ಸ್ವಾವಲಂಬನೆಯತ್ತ ಭಾರತ, ದೇಶೀಯ ಉತ್ಪಾದನೆಗೆ ಉತ್ತೇಜನ

ಭಾರತವು ಸ್ವಾವಲಂಬಿಯಾಗಬೇಕು ಎನ್ನುವುದು ಎಲ್ಲರ ಆಸೆ ಅಲ್ಲವೇ? ಅದಕ್ಕಾಗಿಯೇ ಸರ್ಕಾರ ಕೆಲವೊಂದು ಕ್ರಮಗಳನ್ನು ಘೋಷಿಸಿದೆ. ಸುಂಕದ ವಿಚಾರದಲ್ಲಿ ಅದು ವಿಶಾಲ ಹೃದಯಿಯಾಗಿದೆ. ದೇಶೀಯ ಉತ್ಪಾದನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಹಲವು ಸಾಮಗ್ರಿಗಳ ಮೇಲಿನ ಸೀಮಾ ಸುಂಕವನ್ನು ಕಡಿತಗೊಳಿಸಿದೆ. ಕೆಮಿಕಲ್ ಮತ್ತು ಪೆಟ್ರೋಕೆಮಿಕಲ್ ವಲಯದಲ್ಲಿ ಹೊಸ ಹೂಡಿಕೆಗಳನ್ನು ಉತ್ತೇಜಿಸುವುದೂ ಸರ್ಕಾರದ ಈ ನಿರ್ಧಾರಕ್ಕೆ ಕಾರಣ. ಅಷ್ಟೇ ಅಲ್ಲ, ದೇಶದಲ್ಲಿ ಉತ್ಪಾದನೆ ಎಷ್ಟು ಹೆಚ್ಚಳವಾಗುತ್ತದೋ, ಆಗ ನಾವು ಆಮದು ಮೇಲೆ ಅವಲಂಬಿತವಾಗುವುದು ಕಡಿಮೆಯಾಗುತ್ತದೆ. ಆಗ ತನ್ನಿಂತಾನೇ ದೇಶ ಸ್ವಾವಲಂಬಿಯಾಗುತ್ತದೆ ಎನ್ನುವುದು ಮೋದಿ ಸರ್ಕಾರದ ಅಂಬೋಣ.
-ಬಡ ವರ್ಗದವರಿಗೂ ಕ್ಯಾಥೋಡ್ ರೇ ಟಿವಿ ಕೊಳ್ಳಲು ಸುಲಭವಾಗಲಿ ಎಂಬ ನಿಟ್ಟಿನಲ್ಲಿ ಕಲರ್ ಪಿಕ್ಟರ್ ಟ್ಯೂಬ್‌ಗೆ ಸೀಮಾ ಸುಂಕ ವಿನಾಯ್ತಿ
-19 ಇಂಚಿಗಿಂತ ಕಡಿಮೆ ಇರುವ ಎಲ್‌ಇಡಿ, ಎಲ್‌ಸಿಡಿ ಟಿವಿ ಉತ್ಪಾದನೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಟಿವಿಗಳ ಪ್ಯಾನೆಲ್‌ಗಳ ಮೇಲಿನ ಸೀಮಾ ಸುಂಕ ರದ್ದು
-ಸ್ಟೈನ್‌ಲೆಸ್ ಉಕ್ಕಿನ ಆಮದಿತ ಫ್ಲ್ಯಾಟ್-ರೋಲ್ಟ್ ಉತ್ಪನ್ನಗಳ ಮೇಲಿನ ಸೀಮಾ ಸುಂಕ ಶೇ.5ರಿಂದ 7.5ಕ್ಕೇರಿಕೆ
-ಪವನ ಚಾಲಿತ ವಿದ್ಯುತ್ ಜನರೇಟರ್‌ಗಳ ಬೇರಿಂಗ್ ತಯಾರಿಕೆಗೆ ಬಳಸುವ ಫೋರ್ಜ್‌ಡ್ ಸ್ಟೀಲ್ ರಿಂಗ್‌ಗಳ ಮೇಲಿನ ಸೀಮಾ ಸುಂಕ ಶೇ.10ರಿಂದ ಶೇ.5ಕ್ಕಿಳಿಕೆ
-ಸಂಕ್ಷೀಪಿತ ಬಯೋಗ್ಯಾಸ್ ಸ್ಥಾವರ (ಬಯೋ-ಸಿಎನ್‌ಜಿ) ಸ್ಥಾಪನೆಗೆ ಬೇಕಾದ ಯಂತ್ರೋಪಕರಣಗಳಿಗೆ ಶೇ.5 ಮೂಲ ಸೀಮಾ ಸುಂಕ
-ಮೆಟಲ್ಲರ್ಜಿಕಲ್ ಕೋಕ್‌ಗೆ ಶೇ.2.5 ಮೂಲ ಸೀಮಾ ಸುಂಕ
-ಬಾಕ್ಸೈಟ್ ಮೇಲಿನ ಸೀಮಾ ಸುಂಕ ಶೇ.10ರಿಂದ ಶೇ.20ಕ್ಕೆ ಹೆಚ್ಚಳ
-ಪ್ರಯಾಣಿಕರ ಅನುಕೂಲಕ್ಕಾಗಿ, ಉಚಿತ ಬ್ಯಾಗೇಜ್ ಭತ್ಯೆಯನ್ನು 35 ಸಾವಿರದಿಂದ 45 ಸಾವಿರಕ್ಕೇರಿಕೆ.
-ಸಂಸ್ಕರಣಾ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ವಿಶೇಷ ಆಹಾರ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ಯಂತ್ರಗಳ ಮೇಲಿನ ಸುಂಕ ಶೇ.10ರಿಂದ ಶೇ.6ಕ್ಕಿಳಿಕೆ
-ಸ್ಪೋರ್ಟ್ಸ್ ಗ್ಲೌಸ್ ಮೇಲೆ ಶೇ.2 (ಕೇಂದ್ರ ಮೌಲ್ಯ ವರ್ಧಿತ ತೆರಿಗೆ ರಹಿತ) ಮತ್ತು ಶೇ.6 ರಿಯಾಯ್ತಿ ಅಬ್ಕಾರಿ ಸುಂಕ (ಕೇಂದ್ರ ಮೌಲ್ಯ ವರ್ಧಿತ ತೆರಿಗೆಸಹಿತ).
-ಪಾನ್ ಮಸಾಲಾ ಮೇಲಿನ ಅಬ್ಕಾರಿ ಸುಂಕ ಶೇ.12ರಿಂದ ಶೇ.16ಕ್ಕೇರಿಕೆ
-ಉತ್ಪಾದಿಸದ ತಂಬಾಕು ಮೇಲಿನ ಸುಂಕ ಶೇ.50ರಿಂದ ಶೇ.55ಕ್ಕೇರಿಕೆ
-ಗುಟ್ಕಾ ಮತ್ತು ಅಗಿಯುವ ತಂಬಾಕು ಮೇಲಿನ ಸುಂಕ ಶೇ.60-70ಕ್ಕೇರಿಕೆ.
-ಸಕ್ಕರೆ ಸೇರಿಸಿರುವ ಪಾನೀಯಗಳಿಗೆ ಹೆಚ್ಚುವರಿ ಶೇ.5 ಅಬಕಾರಿ ಸುಂಕ
-ಸ್ವಚ್ಛ ಪರಿಸರ ಯೋಜನೆಗಾಗಿ ಟನ್‌ಗೆ 50 ಇರುವ ಸ್ವಚ್ಛ ಇಂಧನ ಸೆಸ್ ಅನ್ನು ಟನ್‌ಗೆ 100ಕ್ಕೇರಿಕೆ.
ಹೈಲೈಟ್ಸ್
ರು. 2,47,941 ಕೋಟಿ ಸಾರ್ವಜನಿಕ ಉದ್ದಿಮೆ ಕ್ಷೇತ್ರಕ್ಕೆ
ಅಭಿವೃದ್ಧಿಯಲ್ಲಿ ಪಿಎಸ್‌ಯು ಗಣನೀಯ ಪಾತ್ರ ವಹಿಸುವಂತೆ ಮಾಡಲು ಈ ಕ್ರಮ
ವಿದೇಶಿ ಬಂಡವಾಳಕ್ಕೆ ಒತ್ತು
ಅಭಿವೃದ್ಧಿಯಲ್ಲಿ ಗಣನೀಯ ಪಾತ್ರವಹಿಸುವ ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳದ ಅವಕಾಶವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶ ಕಲ್ಪಿಸಿದ್ದರೂ, ಎಫ್‌ಐಡಿ ಮೇಲೆ ಭಾರತ ತನ್ನ ಸಾರ್ವಭೌಮತ್ವ ಕಾಪಾಡಿಕೊಳ್ಳುವಲ್ಲಿ ಗುರುತರ ಹೆಜ್ಜೆ ಇಡಲಾಗಿದೆ. ಪ್ರತಿ ಎಫ್‌ಡಿಐ ಮೇಲೆ ದೇಶಿ ಕಂಪನಿಗಳೇ ನಿಯಂತ್ರಣ, ನಿರ್ವಹಣೆ ಹಕ್ಕು ಹೊಂದಲಿವೆ. ಪ್ರತಿ ವಿದೇಶಿ ಬಂಡವಾಳದ ಮೇಲೆ ವಿದೇಶಿ ಬಂಡವಾಳ ಉತ್ತೇಜನ ಮಂಡಳಿ (ಎಫ್‌ಐಪಿಬಿ)ಯ ಕಣ್ಗಾವಲೂ ಇರುತ್ತದೆ.
-2012ರ ನೇರ ವರ್ಗಾವಣೆ ಕುರಿತ ತಿದ್ದುಪಡಿಯಿಂದ ಉದ್ಭವವಾಗಿರುವ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ
-ತೆರಿಗೆದಾರರಿಗೆ ಸ್ಥಿರ ಹಾಗೂ ಅಂದಾಜಿಸಬಹುದಾದ ತೆರಿಗೆ ವ್ಯವಸ್ಥೆ ಕಲ್ಪಿಸಿ, ಬಂಡವಾಳ ಹೂಡಿಕೆ ಉತ್ತೇಜನಕ್ಕೆ ನಿರ್ಧಾರ
-ಅನಗತ್ಯ ಹಾಗೂ ದುಂದು ವೆಚ್ಚ ತಡೆಗಟ್ಟಲು 'ವೆಚ್ಚ ನಿರ್ವಹಣಾ ಆಯೋಗ' ಶೀಘ್ರ ಅಸ್ತಿತ್ವಕ್ಕೆ ಬರಲಿದೆ
ಎಲ್ಲರಿಗೂ ಬ್ಯಾಂಕ್ ಖಾತೆ
ಕಡು ಬಡತನ ವರ್ಗ, ಮಹಿಳೆಯರು, ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಹಾಗೂ ಕಾರ್ಮಿಕರನ್ನು ಕೇಂದ್ರ ಸರ್ಕಾರ ಗಣನೆಗೆ ತೆಗೆದುಕೊಂಡಿದೆ. ಈ ವರ್ಗದ ಎಲ್ಲ ಮಂದಿಯೂ ಬ್ಯಾಂಕ್ ಖಾತೆ ಹೊಂದಿರಬೇಕು ಎಂಬ ಉದ್ದೇಶದಿಂದ ಮುಂಬರುವ ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ.
ಬೆಂಗ್ಳೂರಲ್ಲೂ ಸಾಲ ಮರು ವಸೂಲಾತಿ ಕೇಂದ್ರ
ಸಾರ್ವಜನಿಕ ವಲಯ ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ತೀರಸದ ಪ್ರಕರಣಗಳು ಸಾಕಷ್ಟು ಇರುವ ಹಿನ್ನೆಲೆಯಲ್ಲಿ ಕೇಂದ್ರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಸೇರಿದಂತೆ ದೇಶದ ಆರು ಕಡೆ ಸಾಲ ಮರು ವಸೂಲಾತಿ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಿದೆ. ಚೆಂಡಿಘಡ, ಎರ್ನಾಕುಲಂ, ಡೆಹ್ರಾಡೂನ್, ಸಿಲ್ಲಿಗುರಿ ಮತ್ತು ಹೈದ್ರಾಬಾದ್‌ಗಳಲ್ಲಿ ಸ್ಥಾಪನೆಗೆ ಆಸಕ್ತಿವಹಿಸಿದೆ.
ಇನ್ನು ನೀವು ತೆರಿಗೆ ಕಟ್ಟಬೇಕಾದ್ದೆಷ್ಟು...?
ಕಳೆದ ವರ್ಷ ಎಷ್ಟಿತ್ತು...? (2013-14)
ಪುರುಷ- ಮಹಿಳೆಯರಿಗೆ
ಆದಾಯ
2,00,000
2,00,001-5,00,000
5,00,001-10,00,000
10,00,001 ಮೇಲ್ಪಟ್ಟು
ತೆರಿಗೆ
ಇಲ್ಲ
ಶೇ.10
ಶೇ.20+30,000
ಶೇ.30+1,30,000
ಹಿರಿಯರಿಗೆ (60+)
ಆದಾಯ
2,50,000
2,50,001-5,00,000
5,00,001-10,00,000
10,00,001 ಮೇಲ್ಪಟ್ಟು
ತೆರಿಗೆ
ಇಲ್ಲ
ಶೇ.10
ಶೇ.20+25,000
ಶೇ.30+1,25,000
ಹಿರಿಯರಿಗೆ (80+)
ಆದಾಯ
5,00,000
5,00,001-10,00,000
10,00,001 ಮೇಲ್ಪಟ್ಟು
ತೆರಿಗೆ
ಇಲ್ಲ
ಶೇ.20
ಶೇ.30+1,00,000
ಈ ವರ್ಷ ಎಷ್ಟು..? (2014-15)
ಪುರುಷ- ಮಹಿಳೆಯರಿಗೆ
ಆದಾಯ
2,50,000
2,50,001-5,00,000
5,00,001-10,00,000
10,00,001 ಮೇಲ್ಪಟ್ಟು
ತೆರಿಗೆ
ಇಲ್ಲ
ಶೇ.10
ಶೇ.20+25,000
ಶೇ.30+1,25,000
ಹಿರಿಯರಿಗೆ (60+)
ಆದಾಯ
3,00,000
3,00,001-5,00,000
5,00,001-10,00,000
10,00,001 ಮೇಲ್ಪಟ್ಟು
ತೆರಿಗೆ
ಇಲ್ಲ
ಶೇ.10
ಶೇ.20+20,000
ಶೇ.30+1,20,000
ಹಿರಿಯರಿಗೆ (80+)
ಆದಾಯ
5,00,000
5,00,001-10,00,000
10,00,001 ಮೇಲ್ಪಟ್ಟು
ತೆರಿಗೆ
ಇಲ್ಲ
ಶೇ.20
ಶೇ.30+1,00,000
ನೀವು 60ಕ್ಕಿಂತ ಕಡಿಮೆ ವಯಸ್ಸಿನವರೇ?
ಕಳೆದ ಬಾರಿ ನಿಮಗಿದ್ದ ತೆರಿಗೆ (2013-14)
ಟ್ಯಾಕ್ಸೆಬಲ್ ತೆರಿಗೆ ಸೆಸ್ ಒಟ್ಟು
ಆದಾಯ 3 ರ್ ತೆರಿಗೆ
2,00,00 - - -
3,00,000 10,000 300 10,300
4,00,000 20,000 600 20,600
5,00,000 30,000 900 30,900
7,00,000 70,000 2,100 72,100
9,00,000 1,10,000 3,300 1,13,300
11,00,000 1,60,000 4,800 1,64,800
ಈ ಬಾರಿ ನಿಮಗಿರುವ ತೆರಿಗೆ (2014-15)
ಟ್ಯಾಕ್ಸೆಬಲ್ ತೆರಿಗೆ ಸೆಸ್ ಒಟ್ಟು
ಆದಾಯ 3 ರ್ ತೆರಿಗೆ
2,50,00 - - -
3,00,000 5,000 150 5,150
4,00,000 15,000 450 15,450
5,00,000 25,000 750 25,750
7,00,000 65,000 1,950 66,950
9,00,000 1,05,000 3,150 1,08,150
11,00,000 1,55,000 4,650 1,59,650
ನೀವು 60 ವರ್ಷಕ್ಕಿಂತ ಮೇಲ್ಪಟ್ಟವರೇ?
ಕಳೆದ ಬಾರಿ ನಿಮಗಿದ್ದ ತೆರಿಗೆ (2013-14)
ಟ್ಯಾಕ್ಸೆಬಲ್ ತೆರಿಗೆ ಸೆಸ್ ಒಟ್ಟು
ಆದಾಯ 3 ರ್ ತೆರಿಗೆ
2,50,000 - - -
3,00,000 5,000 150 5,150
4,00,000 15,000 450 15,450
5,00,000 25,000 750 25,750
6,00,000 45,000 1,350 46,350
9,00,000 1,05,000 3,150 1,08,150
11,00,000 1,55,000 4,650 1,59,650
ಈ ಬಾರಿ ನಿಮಗಿರುವ ತೆರಿಗೆ (2014-15)
ಟ್ಯಾಕ್ಸೆಬಲ್ ತೆರಿಗೆ ಸೆಸ್ ಒಟ್ಟು
ಆದಾಯ 3 ರ್ ತೆರಿಗೆ
3,00,000 - - -
4,00,000 10,000 300 10,300
5,00,000 20,000 600 20,600
6,00,000 40,000 1,200 41,200
7,00,000 60,000 1,800 61,800
9,00,000 1,00,000 3,000 1,03,000
11,00,000 1,50,000 4,500 1,54,500
ನೀವು 80 ವರ್ಷಕ್ಕಿಂತ ಮೇಲ್ಪಟ್ಟವರೇ?
ಕಳೆದ ಬಾರಿ ನಿಮಗಿದ್ದ ತೆರಿಗೆ (2013-14)
ಟ್ಯಾಕ್ಸೆಬಲ್ ತೆರಿಗೆ ಸೆಸ್ ಒಟ್ಟು
ಆದಾಯ 3 ರ್ ತೆರಿಗೆ
5,00,000 - - -
6,00,000 20,000 600 20,600
7,00,000 40,000 1,200 41,200
9,00,000 80,000 2,400 82,400
10,00,000 1,00,000 3,000 1,03,000
11,00,000 1,30,000 3,900 1,33,900
ಈ ಬಾರಿ ನಿಮಗಿರುವ ತೆರಿಗೆ (2014-15)
ಟ್ಯಾಕ್ಸೆಬಲ್ ತೆರಿಗೆ ಸೆಸ್ ಒಟ್ಟು
ಆದಾಯ 3 ರ್ ತೆರಿಗೆ
5,00,000 - - -
6,00,000 20,000 600 20,600
7,00,000 40,000 1,200 41,200
9,00,000 80,000 2,400 82,400
10,00,000 1,00,000 3,000 1,03,000
11,00,000 1,30,000 3,900 1,33,900
ರುಪಾಯಿ ಲೆಕ್ಕಾಚಾರ
ಪೈಸೆ ಬಂದದ್ದು
1. ಸಾಲ ಮತ್ತು ಇತರ ಭಾದ್ಯತೆ
2. ಸಾಂಸ್ಥಿಕ ತೆರಿಗೆ
3. ಆದಾಯ ತೆರಿಗೆ
4. ಸೀಮಾಸುಂಕ
5. ಅಬಕಾರಿ ಸುಂಕ
6. ಸೇವಾ ಮತ್ತು ಇತರ ತೆರಿಗೆ
7. ತೆರಿಗೆಯೇತರ ಆದಾಯ
8. ಸಾಲರಹಿತ ಬಂಡವಾಳ ಸ್ವೀಕೃತಿ
ಪೈಸೆ ಹೋದದ್ದು
1. ಕೇಂದ್ರ ಯೋಜನೆ
2. ಬಡ್ಡಿ ಪಾವತಿ
3. ರಕ್ಷಣೆ
4. ಸಹಾಯಧನ
5. ಇತರೆ ಯೋಜನೇತರ ವೆಚ್ಚ
6. ತೆರಿಗೆ ಮತ್ತು ಸುಂಕದಲ್ಲಿ ರಾಜ್ಯಗಳ ಪಾಲು
7. ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಯೋಜನೇತರ ನೆರವು
8. ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಯೋಜನಾ ನೆರವು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


