ಪ್ರಧಾನ ಸುದ್ದಿ

ಲೈಂಗಿಕ ದೌರ್ಜನ್ಯವೂ ಅತ್ಯಾಚಾರ

ಲೈಂಗಿಕ ದೌರ್ಜನ್ಯವೂ ಅತ್ಯಾಚಾರ
Published On :

IPC 375
ಅತ್ಯಾಚಾರವನ್ನು ಭಾರತೀಯ ದಂಡ ಸಂಹಿತೆ (ಐಪಿಸಿ) 375ನೇ ವಿಧಿಯಲ್ಲಿ ವ್ಯಾಖ್ಯಾನಿಸಲಾಗಿದೆ. 2013ರ ಫೆ.13ರವರೆಗೆ ಈ ವ್ಯಾಖ್ಯೆ ಸೀಮಿತವಾಗಿತ್ತು, ಅತ್ಯಾಚಾರಿಗಳಿಗೆ ಶಿಕ್ಷೆ ಪ್ರಮಾಣವೂ ಕಡಿಮೆ ಇತ್ತು. ದೆಹಲಿ ನಿರ್ಭಯಾ ಪ್ರಕರಣದ ಬಳಿಕ ಕಾನೂನು ತಿದ್ದುಪಡಿ ತಂದು ವ್ಯಾಖ್ಯಾನವನ್ನು ಇನ್ನಷ್ಟು ವಿಸ್ತ್ರತಗೊಳಿಸಲಾಗಿದೆ ಮತ್ತು ಲೈಂಗಿಕ ದೌರ್ಜನ್ಯವನ್ನೂ ಅತ್ಯಾಚಾರ ಎಂದು ಪರಿಗಣಿಸಲಾಗಿದೆ. ಸಲಿಂಗಿಗಳ ಮೇಲಿನ ಲೈಂಗಿಕ ದೌರ್ಜನ್ಯವನ್ನೂ ತಿದ್ದುಪಡಿಯು ಅತ್ಯಾಚಾರ ಎಂದು ಪರಿಗಣಿಸುತ್ತದೆ.
ಲೈಂಗಿಕ ದೌರ್ಜನ್ಯ ಎಂದರೆ- (ಎ) ತನ್ನ ಗುಪ್ತಾಂಗವನ್ನು ಇನ್ನೊಬ್ಬ ವ್ಯಕ್ತಿಯ ಗುಪ್ತಾಂಗ, ಮೂತ್ರದ್ವಾರ ಅಥವಾ ಗುದದೊಳಗೆ ಯಾವುದೇ ಪ್ರಮಾಣದಲ್ಲಿ ತೂರಿಸುವುದು ಅಥವಾ ಇನ್ನೊಬ್ಬ ವ್ಯಕ್ತಿ ಯಾ ಯಾವುದೇ ವ್ಯಕ್ತಿಯಿಂದ ತನ್ನೊಂದಿಗೆ ಹೀಗೆ ಮಾಡಿಸಿಕೊಳ್ಳುವುದು ಅಥವಾ (ಬಿ) ಗುಪ್ತಾಂಗವಲ್ಲದೆ ಯಾವುದೇ ವಸ್ತು, ದೇಹದ ಯಾವುದೇ ಅಂಗವನ್ನು ಇನ್ನೊಬ್ಬ ವ್ಯಕ್ತಿಯ ಗುಪ್ತಾಂಗ, ಮೂತ್ರದ್ವಾರ/ಮೂತ್ರನಾಳ ಅಥವಾ ಗುದದೊಳಗೆ ಯಾವುದೇ ಪ್ರಮಾಣದಲ್ಲಿ ತೂರಿಸುವುದು ಅಥವಾ ಇನ್ನೊಬ್ಬ ವ್ಯಕ್ತಿ ಯಾ ಯಾವುದೇ ವ್ಯಕ್ತಿಯಿಂದ ತನ್ನೊಂದಿಗೆ ಹೀಗೆ ಮಾಡಿಸಿಕೊಳ್ಳುವುದು ಅಥವಾ (ಸಿ) ಕುಶಲತೆಯಿಂದ ಇನ್ನೊಬ್ಬ ವ್ಯಕ್ತಿಯ ದೇಹದ ಯಾವುದೇ ಭಾಗವನ್ನು ಯೋನಿ, ಮೂತ್ರದ್ವಾರ ಅಥವಾ ಗುದದೊಳಗೆ ಯಾವುದೇ ಪ್ರಮಾಣದಲ್ಲಿ ತೂರಿಸುವುದು ಅಥವಾ ಇನ್ನೊಬ್ಬ ವ್ಯಕ್ತಿ ಯಾ ಯಾವುದೇ ವ್ಯಕ್ತಿಯಿಂದ ತನ್ನೊಂದಿಗೆ ಹೀಗೆ ಮಾಡಿಸಿಕೊಳ್ಳುವುದು ಅಥವಾ (ಡಿ) ತನ್ನ ಬಾಯನ್ನು ಇನ್ನೊಬ್ಬ ವ್ಯಕ್ತಿಯ ಗುಪ್ತಾಂಗ, ಯೋನಿ, ಗುದ, ಮೂತ್ರದ್ವಾರ ಸಂಪರ್ಕಕ್ಕೆ ತರುವುದು ಅಥವಾ (ಇ) ಇನ್ನೊಬ್ಬ ವ್ಯಕ್ತಿಯ ಗುಪ್ತಾಂಗ, ಗುದ, ಸ್ತನಗಳನ್ನು ಸ್ಪರ್ಶಿಸುವುದು ಅಥವಾ ಇನ್ನೊಬ್ಬ ವ್ಯಕ್ತಿ ಯಾ ಯಾವುದೇ ವ್ಯಕ್ತಿ ತನ್ನ ಗುಪ್ತಾಂಗ, ಗುದ, ಸ್ತನಗಳನ್ನು ಸ್ಪರ್ಶಿಸುವಂತೆ ಮಾಡುವುದು (ನೈರ್ಮಲ್ಯದ ಉದ್ದೇಶ ಅಥವಾ ವೈದ್ಯಕೀಯ ಉದ್ದೇಶಕ್ಕೆ ಈ ರೀತಿಯ ಒಳತೂರಿಸುವಿಕೆ ಹೊರತುಪಡಿಸಿ).
 ಈ ಕೆಳಗಿನ 7 ಪರಿಸ್ಥಿತಿಗಳಲ್ಲಿ ಯಾವುದೇ ಒಂದು ಸಂಭವಿಸಿದರೂ ಲೈಂಗಿಕ ದೌರ್ಜನ್ಯ
1.    ಇನ್ನೊಬ್ಬ ವ್ಯಕ್ತಿಯ ಇಚ್ಛೆಗೆ ವಿರುದ್ಧವಾಗಿ
2.    ಇನ್ನೊಬ್ಬ ವ್ಯಕ್ತಿಯ ಒಪ್ಪಿಗೆ ಇಲ್ಲದೆ
3.    ಜೀವ ಬೆದರಿಕೆ ಅಥವಾ ಗಾಯಗೊಳಿಸುವ ಬೆದರಿಕೆಯೊಡ್ಡಿ ಇನ್ನೊಬ್ಬ ವ್ಯಕ್ತಿಯ ಒಪ್ಪಿಗೆ ಪಡೆದಾಗ
4.    ಲೈಂಗಿಕ ದೌರ್ಜನ್ಯಕ್ಕೆ ಒಳಗಾದವಳು ಮಹಿಳೆಯಾಗಿದ್ದು, ತಾನು ಆಕೆಯ ಪತಿಯಲ್ಲ ಎನ್ನುವುದರ ಅರಿವಿದ್ದೂ ಅವಳ ಒಪ್ಪಿಗೆ ಪಡೆದಾಗ; ಆತ ಬೇರೆ ವ್ಯಕ್ತಿ ಎನ್ನುವುದು ಗೊತ್ತಿದ್ದರೂ ತನ್ನನ್ನು ಕಾನೂನುಬದ್ಧವಾಗಿ ಮದುವೆಯಾಗುತ್ತಾನೆ ಎನ್ನುವ ನಂಬಿಕೆಯಿಂದ ಒಪ್ಪಿಗೆ ಕೊಟ್ಟಾಗ
5.    ಲೈಂಗಿಕ ಕ್ರಿಯೆಗೆ ಒಪ್ಪಿಗೆ ನೀಡುವ ಸಂದರ್ಭದಲ್ಲಿ ಇನ್ನೊಬ್ಬ ವ್ಯಕ್ತಿ ಮಾನಸಿಕ ಸ್ಥಿಮಿತದಲ್ಲಿ ಇಲ್ಲದೇ ಇದ್ದರೆ, ಅಮಲೇರಿಸುವ, ಮತ್ತು ಬರಿಸುವ ಮಾದಕ ಪದಾರ್ಥಗಳನ್ನು ನೀಡಿ ಒಪ್ಪಿಗೆ ಪಡೆದಾಗ, ಇನ್ನೊಬ್ಬ ವ್ಯಕ್ತಿ ಲೈಂಗಿಕ ಕ್ರಿಯೆಯ ಸ್ವರೂಪ ಮತ್ತು ಪರಿಣಾಮದ ಅರಿವಿಲ್ಲದೆ ಒಪ್ಪಿಗೆ ಕೊಟ್ಟಾಗ
6.    ಇನ್ನೊಬ್ಬ ವ್ಯಕ್ತಿ 18 ವರ್ಷದ ಒಳಗಿದ್ದರೆ ಅವರ ಒಪ್ಪಿಗೆ ಇದ್ದು ಅಥವಾ ಒಪ್ಪಿಗೆ ಇಲ್ಲದೆ ಲೈಂಗಿಕ ಕ್ರಿಯೆ ನಡೆಸಿದಾಗ
7.    ವ್ಯಕ್ತಿ ಸಮ್ಮತಿ ವಿಚಾರದಲ್ಲಿ ಸಂವಹನ ನಡೆಸಲು ಅಸಮರ್ಥನಾಗಿದ್ದಾಗ.
ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ
-   ಹೊಸದಾಗಿ ಸೇರ್ಪಡೆ ಮಾಡಲಾಗಿರುವ ಐಪಿಸಿ 376ಎ ಅಡಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದವರ ಶಿಕ್ಷೆ ಕುರಿತು ಹೇಳಲಾಗಿದೆ. ಈ ಪ್ರಕಾರ, ಲೈಂಗಿಕ ದೌರ್ಜನ್ಯ ಎಸಗಿದವರಿಗೆ 20 ವರ್ಷಕ್ಕೆ ಕಡಿಮೆ ಇಲ್ಲದಂತೆ ಕಠಿಣ ಕಾರಾಗೃಹ ವಾಸ ಅಥವಾ ಅಪರಾಧಿ ಜೀವನಪರ್ಯಂತ ಕಠಿಣ ಕಾರಾಗೃಹ ವಾಸ ಅಥವಾ ಮರಣದಂಡನೆ ವಿಧಿಸಬಹುದು. ಸಾಮೂಹಿಕ ಅತ್ಯಾಚಾರದಲ್ಲಿ ಭಾಗಿಯಾಗಿರುವವರಿಗೆ ಅವರ ಲಿಂಗವನ್ನು ಪರಿಗಣನೆಗೆ ತೆಗೆದುಕೊಳ್ಳದೆ 20 ವರ್ಷಕ್ಕೆ ಕಡಿಮೆ ಇಲ್ಲದಂತೆ ಕಠಿಣ ಕಾರಾಗೃಹವಾಸ ಅಪರಾಧಿ ಜೀವನಪರ್ಯಂತ ಕಠಿಣ ಕಾರಾಗೃಹ ವಾಸ ವಿಧಿಸಬಹುದು. ಜತೆಗೆ ಸಂತ್ರಸ್ತರ ವೈದ್ಯಕೀಯ ವೆಚ್ಚ ಮತ್ತು ಪುನರ್ವಸತಿ ಖರ್ಚನ್ನೂ ಭರಿಸಬೇಕು.
-    ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಗಳ ಪ್ರಕಾರ ಸಂತ್ರಸ್ತರ ಹೇಳಿಕೆ ದಾಖಲಿಸುವುದು, ವೈದ್ಯಕೀಯ ತಪಾಸಣೆ, ಸಾಕ್ಷ್ಯ ಸಂಗ್ರಹ ಇತ್ಯಾದಿ ಪ್ರಕ್ರಿಯೆಗಳನ್ನು ಸರಳಗೊಳಿಸಬೇಕು ಮತ್ತು ಆ ಸಂದರ್ಭದಲ್ಲಿ ಸಂತ್ರಸ್ತರೊಂದಿಗೆ ಸ್ನೇಹಪರವಾಗಿ ನಡೆದುಕೊಳ್ಳಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.