ಪ್ರಧಾನ ಸುದ್ದಿ

'ಸಾಲುಮರದ ತಿಮ್ಮಕ್ಕನ ನೆರಳು'

Published On :

ಭ್ರಷ್ಟಾಚಾರದ ಕೂಪ ಎಂದು ಆಪಾದಿಸಲಾಗಿರುವ ನರೇಗಾ ಯೋಜನೆಯಲ್ಲಿ ಸಾಲುಮರದ ತಿಮ್ಮಕ್ಕ ಅವರನ್ನು ಸೇರಿಸಲಾಗಿದೆ. ತಿಮ್ಮಕ್ಕ ಅವರೇನೂ ಈ ಯೋಜನೆಯಲ್ಲಿ ಫಲಾನುಭವಿ ಅಲ್ಲ. ಆದರೆ, ಅವರ ಹೆಸರಿನಲ್ಲಿ ಗಿಡ ನೆಡಲು ಯೋಜನೆ ರೂಪಿಸಿ, ಅದಕ್ಕೆ ನರೇಗಾದಲ್ಲಿ ಹಣ ಪಡೆಯಲು ಸರ್ಕಾರ ಯೋಜಿಸಿದೆ. ಸಾಲುಮರದ ತಿಮ್ಮಕ್ಕನ ಪ್ರೇರಣೆಯಿಂದ ರಸ್ತೆಯುದ್ದಕ್ಕೂ ಸಾಲುಸಾಲು ಮರಗಳನ್ನು ನೆಟ್ಟು ಅದರ ನೆರಳು ನೀಡಿ, ಪರಿಸರವನ್ನೂ ಕಾಪಾಡಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ 'ಸಾಲುಮರದ ತಿಮ್ಮಕ್ಕನ ನೆರಳು' ಎಂದೇ ಯೋಜನೆಗೆ ಹೆಸರಿಟ್ಟಿದ್ದಾರೆ. ಉದ್ಯೋಗ  ಖಾತರಿ ಯೋಜನೆಯಲ್ಲಿ ಈ ಯೋಜನೆ ಅನುಷ್ಠಾನ ಮಾಡಿ, 3000 ಕಿ.ಮೀ. ರಸ್ತೆಯ ಅಕ್ಕಪಕ್ಕ ಗಿಡಗಳನ್ನು ನೆಡಲು ಹಾಗೂ 5 ವರ್ಷ ಅವುಗಳ ನಿರ್ವಹಣೆಗೆ ಕ್ರಮ ಕೈಗೊಳ್ಳುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.

25 ಹೊಸ ಗರಡಿ ಮನೆ
ಬಿಜೆಪಿ ಸರ್ಕಾರ ಇದ್ದಾಗ ವಿಧಾನಸೌಧದಲ್ಲಿಯೇ ಸಿದ್ದರಾಮಯ್ಯ ಅವರು ತೋಳುತಟ್ಟಿದ್ದು, ಪೊಲೀಸ್ ಕಮಿಷನರ್ ಅವರನ್ನು ದೂಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಸಿದ್ದರಾಮಯ್ಯನವರಷ್ಟೇ ನಮ್ಮ ಯುವಕರೂ ಗಟ್ಟಿಮುಟ್ಟಾಗಿರಬೇಕು, ತೋಳುತಟ್ಟುವಂತಿರಬೇಕು ಎಂಬ ಕಾರಣಕ್ಕೆ ರಾಜ್ಯಾದ್ಯಂತ ಗರಡಿಮನೆಗಳ ಪುನಶ್ಚೇತನ ಮತ್ತು 25 ಹೊಸ ಗರಡಿ ಮನೆಗಳ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಬಜೆಟ್‌ನಲ್ಲಿ 1 ಗರಡಿ ಮನೆಗೆ 5 ಲಕ್ಷ ನೀಡಲು ನಿರ್ಧರಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.