ಪ್ರಧಾನ ಸುದ್ದಿ

ಪಶ್ಚಿಮ ಘಟ್ಟದ ಕಾಡಂಚಲ್ಲಿ ಮತ್ತೆ ನಕ್ಸಲರು ಸಕ್ರಿಯ?

Published On :

ಸುಬ್ರಹ್ಮಣ್ಯ: ಪಶ್ಚಿಮ ಘಟ್ಟದ ಕಾಡಂಚಿನಲ್ಲಿ ಕಳೆದ ವರ್ಷ ಕಾಣಿಸಿಕೊಂಡಿದ್ದ ನಕ್ಸಲ್ ತಂಡ ಮತ್ತೆ ಈ ಭಾಗದಲ್ಲಿ ಸಕ್ರಿಯವಾಗಿರುವ ಶಂಕೆ ಮೂಡಿದ್ದು, ಕೂಂಬಿಂಗ್ ಮತ್ತೆ ಚುರುಕುಗೊಂಡಿದೆ. ಅಷ್ಟೇ ಅಲ್ಲ, ನಕ್ಸಲ್ ತಂಡ ಕಾಣಿಸಿದ್ದರಿಂದ ಸ್ಥಳೀಯರೂ ಆತಂಕಗೊಂಡಿದ್ದಾರೆ.
ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿ ಭಾಗ ಸುಳ್ಯ ತಾಲೂಕಿನ ಕಿರಿಭಾಗ ಮತ್ತು ಕಡಮಕಲ್ಲು ರಕ್ಷಿತಾರಣ್ಯದ ಸುಟ್ಟತ್‌ಮಲೆಯ ಹರಳು ಕಲ್ಲು ದಂಧೆ ನಡೆಯುತ್ತಿದ್ದ ಜಾಗದ ಸಮೀಪ ಮಡಿಕೇರಿ ಅರಣ್ಯ ವ್ಯಾಪ್ತಿಗೆ ಸೇರಿದ ಅರಣ್ಯದಲ್ಲಿ ಶುಕ್ರವಾರ ಗಸ್ತಿನಲ್ಲಿದ್ದ ಸುಳ್ಯ- ಸುಬ್ರಹ್ಮಣ್ಯ ರೇಂಜ್‌ನ ಅರಣ್ಯ ಸಿಬ್ಬಂದಿಗೆ 6 ಮಂದಿ ಬಂದೂಕುಧಾರಿಗಳ ತಂಡ ಎದುರಾಗಿದೆ. ತಂಡದಲ್ಲಿದ್ದ ಆರು ಮಂದಿಯಲ್ಲಿ ಇಬ್ಬರು ಮಹಿಳೆಯರಿದ್ದು, ಅವರು ನಕ್ಸಲರು ಎಂದು ಅರಣ್ಯ ಸಿಬ್ಬಂದಿ ಹೇಳಿದ್ದಾರೆ.
ಆದರೆ ಇವರು ನಿಜವಾಗಿಯೂ ನಕ್ಸಲರೇ ಅಥವಾ ನಕ್ಸಲ್ ವೇಷ ಧರಿಸಿದ ಹರಳುಕಲ್ಲು ದಂಧೆಯಲ್ಲಿ ತೊಡಗಿರುವ ತಂಡವೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಅರಣ್ಯ ಸಿಬ್ಬಂದಿ ಹೇಳುವ ಪ್ರಕಾರ ಇದು ನಕ್ಸಲ್ ತಂಡವೇ ಆಗಿರುವ ಸಾಧ್ಯತೆಗಳು ಹೆಚ್ಚಿವೆ. ನಕ್ಸಲ್ ತಂಡ ಕಂಡು ಬಂದ ಹಿನ್ನೆಲೆಯಲ್ಲಿ ಈ ಅರಣ್ಯದ ಮೂರು ಕಡೆಗಳಲ್ಲಿ ಕೂಂಬಿಂಗ್ ಆರಂಭಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.