ಎನ್ಡಿಎ ಅಭಿವೃದ್ಧಿಯ ಕರಪತ್ರ

'ಮೋದಿ ಬಜೆಟ್' ಸಾಮಾನ್ಯ ಪ್ರಜೆಯ ದೃಷ್ಟಿಯಿಂದ ಉತ್ತಮ. ರಫ್ತು ಉತ್ತೇಜನ, ಕಪ್ಪು ಹಣಕ್ಕೆ ಕಡಿವಾಣ, ವಿದೇಶಿ ಬಂಡವಾಳ, ಬೆಲೆ ಏರಿಕೆ ಬಗ್ಗೆ ಇನ್ನೂ ಹೆಚ್ಚಿನ ಕ್ರಮ ಕೈಗೆತ್ತಿಕೊಳ್ಳಬಹುದಿತ್ತು. ಆದರೆ ಪ್ರಸಕ್ತ ಸ್ಥಿತಿಯಲ್ಲಿ ಎಲ್ಲಕ್ಕೂ ಒಮ್ಮೆಲೇ ಕಡಿವಾಣ ಸಾಧ್ಯವಿಲ್ಲ. ಮುಂಚಿನ ಬಜೆಟ್ಗಳಲ್ಲಿ ಸೀಮಿತವಾಗುಳಿದಿದ್ದ ಕ್ಷೇತ್ರಗಳಿಗೆ ಈ ಬಾರಿ ಹೆಚ್ಚಿನ ಹಣ ಮೀಸಲಿಟ್ಟಿರುವುದು ಶ್ಲಾಘನೀಯ ಸಂಗತಿ. ಇದರಿಂದ ಸರ್ವತೋಮುಖ ಅಭಿವೃದ್ಧಿಗೆ ಸಹಾಯಕ ಎನ್ನುತ್ತಾರೆ ಆರ್ಥಿಕ ತಜ್ಞ ಬಿ.ಎನ್. ಮೋಹನ್ ಕುಮಾರ್
ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಸಂವಹನ ಅಗತ್ಯತೆಗಾಗಿ 150 ಕೋಟಿ
ಪುರಾತತ್ವ ಸ್ಥಳಗಳ ಅಭಿವೃದ್ಧಿಗಾಗಿ 100 ಕೋಟಿ. ಗಯಾ ವಿಶ್ವದರ್ಜೆ ಪ್ರವಾಸೋದ್ಯಮ ಕ್ಷೇತ್ರವಾಗಿ ಅಭಿವೃದ್ಧಿ.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ (ಎಂಎಸ್ಎಂಇ)ಗಳ ಪುನಶ್ಚೇತನಕ್ಕೆ ಸಮಿತಿ. 3 ತಿಂಗಳೊಳಗೆ ವರದಿ
ಡಿಸೆಂಬರ್ 31ರೊಳಗಾಗಿ ಇ-ಪ್ಲಾಟ್ಫಾರ್ಮ್ ಮೂಲಕ ಎಲ್ಲ ಸರ್ಕಾರಿ ಇಲಾಖೆ ಮತ್ತು ಸಚಿವಾಲಯಗಳನ್ನು ಒಂದೇ ವೇದಿಕೆಯಡಿ ತರುವುದು
15 ಹೊಸ ಬ್ರೈಲ್ ಪ್ರೆಸ್ಗಳ ನಿರ್ಮಾಣಕ್ಕೆ ಮತ್ತು 10 ಹಾಲಿ ಬ್ರೈಲ್ ಪ್ರೆಸ್ ಆಧುನೀಕರಣಕ್ಕಾಗಿ ರಾಜ್ಯ ಸರ್ಕಾರಗಳಿಗೆ ನೆರವು
ಪಂಡಿತ್ ಮದನ್ ಮೋಹನ್ ಮಾಳವೀಯ ಹೊಸ ಶಿಕ್ಷಕ ತರಬೇತಿ ಕಾರ್ಯಕ್ರಮಕ್ಕೆ 500 ಕೋಟಿ. ಹೊಸ ತರಬೇತಿ ಸಲಕರಣೆ ನೀಡಿ, ಶಿಕ್ಷಕರಿಗೆ ಉತ್ತೇಜನ ನೀಡುವ ಉದ್ದೇಶ
ತಿದ್ದುಪಡಿ
ಉತ್ಪಾದನಾ ಬಂಡವಾಳ ಭತ್ಯೆಯನ್ನು 15ರ್ (Mfg Investment Allowance)ಮಾಡಲಾಗಿದೆ. 31.3.2017ವರೆಗೆ.
ಪರಿಣಾಮ
ದೊಡ್ಡ ಕಂಪನಿಗೆ (25 ಕೋಟಿಗಿಂತ ಹೆಚ್ಚು ಬಂಡವಾಳ) 15ರ್ ಹೆಚ್ಚಿನ ಕಡಿತ ಲಭ್ಯವಾಗಿದೆ. ಇದರಿಂದ ಹೆಚ್ಚಿನ ಬಂಡವಾಳವನ್ನು ಉತ್ತೇಜಿಸುವಂತಾಗಿದೆ ಹಾಗೂ ಕನಿಷ್ಠ ಅಂದರೂ 4.5ರ್ ನಷ್ಟು ತೆರಿಗೆಯು ಈ ದೊಡ್ಡ ಕಂಪನಿಗಳಿಗೆ ಉಳಿತಾಯವಾಗಲಿದೆ.
ತಿದ್ದುಪಡಿ
ಮೊಬೈಲ್ ಸ್ಪೇಸ್ಗಳಾದ Android' ಗಳ ಜಾಹೀರಾತುಮೇಲೆ ಸೇವಾ ತೆರಿಗೆ
ಪರಿಣಾಮ
ಖಿಝ್ಛಟ್ಟಿಟ್ಟ್ಜಣಯುಲ್ಲಿ ಹೆಚ್ಚಿನ ಆದಾಯದ ನಿರೀಕ್ಷೆ ಹೆಜ್ಜೆ.
ತಿದ್ದುಪಡಿ
ಗೃಹ ಸಾಲದ ಮೇಲಿನ ಬಡ್ಡಿಯ ಕಡಿತವನ್ನು 1.5ಲಕ್ಷದಿಂದ 2 ಲಕ್ಷಕ್ಕೆ ಏರಿಕೆ
ಪರಿಣಾಮ
5000 ಕನಿಷ್ಠವಾಗಿ ಉಳಿತಾಯವಾಗಲಿದೆ.
ತಿದ್ದುಪಡಿ
ಸೆಕ್ಷನ್ 80 ಸಿ. ಹೂಡಿಕೆಯ ಮಿತಿಯನ್ನು 1ಲಕ್ಷದಿಂದ 1.5 ಲಕ್ಷಕ್ಕೆ ಏರಿಸಲಾಗಿದೆ.
ಪರಿಣಾಮ
ಕನಿಷ್ಠ ಎಂದರೂ 5000 ದಿಂದ 10,000 ಉಳಿತಾಯವಾಗಲಿದೆ ಹಾಗೂ ಸರ್ಕಾರಕ್ಕೆ ಹೆಚ್ಚಿನ ಹಣ ಪಿ.ಎಫ್., ಪಿಪಿಎಫ್, ಎಲ್ಐಸಿ ಹಾಗೂ ಇತರ ಮಾರ್ಗಗಳ ಮೂಲಕ ಬರಲಿದ್ದು ಸರ್ಕಾರದ ಸಾಲವು ಕಡಿಮೆಯಾಗಲಿದೆ.
ತಿದ್ದುಪಡಿ
ಪೂರ್ವಾದೇಶ (Advance Rulings) ಅನ್ನು ಈವರೆಗೂ ಕೇವಲ ವಿದೇಶಿ ಬಂಡವಾಳಗಳಿಗೆ ಸೀಮಿತಗೊಳಿಸಲಾಗುತ್ತಿತ್ತು. ಅದನ್ನು ಈಗ ಭಾರತೀಯ ಬಂಡವಾಳ ಕಂಪನಿಗಳಿಗೂ ವಿಸ್ತರಿಸಲಾಗಿದೆ.
ಪರಿಣಾಮ
ಇದರಿಂದ ತೆರಿಗೆಯ ಗೊಂದಲಗಳು ಇದ್ದಾಗ, ಅದನ್ನು ಸ್ವತಃ ಆದಾಯ ತೆರಿಗೆಯ ಅಧಿಕಾರಿಗಳೇ ನಿವಾರಿಸುವಂತಹದ್ದು. ಇದರಿಂದ ಕೋರ್ಟು, ಕಚೇರಿಗಳೆಂದು ಅಲೆಯುವಂತಿಲ್ಲ.
ತಿದ್ದುಪಡಿ
ಮೂಲ ವಿದೇಶಿ ಕರೆನ್ಸಿ ಬಾಂಡ್ಗಳ ಮೇಲಿನ ಟಿಡಿಎಸ್ 15ರ್ ಇಂದ 5ರ್ ಗೆ ಇಳಿಕೆ.
ಪರಿಣಾಮ
ಹೆಚ್ಚು ವಿದೇಶಿ ಬಂಡವಾಳ ನಿರೀಕ್ಷೆ. ವಿದೇಶಿ ಕರೆನ್ಸಿ ಹೆಚ್ಚಾಗಿ ಭಾರತಕ್ಕೆ ಬರಲಿದೆ.
ತಿದ್ದುಪಡಿ
ಹಿರಿಯ ನಾಗರಿಕರ ಮೂಲ ವಿನಾಯಿತಿ ಮಿತಿ 2.5ಲಕ್ಷದಿಂದ 3 ಲಕ್ಷಕ್ಕೆ ಏರಿಸಲಾಗಿದೆ.
ಪರಿಣಾಮ
5000 ಕನಿಷ್ಠ ಎಂದರೂ ಉಳಿತಾಯವಾಗಲಿದೆ.
ರು. 17,94,892 ಕೋಟಿ ಒಟ್ಟು ವೆಚ್ಚ
ತಿದ್ದುಪಡಿ
ಸಾರ್ವಜನಿಕ ಭವಿಷ್ಯನಿಧಿ ಮಿತಿ 1ಲಕ್ಷದಿಂದ 1.5 ಲಕ್ಷಕ್ಕೆ ಏರಿಕೆ
ಪರಿಣಾಮ
ಸರ್ಕಾರದ ಯೋಜನೆಗಳಿಗೆ ಬೇಕಾದ ಹಣವು ಈ ರೀತಿಯ ಉಳಿತಾಯದಿಂದ ಬಂದರೆ, ಸಾಲ ಮಾಡಬೇಕಾಗುವುದಿಲ್ಲ.
ರು. 5,31,177 ಕೋಟಿ ವಿತ್ತೀಯ ಕೊರತೆ
ತಿದ್ದುಪಡಿ
ವಿದ್ಯುತ್ ಕಂಪನಿಗಳ ತೆರಿಗೆ ರಜೆ 31.03.17ವರೆಗೂ ವಿಸ್ತರಸಣೆ
ಪರಿಣಾಮ
ವಿದ್ಯುತ್ ಕಂಪನಿಗಳ ಮೇಲಿನ ತೆರಿಗೆ ಹೊರೆ ಇಳಿಯಲಿದ್ದು ಹೆಚ್ಚು ವಿದ್ಯುತ್ ಉತ್ಪಾದನೆಯನ್ನು ಉತ್ತೇಜಿಸಲಾಗಿದೆ.
ರು. 2,12,505 ಕೋಟಿ ತೆರಿಗೆಯೇತರ ಆದಾಯ
ತಿದ್ದುಪಡಿ
ಆದಾಯ ತೆರಿಗೆಯಲ್ಲಿ ಪೂರ್ವಾನ್ವಯ ತಿದ್ದುಪಡಿಗಳನ್ನು ಇನ್ನು ಮುಂದೆ ಮಾಡುವುದಿಲ್ಲ.
ಪರಿಣಾಮ
ವಿದೇಶಿ ಕಂಪನಿಗಳು ಭಾರತದಲ್ಲಿ ಬಂಡವಾಳ ಹೂಡಲು ಹಿಂಜರಿಯುವ ಅವಶ್ಯಕತೆ ಇಲ್ಲ.
ರು. 12,19,892 ಕೋಟಿ ಯೋಜನೇತರ ವೆಚ್ಚ
ತಿದ್ದುಪಡಿ
ಉಕ್ಕು ಮೇಲಿನ ಆಮದು ಸುಂಕವನ್ನು 5ರ್ಇಂದ 7.5ರ್ಗೆ ಏರಿಸಲಾಗಿದೆ.
ಪರಿಣಾಮ
ಆಮದು ಉಕ್ಕಿನ ಬೆಲೆ ಹೆಚ್ಚಾಗಲಿದ್ದು ಭಾರತದಲ್ಲೇ ಹೆಚ್ಚಿನ ಸ್ಟೀಲ್ ಉತ್ಪಾದನೆಗೆ ಆದ್ಯತೆ ನೀಡಲಾಗಿದೆ.
ರು. 6,05,129 ಕೋಟಿ ಬಂದ ಬಂಡವಾಳ
ರು. 1,04,166 ಕೋಟಿ ಪ್ರಾಥಮಿಕ ಕೊರತೆ
ತಿದ್ದುಪಡಿ
ಕೆಲ ಸೋಲಾರ್ ಉಪಕರಣಗಳ ಮೇಲಿನ ಆಮದು ಸುಂಕ ಕಡಿತ.
ಪರಿಣಾಮ
ಇದರಿಂದ ಸೋಲಾರ್ ಪವರ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಸೋಲಾರ್ ಪವರ್ ಉತ್ತೇಜಿಸಲು ಉತ್ತಮ ಕ್ರಮ ಕೈಗೊಳ್ಳಲಾಗಿದೆ.
ಡಿಜಿಟಲ್ ಇಂಡಿಯಾ ಯೋಜನೆಗೆ 500 ಕೋಟಿ
'ಉತ್ತಮ ಆಡಳಿತ'ಯೋಜನೆಗೆ 100 ಕೋಟಿ
ಕೃಷಿ ಕ್ಷೇತ್ರದಲ್ಲಿ ಶೇ.4 ಸುಸ್ಥಿರ ಅಭಿವೃದ್ಧಿಗೆ ಕ್ರಮ
8 ಲಕ್ಷ ಕೋಟಿ ಕೃಷಿ ಸಾಲದ ಗುರಿ
ದಾಸ್ತಾನು ಮೂಲಸೌಕರ್ಯ ನಿಧಿಗೆ 5 ಸಾವಿರ ಕೋಟಿ
ಅಲ್ಪಾವಧಿ ಸಹಕಾರಿ ಗ್ರಾಮೀಣ ಸಾಲಕ್ಕೆ 50 ಸಾವಿರ ಕೋಟಿ
ನಾಲೆಗಳ ದಡದಲ್ಲಿ 1 ಮೆಗಾ ವ್ಯಾಟ್ ಸೌರ ಪಾರ್ಕ್ ಸ್ಥಾಪನೆಗೆ 100 ಕೋಟಿ
ದೃಷ್ಟಿ ನ್ಯೂನತೆ ಇರುವ ವ್ಯಕ್ತಿಗಳಿಗೆ ನೆರವಾಗುವ ಉದ್ದೇಶದಿಂದ ಬ್ರೈಲ್ ಇರುವ ಕರೆನ್ಸಿ ನೋಟುಗಳ ಮುದ್ರಣ
ಸಾರ್ವಜನಿಕ ರಸ್ತೆ ಸಾರಿಗೆಯಲ್ಲಿ ಮಹಿಳೆಯರ ಸುರಕ್ಷತೆ ಯೋಜನೆಗೆ ಪ್ರಾಯೋಗಿಕ ಪರೀಕ್ಷೆಗಾಗಿ 50 ಕೋಟಿ
ತಿದ್ದುಪಡಿ
ಆಮದು ಮಾಡಿಕೊಂಡ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ "ಎಜುಕೇಶನ್ ಸೆಸ್" ಹೇರಲಾಗಿದೆ.
ಪರಿಣಾಮ
ಆಮದಾದ ಎಲೆಕ್ಟ್ರಾನಿಕ್ಸ್ ವಸ್ತುಗಳ ಬೆಲೆ ಹೆಚ್ಚಾಗಲಿದೆ.
ರು. 11,89,763 ಕೋಟಿ ಸಂದಾಯವಾದ ಆದಾಯ
ರು. 89,77,25 ಕೋಟಿ ಕೇಂದ್ರದ ಪಾಲು
ತಿದ್ದುಪಡಿ
ಎಲ್ಸಿಡಿ ಮತ್ತು ಎಲ್ಇಡಿ ಮೇಲಿನ ಆಮದು ಸುಂಕವನ್ನು ಕಡಿಮೆಗೊಳಿಸಲಾಗಿದೆ.
ಪರಿಣಾಮ
ಎಲ್ಸಿಡಿ, ಎಲ್ಇಡಿ ಉತ್ಪನ್ನಗಳಾದ ಟಿ.ವಿ. ಕ್ಯಾಮೆರಾಗಳ ಬೆಲೆ ಕೊಂಚ ಕಡಿಮೆಯಾಗಲಿದೆ.
ರು. 3,78,348 ಕೋಟಿ ಆದಾಯ ಕೊರತೆ
ತಿದ್ದುಪಡಿ
ಪಾದರಕ್ಷೆಗಳ ಮೇಲಿನ ಅಬಕಾರಿ ಸುಂಕವನ್ನು ಇಳಿಸಲಾಗಿದೆ.
ಪರಿಣಾಮ
ಪಾದರಕ್ಷೆಗಳ ಬೆಲೆಯು ಕಡಿಮೆಯಾಗಲಿದೆ.
ರು. 5,75,000 ಕೋಟಿ ಯೋಜನಾ ವೆಚ್ಚ
ರು. 13,64,524 ಕೋಟಿ ಒಟ್ಟು ತೆರಿಗೆ ಸಂಗ್ರಹ
ತಿದ್ದುಪಡಿ
ಸಿಗರೇಟ್, ತಂಬಾಕು ಮೇಲಿನ ಅಬಕಾರಿ ಸುಂಕ -12ರ್ ಇಂದ 72ರ್ ಗೆ ಹಾಗೂ 60ರ್ ಇಂದ 70ರ್ ಗೆ ಏರಿಕೆ.
ಪರಿಣಾಮ
ಇನ್ನು ಸಿಗರೇಟ್, ತಂಬಾಕು ಉತ್ಪನ್ನಗಳ ಬೆಲೆ ಗಗನಕ್ಕೆ.
ಕೃಷಿ ಸಂಬಂಧಿ ಮಾಹಿತಿ ಪ್ರಸಾರ ಮಾಡುವ ಕಿಸಾನ್ ಟೆಲಿವಿಷನ್ಗಾಗಿ
100ಕೋಟಿ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ಗೆ 1000ಕೋಟಿ
ತಿದ್ದುಪಡಿ
ಮನೆ ಅಥವಾ ಸೈಟ್ ಕೊಳ್ಳಲು ಮುಂಗಡ ಹಣ ನೀಡಿ ನಂತರ ನಿಗದಿತ ಸಮಯದೊಳಗೆ ನೋಂದಣಿ ಆಗದಿದ್ದಾಗ ಅದನ್ನು ಸೈಟ್ ಕೊಳ್ಳುವ ವ್ಯಕ್ತಿ ಮುಟ್ಟುಗೋಲು ಹಾಕಿಕೊಂಡರೆ ಅದನ್ನು ಆ ವ್ಯಕ್ತಿ ಮತ್ತು ಮಾರಾಟ ಮಾಡಿದಾತನ ವೆಚ್ಚದಲ್ಲಿ ಕಡಿತ ಮಾಡಲಾಗುತ್ತಿತ್ತು. ಆದರೆ ಈ ಕಡಿತದ ಬದಲು ಮುಟ್ಟುಗೋಲು ಹಾಕಿಕೊಳ್ಳಲಾದ ಹಣದ ಮೇಲೆ ತೆರಿಗೆ ವಿಧಿಸಲಾಗಿದೆ.
ಪರಿಣಾಮ
ಕಪ್ಪುಹಣ ಬದಲಾಯಿಸಲು ಈ ಮಾರ್ಗವನ್ನು ತುಂಬ ವರ್ಷಗಳಿಂದ ಉಪಯೋಗಿಸಲಾಗುತ್ತಿತ್ತು. ಆದರೆ ಹೊಸ ಕ್ರಮ ಪ್ರಕಟಿಸಿದ್ದರಿಂದಲಾಗಿ ಕಪ್ಪುಹಣಕ್ಕೆ ಕಡಿವಾಣ ಹಾಕಲು ಮೊದಲ ಹೆಜ್ಜೆ ಇಟ್ಟಂತಾಗಿದೆ.
ತಿದ್ದುಪಡಿ
ಮೂಲ ವಿನಾಯಿತಿ ಮಿತಿಯನ್ನು 2 ಲಕ್ಷದಿಂದ 2.5 ಲಕ್ಷಕ್ಕೆ ಏರಿಸಲಾಗಿದೆ.
ಪರಿಣಾಮ
5000 ತೆರಿಗೆ ಉಳಿತಾಯ.
ಆರ್ಥಿಕ ಅಭಿವೃದ್ಧಿಗೆ ಹೇಳಿ ಮಾಡಿಸಿದಂಥ ಉತ್ತಮ ಬಜೆಟ್ ಇದು.
-ಎಲ್.ಕೆ. ಆಡ್ವಾಣಿ,
ಬಿಜೆಪಿ ಹಿರಿಯ ನಾಯಕ
ಬಡವರ, ಯುವಜನರ, ರೈತರ, ಸ್ತ್ರೀಯರ ಹಾಗೂ ಹಿರಿಯ ನಾಗರಿಕರ ಸ್ನೇಹಪರ ಬಜೆಟ್.
-ರಾಜನಾಥ್ ಸಿಂಗ್,
ಕೇಂದ್ರ ರಕ್ಷಣಾ ಸಚಿವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


