ಪ್ರಧಾನ ಸುದ್ದಿ

ಅಧಿವೇಶನ ವೇಳಾಪಟ್ಟಿಗೆ 'ಬ್ರೇಕ್'

Published On :

ಕ.ಪ್ರ.ವಾರ್ತೆ    ಬೆಂಗಳೂರು    ಜ. 21
 ವೇಳಾಪಟ್ಟಿಗೆ ತಕ್ಕಂತೆ ನಡೆಯುತ್ತಿಲ್ಲ.
ಹೌದು, ಸರ್ಕಾರದ ಸೂಚನೆಯಂತೆ ವಿಧಾನಸಭೆ ಅಧ್ಯಕ್ಷರು ಮತ್ತು ವಿಧಾನ ಪರಿಷತ್ ಸಭಾಪತಿಗಳು ಸೇರಿ 60 ದಿನಗಳ ಅಧಿವೇಶನಕ್ಕೆ ವೇಳಾಪಟ್ಟಿ ಸಿದ್ಧಪಡಿಸಿದ್ದಾರೆ. ಅದರಂತೆ ವರ್ಷದ ಮೊದಲ ಅಧಿವೇಶನ (ರಾಜ್ಯಪಾಲರ ಭಾಷಣ, ವಂದನಾ ನಿರ್ಣಯದ ಮೇಲಿನ ಚರ್ಚೆ) 10 ದಿನ ನಡೆಯಬೇಕು. ಆದರೆ, ಈ ಬಾರಿ ಅಧಿವೇಶನ ನಡೆಯುವುದು ಕೇವಲ ಏಳು ದಿನ ಮಾತ್ರ.
ವೇಳಾಪಟ್ಟಿ ಏನು?: ವರ್ಷದ ಮೊದಲ ಅಧಿವೇಶನ ಜ. 20ರಿಂದ 31 (10 ದಿನ), ಬಜೆಟ್ ಅಧಿವೇಶನ- ಫೆ. 17ರಿಂದ ಮಾ. 7 (15 ದಿನ), ಮಳೆಗಾಲದ ಅಧಿವೇಶನ ಜು. 7ರಿಂದ ಆ. 8 (25 ದಿನ), ಬೆಳಗಾವಿ ಅಧಿವೇಶನ ನ. 10ರಿಂದ 27 ರವರೆಗೆ (15 ದಿನ) ನಡೆಸಬೇಕು ಎಂದು ವೇಳಾಪಟ್ಟಿ ಸಿದ್ಧವಾಗಿದೆ.
ಮೊದಲ ಅಧಿವೇಶನ ಏಳು ದಿನ ನಡೆಯುವುದು ಮಾತ್ರವಲ್ಲದೆ ಬಜೆಟ್ ಅಧಿವೇಶನ 15 ದಿನ ನಡೆಯುವುದು ಕೂಡ ಕಷ್ಟಸಾಧ್ಯ. ಏಕೆಂದರೆ ಮಾರ್ಚ್ ಮೊದಲ ವಾರದಲ್ಲಿ ಲೋಕಸಭೆ ಚುನಾವಣೆಗಳು ಘೋಷಣೆಯಾಗಲಿರುವುದರಿಂದ ಫೆಬ್ರವರಿ ಅಂತ್ಯದೊಳಗೆ ಬಜೆಟ್ ಮಂಡಿಸಿ ಲೇಖಾನುದಾನಕ್ಕೆ ಅನುಮೋದನೆ ಪಡೆಯಬೇಕಾಗುತ್ತದೆ.
ಇನ್ನೊಂದೆಡೆ ಒಂದು ಅಧಿವೇಶನದಿಂದ ಮತ್ತೊಂದು ಅಧಿವೇಶನದ ಮಧ್ಯೆ 15 ದಿನ ಕಾಲಾವಕಾಶ ಬೇಕು. ಜ. 30ರಂದು ಮೊದಲ ಅಧಿವೇಶನ ಮುಗಿಯುವುದರಿಂದ ಬಜೆಟ್ ಅಧಿವೇಶನವನ್ನು ಫೆ. 15ರ ನಂತರವೇ ಕರೆಯಬೇಕು. ಫೆಬ್ರವರಿ ಅಂತ್ಯದೊಳಗೆ ಈ ಅಧಿವೇಶನವನ್ನೂ ಮುಗಿಸಬೇಕಾಗಿರುವುದರಿಂದ ಅದು ಕೂಡ 10 ದಿನಗಳ ಕಾಲ ಮಾತ್ರ ನಡೆಯಲಿದೆ ಎಂದು ಹೇಳಲಾಗುತ್ತದೆ.
ಇನ್ನು ಬೆಳಗಾವಿಯಲ್ಲಿ ನಡೆಯುವ ಅಧಿವೇಶನವನ್ನು 15 ದಿನಕ್ಕಿಂತ ಹೆಚ್ಚು ಕಾಲ ವಿಸ್ತರಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವಿಧಾನಸಭೆ ಮತ್ತು ಪರಿಷತ್ ಸಚಿವಾಲಯದಿಂದ ವ್ಯಕ್ತವಾಗಿದೆ. ಹೀಗಾಗಿ ಈ ವರ್ಷ 60 ದಿನ ಅಧಿವೇಶನ ನಡೆಸುವುದಾದರೆ ಮಳೆಗಾಲದ ಅಧಿವೇಶನವನ್ನು 35 ದಿನಗಳ ಕಾಲ ನಡೆಸಲೇ ಬೇಕು. ಆದರೆ, ಅದು ಕೂಡ ಕಷ್ಟಸಾಧ್ಯ ಎನ್ನಲಾಗುತ್ತಿದ್ದು, ವರ್ಷಕ್ಕೆ 60 ದಿನ ಅಧಿವೇಶನ ನಡೆಸಿಯೇ ತೀರುತ್ತೇವೆ ಎಂಬ ಕಾಂಗ್ರೆಸ್ ಸರ್ಕಾರದ ಘೋಷಣೆ ಮೊದಲ ವರ್ಷ ಈಡೇರುವ ಸಾಧ್ಯತೆ ಕಡಿಮೆ ಎಂಬ ಮಾತು ಕೇಳಿಬರುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.