ಪ್ರಧಾನ ಸುದ್ದಿ

ಈಗ ಮನಿ ಪವರ್ರೇ ಜಾಸ್ತಿ!

ಈಗ ಮನಿ ಪವರ್ರೇ ಜಾಸ್ತಿ!
Published On :

ವಿಧಾನಸಭೆ: 'ನಾನು ಅಂದು ಚುನಾವಣೆಗೆ 35 ಸಾವಿರ ವೆಚ್ಚ ಮಾಡಿದ್ದೆ. ಇಂದು 3.5 ಕೋಟಿ ವೆಚ್ಚ ಮಾಡುವಷ್ಟು 'ಪವರ್‌' ನನಗೆ ಬಂದಿದೆ'.
'ಹುಷಾರ್, ಚುನಾವಣೆ ಆಯೋಗಕ್ಕೆ ಗೊತ್ತಾದರೆ ಸೀಟು ಹೋದೀತು...?!'
ಅವರು ಡಿಸ್‌ಕ್ವಾಲಿಫೈ ಮಾಡಲಿ ಎಂದೇ ನಾನು ಹೀಗೆ ಹೇಳಿದ್ದು. ನಾನು ಒಬ್ಬನೇ ಹೋಗುವುದಿಲ್ಲ, ನನ್ನ ಜತೆ ಎಲ್ಲರನ್ನೂ ಎಳೆದುಕೊಂಡು ಹೋಗುತ್ತೇನೆ... ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ರಮೇಶ್‌ಕುಮಾರ್ ಹಾಗೂ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಮಾತುಕತೆ ಇದು.
 ಸಂದರ್ಭ...
ಇಂಧನ ಇಲಾಖೆ ಕುರಿತ ಚರ್ಚೆ ವೇಳೆ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಅವರು 'ವಿದ್ಯುತ್ ಖರೀದಿ ಪ್ರಮಾಣ ನೂರಾರು ಕೋಟಿ ಹೆಚ್ಚಾಗಿದೆ. ಹಿಂದೆ, ರಮೇಶ್‌ಕುಮಾರ್, ಮಹದೇವಪ್ಪ ಅವರು ಸಚಿವರಾಗಿದ್ದಾಗ ಮಾಡಿದ ಕೆಲಸದ ಸ್ಪೀಡ್ ಇಂದಿಲ್ಲ' ಎಂದಾಗ, ರಮೇಶ್‌ಕುಮಾರ್ ಮಧ್ಯಪ್ರವೇಶ.
 ರಮೇಶ್‌ಕುಮಾರ್ ಹೇಳಿದ್ದಿಷ್ಟು...
ವ್ಯಾಪಾರ ಹಾಗೂ ರಾಜಕೀಯಕ್ಕೆ ನಡುವೆ ಒಂದು ಗೆರೆ ಇತ್ತು. ಅದು ಇಂದಿಲ್ಲ. ರಾಜಕೀಯದವರೆಲ್ಲ ವ್ಯಾಪಾರಿಗಳಾಗಿದ್ದಾರೆ, ವ್ಯಾಪಾರಿಗಳೆಲ್ಲ ರಾಜಕಾರಣಿಗಳಾಗಿದ್ದಾರೆ. ಈ 'ಪವರ್‌'ಗೂ 3ನೇ ಅಂತಸ್ತಿನಲ್ಲಿರುವ 'ಪವರ್‌'ಗೂ ಹೆಚ್ಚಿನ ಸಂಬಂಧ ಇದೆ. ಇದೀಗ 'ಸರ್ವೀಸ್ ಚಾರ್ಚ್‌' ಎಂದು ನೀಡುತ್ತಾರೆ. ಯಾವುದೇ ಸರ್ಕಾರ, ಯಾವುದೇ ವ್ಯಕ್ತಿ ಅಧಿಕಾರಕ್ಕೆ ಬಂದರೂ ಅವರನ್ನು ಸರಿಮಾಡಿಕೊಳ್ಳಲು ಏಜೆಂಟರುಗಳಿದ್ದಾರೆ.
ಅವರಿಗೆ ಯಾರನ್ನು ಎಲ್ಲಿ ಡೀಲ್ ಮಾಡಬೇಕು ಎಂಬುದು ಗೊತ್ತಿದೆ. ಎಲೆಕ್ಷನ್‌ಗೆ ಕೋಟ್ಯಂತರ ಹಣ ವೆಚ್ಚವಾಗಬೇಕಿದೆ. ಇಲ್ಲಿ ವಿದೇಶಿ ಬಂಡವಾಳದವರು ಕಪ್ಪುಹಣವನ್ನೆಲ್ಲ 'ಸರ್ವೀಸ್ ಚಾರ್ಜ್‌' ಆಗಿ ನೀಡುತ್ತಾರೆ. ಯಾರು ಅಧಿಕಾರದಲ್ಲಿದ್ದಾಗ ಯಾರು ಹೆಚ್ಚು-ಕಡಿಮೆ ಹಣ ಮಾಡಿದ್ದಾರೆ ಎಂಬ ಲೆಕ್ಕಾಚಾರ ಬೇಕಿಲ್ಲ. ಎಲ್ಲ ಸಮಯದಲ್ಲೂ ಆಗಿದ್ದಾರೆ. ಎಲ್ಲರಿಗೂ ಚುನಾವಣೆಗೆ 'ಪವರ್‌' ಹೆಚ್ಚಾಗುತ್ತಲೇ ಇದೆ. ನಾನೂ ಹಿಂದೆ ಚುನಾವಣೆಗೆ 35 ಸಾವಿರ ವೆಚ್ಚ ಮಾಡಿದ್ದೆ. ಇದೀಗ 3.5 ಕೋಟಿ ವೆಚ್ಚ ಮಾಡಬೇಕಾದ 'ಪವರ್‌' ಸ್ಥಿತಿಗೆ ಬಂದಿದ್ದೇನೆ.
 ಹಾಗೆ ಹೇಳಬೇಡಿ, ಕಷ್ಟ ಆಗುತ್ತೆ...
'ಹುಷಾರ್, ಚುನಾವಣೆ ಆಯೋಗಕ್ಕೆ ಗೊತ್ತಾದರೆ'ಇದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಮೆಲುದನಿಯ ಎಚ್ಚರಿಕೆ.
 ಗೊತ್ತಾಗಲಿ ಬಿಡಿ...
'ಗೊತ್ತಾಗಲಿ ಅಂತಾನೆ ಹೇಳಿದೆ. ನಾನು ಹೋದರೆ ಎಲ್ಲರನ್ನೂ ಎಳೆದುಕೊಂಡೇ ಹೋಗುತ್ತೇನೆ, ನಾನೊಬ್ಬನೇ ಹೋಗೋದೇ ಇಲ್ಲ'. ಹೀಗೆಂದವರು ಮತ್ತೆ ರಮೇಶ್ ಕುಮಾರ್ ಅವರೇ.
 ರಾಯರೆಡ್ಡಿ ಸಮಜಾಯಿಷಿ
ಬಸವರಾಜ ರಾಯರೆಡ್ಡಿ ಎದ್ದು ನಿಂತು, ಅವರು 3.5 ಕೋಟಿ ವೆಚ್ಚ ಮಾಡಿದ್ದೇನೆ ಎನ್ನಲಿಲ್ಲ. ಅಂತಹ ಪರಿಸ್ಥಿತಿ ಇದೆ ಎಂದರಷ್ಟೇ ಎಂದಾಗ ಸಭಾಧ್ಯಕ್ಷರ ಮುಗುಳ್ನಗೆ.
 ಕಡೆಯಲ್ಲಿ
ರಮೇಶ್‌ಕುಮಾರ್ ಎದ್ದು ನಿಂತು, 'ಪರಿಸ್ಥಿತಿ ಇದೆ ಎಂದು ಹೇಳಿದೆ. ಆಯೋಗ ಪದಚ್ಯುತಿ ಮಾಡಿದರೆ ಮಾಡಲಿ' ಎಂದು ಸಮಜಾಯಿಷಿ ರೀತಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.