ಪ್ರಧಾನ ಸುದ್ದಿ

ಕಿರ್ಲೋಸ್ಕರ್ ಕಂಪನಿ ಲಾಕೌಟ್

Published On :

ಹುಬ್ಬಳ್ಳಿ: ಗೋಕುಲ ರಸ್ತೆಯಲ್ಲಿರುವ ಕಿರ್ಲೋಸ್ಕರ್ ಎಲೆಕ್ಟ್ರಿಕಲ್ ಕಂಪನಿ ದಿಢೀರ್ ಉತ್ಪಾದನೆ ಸ್ಥಗಿತಗೊಳಿಸಿದೆ. ಕಂಪನಿ ಈ ನಿರ್ಧಾರದಿಂದ 250 ಆಡಳಿತ ಸಿಬ್ಬಂದಿ, 150 ಕಾರ್ಮಿಕರು ಅತಂತ್ರ ಸ್ಥಿತಿ ತಲುಪಿದ್ದಾರೆ.
ಯಾವುದೇ ನೋಟಿಸ್ ನೀಡದೆ ಏಕಾಏಕಿ ಕಂಪನಿಗೆ ಬೀಗ ಹಾಕಿರುವ ವಿರುದ್ಧ ಸಿಬ್ಬಂದಿ ಹಾಗೂ ಕಾರ್ಮಿಕರು ಮಂಗಳವಾರ ಪ್ರತಿಭಟನೆ ನಡೆಸಿದರೆ, ವೇತನ ಪರಿಷ್ಕರಣೆ ನೆಪವೊಡ್ಡಿ ವಾರದಿಂದ ಸಿಬ್ಬಂದಿ ಉತ್ಪಾದನಾ ಕಾರ್ಯ ಕೈ ಬಿಟ್ಟಿದ್ದರಿಂದ ಕಂಪನಿಗೆ ಬೀಗ ಜಡಿಯುವುದು ಅನಿವಾರ್ಯವಾಯಿತು ಎಂದು ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
ದಿಢೀರ್ ಶಾಕ್: ಎಂದಿನಂತೆ ಸಿಬ್ಬಂದಿ ಹಾಗೂ ಕಾರ್ಮಿಕರು ಕಂಪನಿಗೆ ಬಂದಾಗ ಮುಖ್ಯ ಗೇಟ್ ಬಂದಾಗಿತ್ತು. ಗೇಟ್ನಲ್ಲಿ ಕಂಪನಿ ಕೆಲ ದಿನಗಳ ವರೆಗೆ ಬಂದ್ ಮಾಡಲಾಗಿದೆ ಎಂದು ನೋಟಿಸ್ ಅಂಟಿಸಲಾಗಿತ್ತು.
ವೇತನ ಪರಿಷ್ಕರಣೆ ವಿಷಯವಾಗಿ ನೌಕರರು ಹಾಗೂ ಆಡಳಿತ ಮಂಡಳಿ ವಿರುದ್ಧ ಹಲವು ದಿನಗಳಿಂದ ಹಗ್ಗಜಗ್ಗಾಟ ನಡೆದಿತ್ತು. ಈ ಹಿಂದೆಯೂ ವೇತನ ವಿವಾದ ಎದ್ದಾಗ ಹೊಂದಾಣಿಕೆ ನಡೆದಿತ್ತು. ಈಗ ಮತ್ತೆ ತಿಕ್ಕಾಟ ಆರಂಭವಾದ ಹಿನ್ನೆಲೆಯಲ್ಲಿ ನೌಕರರು ಕಂಪನಿಗೆ ಹಾಜರಾದರೂ ಉತ್ಪಾದನಾ ಕಾರ್ಯವನ್ನು ಕಳೆದೊಂದು ವಾರದಿಂದ ಕೈಬಿಟ್ಟಿದ್ದರು. ಈ ಮಧ್ಯೆ ಸೋಮವಾರ ರಾತ್ರಿ ಕೆಲಸಕ್ಕೆ ಬಂದ ಕಾರ್ಮಿಕರನ್ನು ಭದ್ರತಾ ಸಿಬ್ಬಂದಿ ಹೊರ ಹಾಕಿದ್ದರು. ಕಂಪನಿ ಧೋರಣೆ ಖಂಡಿಸಿ ಕಾರ್ಮಿಕರು ಕಾರ್ಮಿಕ ಇಲಾಖೆಗೆ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.