ಪ್ರಧಾನ ಸುದ್ದಿ

ಕನ್ನಡದಲ್ಲಿನ್ನು ಹೈ ಕಲಾಪ?

ಕನ್ನಡದಲ್ಲಿನ್ನು ಹೈ ಕಲಾಪ?
Published On :

ಬೆಂಗಳೂರು: ರಾಜ್ಯ ಹೈಕೋರ್ಟ್ ನಡಾವಳಿಗಳನ್ನು ಕನ್ನಡದಲ್ಲೇ ನಡೆಸಲು ಕ್ರಮ ತೆಗೆದುಕೊಳ್ಳುವುದೂ ಸೇರಿ ಪ್ರಮುಖ ಆಡಳಿತಾತ್ಮಕ ವಿಚಾರಗಳ ಬಗ್ಗೆ ಗುರುವಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಸಚಿವ ಸಂಪುಟಸಭೆಯಲ್ಲಿ ನಿರ್ಣಯಿಸಲಾಗಿದೆ. ಇಂಥ ಬೇಡಿಕೆ ಹಲವು ವರ್ಷಗಳಿಂದ ಇದೆ. ಇದರಿಂದ ಆಡಳಿತದಲ್ಲಿ ಕನ್ನಡ ತತ್ವ ಸಂಪೂರ್ಣ ಜಾರಿಗೆ ಬಂದಂತಾಗುತ್ತದೆ. ಜತೆಗೆ ಯುವ ವಕೀಲರು ಕನ್ನಡದಲ್ಲಿ ಕಲಾಪ ನಡೆಸುವುದು ಸುಲಭವಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಯತ್ನ ಆರಂಭಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜತೆ ಚರ್ಚಿಸಲು ಸಂಪುಟ ಒಪ್ಪಿಗೆ ನೀಡಿದೆ.

ಪ್ರಮುಖ ಆಡಳಿತಾತ್ಮಕ ನಿರ್ಧಾರ
-2014-15ನೇ ಸಾಲಿಗೆ ಐಈಬಿಆರ್ ಅನ್ವಯ ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಸಾಲ ಮತ್ತು ಬಾಂಡ್ ಮೂಲಕ 1100 ಕೋಟಿ ಸಂಗ್ರಹ ಮತ್ತು ಅದಕ್ಕೆ ಸರ್ಕಾರಿ ಖಾತರಿ.
- ಸಿರಗುಪ್ಪ, ಶಿಡ್ಲಘಟ್ಟ, ಉಲ್ಲಾಳ, ಹೊಸಕೋಟೆ, ನಂಜನಗೂಡು, ಹಿರಿಯೂರು, ಮುಧೋಳ ಹಾಗೂ ಮುಳಬಾಗಲು, ಕನಕಪುರ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೆ ಹಾಗೂ ಕುಡಚಿ, ಸದಲಗ, ಹುಕ್ಕೇರಿ, ಮುದಗಲ್ ಚನ್ನಗಿರಿ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೆ.
- ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕು ಗಂಗನ್ನಗಾರಿಪಲ್ಲಿ ಗ್ರಾಮದಲ್ಲಿ 14.50 ಕೋಟಿ ವೆಚ್ಚದಲ್ಲಿ ಏಕಲವ್ಯ ಮಾದರಿ ವಸತಿ ಶಾಲಾ ಸಂಕೀರ್ಣ ನಿರ್ಮಾಣ
-ಕರ್ನಾಟಕ ಪಂಚಾಯತ್‌ರಾಜ್ ಎಂಜಿನಿಯರಿಂಗ್ ಸೇವೆಗಳ ನಿಯಮ-2008 ಮತ್ತು ಕರ್ನಾಟಕ ಸಾಮಾನ್ಯ ಸೇವೆ ನಿಯಮಕ್ಕೆ ತಿದ್ದುಪಡಿ.
- ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಸಲು ಅನುಮತಿ ಕೋರಿದ ಪ್ರಸ್ತಾವನೆಗಳಿಗೆ ಅನುಮೋದನೆ.
-ಚಿಕ್ಕಬಳ್ಳಾಪುರ, ರಾಮನಗರ ಮತ್ತು ಯಾದಗಿರಿ ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ವಸತಿ ಗೃಹ ನಿರ್ಮಿಸಲಿ 14.25 ಕೋಟಿ ಬಿಡುಗಡೆ.
- ರಾಜ್ಯದ 9 ಸಾರ್ವಜನಿಕ ಆಸ್ಪತ್ರೆಗಳಲ್ಲಿ ತಾಯಿ ಮತ್ತು ಶಿಶು ಆರೋಗ್ಯ ರಕ್ಷಣಾ ಕೇಂದ್ರಗಳ ಕಟ್ಟಡವನ್ನು ನಬಾರ್ಡ್ ನೆರವಿನೊಂದಿಗೆ ಆರ್‌ಐಡಿಎಫ್-19 ಯೋಜನೆ ಅನ್ವಯ 90.19 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಒಪ್ಪಿಗೆ.
-  ಸಹಕಾರ ಸಂಘಗಳ ತಿದ್ದುಪಡಿಗೆ ಅನುಮೋದನೆ.
-2014-15ನೇ ಸಾಲಿಗೆ ರಸಗೊಬ್ಬರದ ಕಾಪು ದಾಸ್ತಾನು ಮಾಡಲು ಹಾಗೂ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿಯಮಿತವು ಪಡೆಯುವ ಬ್ಯಾಂಕ್ ಸಾಲಕ್ಕೆ ಸರ್ಕಾರದ ಖಾತರಿ.
- ಕಬ್ಬಿಗೆ ಬೆಲೆ ನಿಗದಿ ಮಾಡುವಾಗ ಇನ್ನು ಕೇಂದ್ರದ ಮಾದರಿಯಲ್ಲಿ ಎಕ್ಸ್ ಗೇಟ್ ಪದ್ಧತಿ ಅನುಸರಿಸಲು ನಿರ್ಧಾರ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.