ಪ್ರಧಾನ ಸುದ್ದಿ

ರಾಮದಾಸ್- ಪ್ರೇಮಾಕುಮಾರಿ ದೂರವಾಣಿ ಸಂಭಾಷಣೆ

ರಾಮದಾಸ್- ಪ್ರೇಮಾಕುಮಾರಿ ದೂರವಾಣಿ ಸಂಭಾಷಣೆ
Published On :

ಮಾಜಿ ಸಚಿವ ಎಸ್.ಎ. ರಾಮದಾಸ್ ಹಾಗೂ ಪ್ರೇಮಾಕುಮಾರಿ ಅವರ ದೂರವಾಣಿ ಸಂಭಾಷಣೆಯ ಸಂಕ್ಷಿಪ್ತ ವಿವರ ಹೀಗಿದೆ.

*  ಪ್ರೇಮಾಕುಮಾರಿ- ನಂಗೆ ಏನ್ ಮಾಡ್ತೀರಾ ಹೇಳಿ?

*  ರಾಮದಾಸ್- ನಿಂಗೆ ಏನ್ ಬೇಕೋ ಎಲ್ಲ ಮಾಡ್ತೀನಿ.

*  ಪ್ರೆ- ಎಲ್ಲಾ ಮಾಡ್ತೀನಿ ಅಂದ್ರೆ ಏನರ್ಥ, ಇನ್ಮುಂದೆ ನಂಗೆ ಕೆಲಸ ಮಾಡೋಕೆ ಆಗಲ್ಲ, ನನಗೂ ಮರ್ಯಾದೆ ಇದೆ. ಇವಳು ಈ ಮಟ್ಟಕ್ಕೆ ಇಳಿದ್ಲು ಅಂತ ಕಲೀಗ್ಸ್ ಹತ್ರ ಹೇಳಿಸ್ಕೊಂಡು ಕೆಲಸ ಮಾಡೋಕೆ ಆಗಲ್ಲ.

*  ರಾ- ಅದಕ್ಕೆಲ್ಲ ತಲೆ ಕೆಡಿಸ್ಕೊಳ್ಬೇಡ. ನಾಳೆ ನಾಡಿದ್ದು ನಿಂಗೆ ಒಂದು ನಾಲ್ಕು ಮನೆ ಹುಡುಕ್ಸಿ ಎಲ್ಲಾದ್ರೂ ವ್ಯವಸ್ಥೆ ಮಾಡಿಸ್ತೀನಿ. ಇನ್ನು ಚುನಾವಣೆ ಮುಗಿಯುವವರೆಗೆ, ಚಿನ್ನಾ ನೀ ಹೇಗಿದ್ದೀಯಾ ಅಂತಷ್ಟೇ ಕೇಳ್ಬೇಕು. ನನ್ನ ಕಷ್ಟ ಸುಖ ವಿಚಾರಿಸ್ಬೇಕು. ಆಗಲೇ ನಮ್ಮಿಬ್ಬರ ಸಂಬಂಧ ಚೆನ್ನಾಗಿರುತ್ತೆ. ಉಳ್ದಿರೋದನ್ನ ನಾನು ನೋಡ್ಕೋತಿನಿ. ನಂಗೆ 5 ವರ್ಷಕ್ಕೊಮ್ಮೆ ಚುನಾವಣೆ ಬರತ್ತೆ. ನಾವು ಯುದ್ಧ ರಂಗದಲ್ಲಿ ಇರ್ತೀವಿ, ರಾಜಕೀಯ ಶತ್ರುಗಳು ಪ್ರತಿಯೊಂದಕ್ಕೂ ಕಾಯ್ತಾ ಇರ್ತಾರೆ. ಈ ಸಂದರ್ಭದಲ್ಲಿ ನಿನ್ನ ಮಾತು ಸ್ವಲ್ಪ ಖುಷಿ ಕೊಡತ್ತೆ ಅಂದೆ ಅಷ್ಟೆ.

*  ಪ್ರೆ- ಹಾಗಿದ್ರೆ ನಾನೀಗ ಕೆಲಸಕ್ಕೆ ಹೋಗೋದು ಬೇಡ್ವಾ?

*  ರಾ- ನೋಡು ಪುಟ್ಟಕ್ಕ, ನೀನೆ ಡಿಸೈಡ್ ಮಾಡಿದೀಯಲ್ವಾ ಕೆಲಸಕ್ಕೆ ಹೋಗ್ಬೇಕು ಅಂತ. ಚುನಾವಣೆ ಏನೇನೋ ತಲೆಬಿಸಿ ಇರತ್ತೆ. ಚುನಾವಣೆ ಮುಗಿಯುವವರೆಗೆ ಸುಮ್ನೀರು, ಆಮೇಲೆ ಡೆಪ್ಯುಟೇಷನ್ ಏನೋ ವ್ಯವಸ್ಥೆ ಮಾಡೋಣ.

*  ಪ್ರೆ- ನಂಗೆ ಅಲ್ಲಿ ಟಾರ್ಚರ್ ತಡೆಯೋಕಾಗಲ್ಲ. ನಾನು ಹೀಗೆ ಇರ್ಬೇಕು ಅನ್ನೋದು ನಿಮ್ಮ ಇಂಟೆನ್ಷನ್ ಅಲ್ವಾ? ನಾನು ಇದೇ ರೀತಿ ಲೈಫ್ ಲೀಡ್ ಮಾಡ್ಬೇಕು, ನಾನು ಎಲ್ಲೂ ಸ್ಟೇಬಲ್ ಆಗಿ ನಿಂತ್ಕೋಬಾರ್ದು ಒಂದು ರೀತಿಯಲ್ಲಿ.

*  ರಾ- ಈ ಟೈಮ್‌ನಲ್ಲಿ ನಿನ್ನ ಕೋ-ಆಪರೇಷನ್ ಬಹಳ ಅವಶ್ಯ. ನನ್ನ ಚುನಾವಣೆ, ಕಷ್ಟ ಕಾಲದಲ್ಲಿ ವಿಚಾರಿಸ್ಕೊಂಡೇ ಅಂತ ನಂಗೂ ಸಮಾಧಾನ ಇರತ್ತೆ ತಾನೆ?

*  ಪ್ರೆ- ನಾನು ಸಂತೋಷದಿಂದಿರೋಕೆ ಇಟ್ಟಿದೀರಾ ನೀವು ಹೋಗ್ಲಿ? ಪ್ರತಿ ದಿನ ನಾನು ನರಕದಲ್ಲಿ ಸಾಯ್ಬೇಕು.

*  ರಾ- ನೀನು ಹೀಗೆ ನಡೆದ್ಕೋಳ್ಳೋದಾ? ಜೀವನ ತುಂಬಾ ಸಂತೋಷವಾಗಿ ಇರ್ಬೇಕು ಅಂದ್ರೆ ನನ್ನ ಕಷ್ಟ ಕಾಲದಲ್ಲಿ ನೀನು ಸಹಕರಿಸ್ಬೇಕು. ನಂತರ ಎಲ್ಲ ಮಾಡ್ತೀನಿ.

*  ಪ್ರೆ- ಏನ್ ಮಾಡ್ತೀರಾ ನೀವು, ಹೆಚ್ಚೆಂದ್ರೆ ಒಂದು ಮನೆ ಕೊಡಿಸ್ಬಹುದು. ಅದರ ಆಚೆಗೆ ನನ್ನ ಲೈಫ್ ಸೆಟ್ಲ್ ಮಾಡಬೇಕು ಅನ್ನೋದು ಇಲ್ಲ ನಿಮಗೆ. ಕಡ್ಡಿ ಮುರ್ದಾಂಗೆ ಸಂಬಂಧ ಕಡ್ಕೋಬೇಕು ಅಂದ್ರೆ ಅದನ್ನು ಮಾಡ್ಬಿಡಿ.

*  ರಾ- ನಿನಗೆ ನನ್ನ ಪರಿಸ್ಥಿತಿ ಅರ್ಥ ಆಗ್ತಿಲ್ಲ. ನೀನು ಏನೆಲ್ಲ ನೆಗೆಟಿವ್ ಮಾತಾಡಕೆ ಹೋಗ್ಬೇಡ. ನಾನು ಕಷ್ಟ ಕಾಲದಲ್ಲಿದೀನಿ. ಕಷ್ಟ ಕಾಲ ಅಂದ್ರೆ ಚುನಾವಣೆ ಯುದ್ಧ ರಂಗದಲ್ಲಿದ್ದೀನಿ. ಹೇಗಿದಿರಾ ಅಂತ ಎರಡು ನಿಮಿಷ ಮಾತಾಡಿ ಬಿಟ್ಬಿಡು ಈಗ. ಆದರೆ ಪ್ರತಿ ಸರಿ ಫೋನ್ ಮಾಡಿದಾಗ ಇದೇ ಹೇಳಿದ್ರೆ ತಲೆ ಕೆಟ್ಟೋಗತ್ತೆ.

*  ಪ್ರೆ- ಏನ್ ತಲೆ ಕೆಡುತ್ತೆ ನಿಮಗೆ? ನನ್ನ ಜೀವನ ಹಾಳಾಗಿ ಆಯ್ತಲ್ವಾ. ಐದು ವರ್ಷದಿಂದ ಹೀಗೆ ಮಾಡ್ಕೊಂಡು ನನ್ನ ಬೀದಿಗೆ ಬಿಡ್ಬೇಕು ಅಂತಿದೀರಾ ಏನ್ ಕತೆ? ಮದುವೆನೂ ಆಗದೆ ಬೀದಿಗೆ ಬಿಟ್ರಲ್ಲಾ, ಸಮಾಜದಲ್ಲಿ ನಾನು ಯಾವ ರೈಟ್ಸ್‌ನಲ್ಲಿ ಓಡಾಡ್ಲಿ?

*  ರಾ- ಈಗ ಮಾತಾಡ್ಬೇಡ, ನನ್ನ ಮನಸು ಕೆಟ್ಟೋಗತ್ತೆ ಮತ್ತೆ.

*  ಪ್ರೆ- ನನ್ನನ ಸಾಯಿಸ್ಬೇಕು ಅನ್ನೋದೆ ನಿಮ್ಮ ಆಲೋಚನೆ ತಾನೆ. ರಿಲೇಷನ್‌ಶಿಪ್ ಬೇಡ ಅಂತಾಗಿದ್ರೆ ಬಿಡಬೇಕಿತ್ತು, ಅದನ್ನು ಬಿಟ್ಟು ನನ್ನ ಸಾಯಿಸೋ ಪ್ರಯತ್ನ ಏಕೆ ಮಾಡ್ಬೇಕಿತ್ತು. ಬೇರೆಯವರೆಲ್ಲ ಕೇಳಿ ಎಲ್ಲ ಪಡ್ಕೊಂಡ್ರು. ಆದರೆ ನಾನು ಏನು ಕೇಳದೆ ಸುಮ್ನಾದೆ.

*  ರಾ- ಕೇಳದೆ ಇರೋದಕ್ಕೆ ನನಗೆ ಸಂತೋಷವಿದೆ. ಆದರೆ ಎಲ್ಲ ಕೊಡ್ತೀನಿ, ಸದ್ಯ ಈಗ ಬಾಯಿ ಮುಚ್ಚಿಕೊಂಡಿರು.

*  ಪ್ರೆ- ನಾನೇಕೆ ಬಾಯಿ ಮುಚ್ಕೋಬೇಕು. ನಂಗೂ ಎಲ್ಲ ಬೇಕು, ನಾನು ಮನುಷ್ಯ. ಸಿಟ್ಟು ಮಾಡ್ಬೇಡಿ, ನಂದು ಯಂಗ್ ಬ್ಲಡ್ ಏನು ಬೇಕಾದ್ರೂ ಮಾಡಬಹುದು, ಆದರೆ ಇಷ್ಟು ದಿನ ಸಹಿಸ್ಕೊಂಡು ಬಂದೆ. ಪ್ರೀತಿ ಮಾಡಿ ಮರ್ಯಾದೆಯಿಂದ ನಡೆಸ್ಕೊಂಡಿದ್ರೆ ಯಾರೂ ಏನು ಕೇಳ್ತಿರ್ಲಿಲ್ಲ. ಮರ್ಯಾದೆ ಕಳ್ದಿದೀರಾ. ಅದಕ್ಕೆ ಕೇಳ್ತಾ ಇರೋದು. ಕಳೆದ ಮೂರೂವರೆ ವರ್ಷ ಏನಾದ್ರೂ ಕೇಳಿದ್ನಾ? ಹೇಗೋ ಜೀವನ ನಡೆಸ್ಕೊಂಡು ಹೋಗ್ತಿದ್ದೆ. ಈಗ ತಲೆ ಎತ್ಕೊಂಡು ತಿರುಗದ ಪರಿಸ್ಥಿತಿಯಾಗಿದೆ. ಏನೋ ಒಂದು ಸೆಟ್‌ರೈಟ್ ಮಾಡಿ, ಇಲ್ದೇ ಇದ್ರೆ ನೋಡಿ.

*  ರಾ- ನೀನು ದಿನಾ ಹೀಗೆ ಹೆರಾಸ್ಮೆಂಟ್ ಮಾಡ್ತಿದ್ರೆ ಕಷ್ಟ ಆಗತ್ತೆ. ಮೆಡಿಕಲ್ ಲೀವ್ ಹಾಕ್ಬಿಡು.

*  ಪ್ರೆ- ನಾನು ಕೆಲ್ಸಕ್ಕೆ ಹೋಗೊಲ್ಲ, ಐ ಆ್ಯಮ್ ಡಿಸೈಡೆಡ್. ನಾನು ಹುಚ್ಚಿ ತರಹ ಯಾವಂದೋ ಕೈಕಳಗೆ ಏಕೆ ಕೆಲ್ಸ ಮಾಡ್ಬೇಕು. ಅವನ ಕೈಕೆಳಗೆ ಕೆಲ್ಸ ಮಾಡೋ ದುರ್ಗತಿ ಬಂದಿಲ್ಲ. ನಾನು ಯಾವ ಮೆಡಿಕಲ್ ಲೀವ್ ಕೂಡ ಹಾಕಲ್ಲ. ನಂಗೆ ಲೈಫ್‌ನಲ್ಲಿ ಸೆಟ್ಲ್ ಆಗ್ಬೇಕು ಅಷ್ಟೆ. ಇಲ್ಲಾ ಅಂದ್ರೆ ನಾನು ಏನು ಮಾಡ್ಬೇಕೋ ಅದನ್ನು ಮಾಡ್ತೀನಿ, ನೀವೇನು ಮಾಡ್ತಿರೋ ಅದನ್ನು ಮಾಡಿ. ಇಲ್ಲಾಂದ್ರೆ ನಾನು ಹುಚ್ಚಿನೇ, ಹೆಣ್ಮಕ್ಕಳನ್ನ ಒಳ್ಳೇ ರೀತಿಲಿ ನಡೆಸ್ಕೊಂಡ್ರೆ ಚೆನ್ನಾಗಿರತ್ತೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.