ಸಮಾಜದ ನೋವಿಗೆ ಕಾವ್ಯ ದನಿಯಾಗಬೇಕು: ಎಚ್ಎಸ್ವಿ
ಮಡಿಕೇರಿ (ಭಾರತಿಸುತ ವೇದಿಕೆ): ಕವಿಯಾದವರು ತಮ್ಮ ನೋವಿನ ಜೊತೆಗೆ ಸಮಾಜದ ನೋವಿಗೂ ದನಿಯಾಗಬೇಕು. ಯಾವ ಕವಿಗೆ ಖಾಸಗಿ ನೋವನ್ನು ಹಂಚಿಕೊಳ್ಳುವ ಶಕ್ತಿ ಇರುವುದೋ ಆ ಕವಿ ಇತರರ ನೋವನ್ನೂ ಸಶಕ್ತವಾಗಿ ದಾಖಲಿಸಬಲ್ಲ ಎಂದು ಹಿರಿಯ ಕವಿ ಎಚ್.ಎಸ್. ವೆಂಕಟೇಶ ಮೂರ್ತಿ ಹೇಳಿದರು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೂರನೇ ದಿನವಾದ ಗುರುವಾರ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕವಿತೆ ಎನ್ನುವುದು ಭೂಮಿಯ ಹಾಗೆ. ಅದು ತನ್ನ ಸುತ್ತ ತಿರುಗುತ್ತ ಸೂರ್ಯನ ಸುತ್ತಲೂ ಸುತ್ತವುದು. ಕವಿಗೂ ಇತರರ ಹಾಗೆ ಸಮಸ್ಯೆಗಳು, ಕಷ್ಟಗಳು ಇರುತ್ತವೆ. ಆತನ ಅಭಿವ್ಯಕ್ತಿ ಮುಂದುವರಿದು ಸಮಾಜದ ಧ್ವನಿಯಾಗಬೇಕು ಎಂದರು.
ಎರಡು ಮೂರು ದಶಕಗಳ ಹಿಂದೆ ಕವಿಗಳಿಗಿಲ್ಲದ ಆತ್ಮಸ್ಥೈರ್ಯ ಇಂದಿನ ಕವಿಗಳಲ್ಲಿದೆ. ನಿಷ್ಠುರವಾಗಿ ಯಾರಿಗೂ ಅಂಜದೇ ಹೇಳಬಲ್ಲೆ ಎಂಬ ಭಾವವಿದೆ. ಇಲ್ಲಿ ವಾಚಿಸಿದ ಕವನಗಳಲ್ಲಿ ವೈಚಾರಿಕತೆ ಇದೆ, ಉದ್ಘೋಷದ ಮಾತುಗಳಿವೆ. ಆದರೆ, ಉದ್ಘೋಷವೇ ಕಾವ್ಯವಾಗುವುದಿಲ್ಲ. ಈ ಎಲ್ಲ ಉದ್ಘೋಷಗಳ ನಡುವೆ ತನ್ನೊಳಗಿನ ಪಿಸುಧ್ವನಿಯನ್ನು ಆಲಿಸುವುದು ಕವಿಗೆ ಸಾಧ್ಯವಾಗಬೇಕೆಂದರು.
ಕವಿ- ಕಾವ್ಯ ರಹಸ್ಯ ಬಿಚ್ಚಿಟ್ಟ ಕವಿ: ಕವಿಗಳ ಮುಖ್ಯ ಸಮಸ್ಯೆ ಎಂದರೆ ಮಾತಿನಿಂದ ತನ್ನ ಕವಿತೆಯನ್ನು ಬೇರ್ಪಡಿಸುವುದು. ಅದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಮಾತನ್ನು ಬಳಸಿ ಮಾತಾಗದೇ, ಮಾತೆಯಾಗುವ ಸಾಧ್ಯತೆಯೇ ಕಾವ್ಯ ಎಂದು ಕಾವ್ಯ ರಹಸ್ಯವನ್ನು ಅವರು ಬಿಚ್ಚಿಟ್ಟರು. ಕವಿಯ ಮಹತ್ವ ಇರುವುದು ಇನ್ನೊಬ್ಬರಂತೆ ಹಾಡುವುದರಲ್ಲಿ ಅಲ್ಲ, ತನ್ನ ಹಾಡನ್ನು ತಾನೇ ಹಾಡುವುದರಲ್ಲಿ ಎಂದು ಕವಿ ರಹಸ್ಯವನ್ನೂ ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

