂದ್ರ ಸಚಿವ ಸಂಪುಟದಿಂದ ಹಿರಿಯ ನಾಯಕರನ್ನು ಹೊರಗಿಟ್ಟ ನಂತರ, ಬಿಜೆಪಿ ಈಗ ತನ್ನ ಸಂಸದೀಯ ಸಮಿತಿಯಿಂದಲೂ 75 ವರ್ಷ ಮೇಲ್ಪಟ್ಟವರನ್ನು ದೂರವಿಡಲು ಚಿಂತನೆ ನಡೆಸಿದೆ.
ಶೀಘ್ರದಲ್ಲಿ ನೂತನ ಸಂಸದೀಯ ಸಮಿತಿ ಅಸ್ತಿತ್ವ ಬರಲಿದೆ. ಇದರ ಸದಸ್ಯರ ವಯೋವುತಿ ನಿಗದಿಪಡಿಸುವ ಬಗ್ಗೆ ಈಗಾಗಲೇ ಚರ್ಚೆಗಳು ಆರಂಭಗೊಂಡಿವೆ. ಇದರಿಂದ ಹಿರಿಯನಾಕರಾದ ಎಲ್.ಕೆ.ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಷಿ ಅವರು ಸಮಿತಿಯಿಂದ ಹೊರಗುಳಿಯುವ ಸಾಧ್ಯತೆಗಳಿವೆ.
ವಯೋಮಿತಿ ಹೇಗೆ?
ಸಂಸದೀಯ ಮಂಡಳಿ ಸದಸ್ಯರ ವಯೋಮಿತಿಯನ್ನು 75ವರ್ಷಕ್ಕೆ ನಿಗದಿ ಮಾಡಿದರೆ ಹೇಗೆ ಎಂಬ ಚಿಂತನೆ ಇದೆ. ಇದು ಬಿಜೆಪಿಯ ಹಿರಿಯ ಸದಸ್ಯರು ಸಮಿತಿ ಸೇರುವ ಆಸೆಗೆ ಭಂಗತರಲಿದೆ. ಅದರಲ್ಲೂ ಮೋದಿ ಅಲೆಗೂ ಮುನ್ನ ಬಿಜೆಪಿಯ ವರಿಷ್ಟ ನಾಯಕರೆಂದೇ ಪರಿಗಣಿಸಲ್ಪಟ್ಟಿದ್ದ ಕೆಲವರಿಗಂತೂ ಇದು ತೀವ್ರ ಹಿನ್ನಡೆ ತರಲಿದೆ.
ಏಕೆ ಹೀಗೆ?
ಲೋಕಸಭೆ ಚುನಾವಣೆಗೂ ಮುನ್ನ ಯುವ ಮಂತ್ರವನ್ನು ಪಠಿಸುತ್ತಿದ್ದ ಮೋದಿಯವರು ಅಧಿಕಾರಕ್ಕೆ ಬಂದ ನಂತರ ತಮ್ಮ ಮಾತಿನಂತೆ ಯುವ ಜನರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದರು. ಕೇಂದ್ರ ಸಚಿವ ಸಂಪುಟ ರಚಿಸುವಾಗಲೂ ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಷಿ ಅವರನ್ನು ಹೊರಗಿಡಲಾಯಿತು.
ಬದಲಾವಣೆಯ ಗಾಳಿ
ಇತ್ತೀಚೆಗೆ ಬಿಜೆಪಿಗೆ ಹೊಸ ರಾಷ್ಟ್ರೀಯ ಅಧ್ಯಶ್ರರಾಗಿ ಆಯ್ಕೆಯಾದ ಅಮಿತ್ ಶಾ ಅಧಿಕಾರ ಸ್ವೀಕರಿದ ಮರುದಿನವೇ ಬಿಜೆಪಿ ಪದಾಧಿಕಾರಿಗಳ ಹೊಸ ತಂಡ ಕಟ್ಟಿದರು. ಇದೀಗ ಸಂಸದೀಯ ಸಮಿತಿಯ ಪುನಾರಚನೆ ಗುರುತರ ಜವಾಬ್ದಾರಿಯೂ ಈಗ ಅಮಿತ್ ಶಾ ಅವರ ಮೇಲಿದೆ. ಇದು ನಿಜಕ್ಕೂ ಅವರ ಪಾಲಿಗಿರುವ ದೊಡ್ಡ ಸವಾಲು. ಹಾಗಾಗಿ, ಶೀಘ್ರದಲ್ಲೇ ಪುನಾರಚನೆಗಳಲ್ಲಿರುವ ಸಂಸದೀಯ ಸಮಿತಿಯಲ್ಲಿ ಯಾರು ಸೇರ್ಪಡೆಗೊಳ್ಳಲಿದ್ದಾರೆ ಎನ್ನುವುದಕ್ಕಿಂತ ಯಾರು ಯಾರು ಹೊರಗುಳಿಯಲಿದ್ದಾರೆ ಎನ್ನುವುದೇ ಹೆಚ್ಚು ಕುತೂಹಲದ ವಿಷಯವಾಗಿದೆ.
ಮುಂದೇನು?
ಸಂಸದೀಯ ಮಂಡಳಿಯಿಂದ ಹಿರಿಯರನ್ನು ಹೊರಗಿಡುವ ಚಿಂತನೆಗೆ ಆರ್ಎಸ್ಎಸ್ ವಿರೋಧಿಸಿದೆ. ಹಿರಿಯರನ್ನು ದೂರ ಇಡಲಾಗುವುದು ಒಳ್ಳೆಯ ಸಂಸ್ಕೃತಿ ಅಲ್ಲ ಎಂದು ಹೇಳಿದೆ. ಹೀಗಾಗಿ ಇದು ಕಾರ್ಯರೂಪಕ್ಕೆ ಬರಲಿದೆಯೇ ಎಂಬ ಬಗ್ಗೆ ಅನುಮಾನಗಳಿವೆ.
ಸಮಿತಿ ಪ್ರಾಮುಖ್ಯತೆ
ಪಕ್ಷವೊಂದರ ಆಡಳಿತ ಚುಕ್ಕಾಣಿ ಹಿಡಿಯುವ ಮೂಲಕ ಪ್ರಮುಖ ನಿರ್ಧಾರ ಕೈಗೊಳ್ಳುವ ಮಹತ್ತರ ಜವಾಬ್ದಾರಿ ಸಂಸದೀಯ ಸಮಿತಿಗಿರುತ್ತದೆ. ಆಯಾ ಪಕ್ಷದ ರಾಷ್ಟ್ರೀಯ ಸಮಿತಿಯ ಪದಾಧಿಕಾರಿಗಳು ಸೇರಿ, ಸಂಸದೀಯ ಸಮಿತಿಯನ್ನು ರಚಿಸುತ್ತಾರೆ. ಸಂಸದೀಯ ಸಮಿತಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಸೇರಿ ಲೋಸಭಎಯಲ್ಲಿ ಪಕ್ಷದ ರಾಷ್ಚ್ರೀಯ ಅಧ್ಯಕ್ಷರೇ ಈ ಸಮಿತಿಗೂ ಅಧ್ಯಕ್ಷರಾಗಿರುತ್ತಾರೆ.
ಹಾಲಿ ಸಮಿತಿ ಸದಸ್ಯರು
ರಾಜನಾಥ್ ಸಿಂಗ್-ಅಧ್ಯಕ್ಷರು
ಅನಂತಕುಮಾರ್-ಕಾರ್ಯದರ್ಶಿ
ಅಟಲ್ ಬಿಹಾರಿ ವಾಜಪೇಯಿ
ಎಲ್.ಕೆ.ಅಡ್ವಾಣಿ
ನರೇಂದ್ರ ಮೋದಿ
ಅರುಣ್ ಜೇಟ್ಲಿ
ಸುಷ್ಮಾ ಸ್ವರಾಜ್
ನಿತಿನ್ ಗಡ್ಕರಿ
ವೆಂಕಯ್ಯ ನಾಯ್ಡು
ಥಾವರ್ ಚಂದ್ರ ಗೆಹ್ಲೂಟ್
ಮುರಳಿ ಮನೋಹರ್ ಜೋಷಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


