ಚಿಂತಕರ ಗೇಲಿ ಮೂಲಕ ಶೋಷಣೆಗೆ ಪ್ರೇರಣೆ: ಕಾಯ್ಕಿಣಿ
ಮಂಗಳೂರು: ಚಿಂತಕರು, ಬುದ್ಧಿಜೀವಿಗಳನ್ನು ಗೇಲಿ ಮಾಡುವ ಮೂಲಕ ಮೌಢ್ಯ ಮತ್ತು ಶೋಷಣೆಗೆ ಪ್ರೇರಣೆ ನೀಡಲಾಗುತ್ತಿದೆ ಎಂದು ಸಾಹಿತಿ ಜಯಂತ್ ಕಾಯ್ಕಿಣಿ ಹೇಳಿದ್ದಾರೆ.
ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ ವತಿಯಿಂದ ಬುಧವಾರ ನಗರದ ಪುರಭವನದಲ್ಲಿ ನಡೆದ ಸಂದೇಶ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಅಭಿನಂದನೆ ಭಾಷಣ ಮಾಡಿದರು. ವೈಚಾರಿಕತೆ, ಭೌತಿಕತೆ ಗೇಲಿ ಮಾಡುವ ಮಟ್ಟಕ್ಕೆ ಸಮಾಜ ಬದಲಾಗಿದ್ದು, ಇದನ್ನೇ ರಾಜಕೀಯವೆಂದು ಭಾವಿಸಲಾಗಿದೆ. ಶುಷ್ಕ ಚಿಂತನೆಶೀಲತೆ ಬಿಟ್ಟು ಮೌಲ್ಯಯುತ ಚಿಂತನೆಗೆ ಅವಕಾಶ ಮಾಡಿಕೊಟ್ಟಲ್ಲಿ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದರು. ಇಂದು ಪ್ರಶಸ್ತಿಯ ಉದ್ದೇಶ ಬದಲಾಗಿದ್ದು, ಅದಕ್ಕಾಗಿ ಅರ್ಜಿ ಸಲ್ಲಿಸುವ ಕಾಲ ಬಂದಿದೆ. ಈ ಮೂಲಕ ಸಾಧಕರಿಗೆ ತಮ್ಮ ಕೆಲಸದ ಉದ್ದೇಶ ಇದೇನಾ ಎಂಬ ಭಾವನೆ ಮೂಡಿದೆ. ಈ ಮೂಲಕ ಮೌಲ್ಯಗಳನ್ನು ಜಂಗಮಗೊಳಿಸುವ ಪರಿಸ್ಥಿತಿ ಉಂಟಾಗಿದೆ. ಪ್ರಶಸ್ತಿ ಯಾವತ್ತಿಗೂ ಸಾಧನೆಯ ಹಿಂದಿನ ಏಕಾಂಗಿ ಹೋರಾಟಕ್ಕೆ ರೂಪಕ ಎಂದರು.
ಪುರಸ್ಕೃತರು: ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ ಬರಹಗಾರ್ತಿ ವೈದೇಹಿ, ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿ ಸಿರಿಲ್ ಜಿ ಸಿಕ್ವೇರಾ, ಸಂದೇಶ ತುಳು ಸಾಹಿತ್ಯ ಪ್ರಶಸ್ತಿ ಲಲಿತ ರೈ, ಸಂದೇಶ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಸಿ. ಐರಿನ್ ಮಸ್ಕರೇನಸ್, ಸಂದೇಶ ಚಲನಚಿತ್ರ ಪ್ರಶಸ್ತಿ ಪಿ. ಶೇಷಾದ್ರಿ, ಸಂದೇಶ ಪತ್ರಿಕೋದ್ಯಮ ಪ್ರಶಸ್ತಿ ಅಬ್ದುಲ್ ರಶೀದ್, ಸಂದೇಶ ಕಲಾ ಪ್ರಶಸ್ತಿ ಬಿ.ಕೆ.ಎಸ್. ವರ್ಮಾ, ಸಂದೇಶ ಮಾಧ್ಯಮ ಶಿಕ್ಷಣ ಪ್ರಶಸ್ತಿ ಡಾ.ಬಿ.ವಿ. ರಾಜಾರಾಂ, ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ ಲೊರೆನ್ಸ್ ಸಲ್ಡಾನ್ಹಾ ಹಾಗೂ ಸಂದೇಶ ವಿಶೇಷ ಪ್ರಶಸ್ತಿ ವೈಟ್ ಡೊವ್ಸ್ ಟ್ರಸ್ಟ್ ನಿರ್ದೇಶಕಿ ಕೊರಿನ್ ರಸ್ಕಿನ್ ಪ್ರಶಸ್ತಿ ಪಡೆದುಕೊಂಡರು. ಸಂದೇಶ ಪ್ರಶಸ್ತಿ ಆಯ್ಕೆ ಸಮಿತಿಯ ಡಾ.ನಾ. ಡಿಸೋಜ ಅವರನ್ನು ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

