ಅಮೇರಿಕಾದಲ್ಲಿ ಆಕಸ್ಮಿಕವಾಗಿ ಗುಂಡು ಹಾರಿಸಿದ 2 ವರ್ಷದ ಮಗು, ತಾಯಿ ಸಾವು

ವಾಲ್ಮಾರ್ಟ್ ಅಂಗಡಿಯಲ್ಲಿ ಎರಡು ವರ್ಷದ ಮಗು ತನ್ನ ತಾಯಿಯ ಬ್ಯಾಗಿನಿಂದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೇಡೆನ್: ವಾಲ್ಮಾರ್ಟ್ ಅಂಗಡಿಯಲ್ಲಿ ಎರಡು ವರ್ಷದ ಮಗು ತನ್ನ ತಾಯಿಯ ಬ್ಯಾಗಿನಿಂದ ರಿವಾಲ್ವರ್ ತೆಗೆದು ಆಕಸ್ಮಿಕವಾಗಿ ಗುಂಡು ಹೊಡೆದು ತಾಯಿ ಮೃತಪಟ್ಟ ಅಚಾತುರ್ಯ ಘಟನೆ ಅಮೇರಿಕಾದ ಉತ್ತರ ಇದಾಹೋ ನಲ್ಲಿ ಮಂಗಳವಾರ ನಡೆದಿದೆ.

ವೆರೋನಿಕ ಜೆ ರೂಟ್ಲೆಜ್ (೨೯) ತನ್ನ ಈ ಎರಡು ವರ್ಷದ ಮಗ ಹಾಗೂ ಇತರ ಮೂರು ಮಕ್ಕಳೊಂದಿಗೆ ಶಾಪಿಂಗ್ ಮಾಡಲು ವಾಲ್ಮಾರ್ಟ್ ಗೆ ಬಂದಿದ್ದರು. ಶಾಪ್ಪ್ಪಿಂಗ್ ತಳ್ಳು ಗಾಡಿಯಲ್ಲಿದ್ದ ಮಗು ತನ್ನ ತಾಯಿಯ ಚೀಲಕ್ಕೆ ಕೈಹಾಕಿ ಗನ್ ತೆಗೆದುಕೊಂಡು ಆಕಸ್ಮಿಕವಾಗಿ ಗುಂಡು ಹಾರಿಸಿದೆ ಎಂದು ಮೂಲಗಳು ತಿಳಿಸಿವೆ. ರೋಟ್ಲೆಜ್ ತನ್ನ ಭದ್ರತೆಗಾಗಿ ಪರವಾನಗಿ ಪಡೆದ ಗನ್ ಒಂದನ್ನು ಯಾವಾಗಲೂ ತಮ್ಮ ಚೀಲದಲ್ಲಿ ಕೊಂಡೊಯ್ಯುತ್ತಿದ್ದರು ಎಂದು ತಿಳಿದುಬಂದಿದೆ.

ಗುಂಡು ಬಿದ್ದ ಕ್ಷಣ ಸ್ಥಳದಲ್ಲೇ ಮಹಿಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸುರಕ್ಷತೆಗಾಗಿ ಬಂದೂಕುಗಳನ್ನು ಲೀಲಾಜಾಲವಾಗಿ ಬಳಸುವ ಅಮೇರಿಕಾ ದೇಶದಲ್ಲಿ ಇಂತಹ ಘಟನೆಗಳು ವಿರಳವೇನಲ್ಲ. ಈ ಹಿಂದೆಯೂ ಏಪ್ರಿಲ್ ನಲ್ಲಿ ಎರಡು ವರ್ಷದ ಮಗುವೊಂದು ಆಕಸ್ಮಿಕವಾಗಿ ಗುಂಡು ಹಾರಿಸಿ ಅವನ ಸೋದರಿ ಮೃತಪಟ್ಟ ಘಟನೆ ವರದಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com