ಸ್ಮಾರ್ಟ್ ಕೋಲು!
ಕುರುಡರೇ ನಿಮಗ್ಯಾಕೆ ದಿಗಿಲು?
ಜಗತ್ತು ಪುನಃ ಪುನಃ ಸ್ಮಾರ್ಟ್ ಆಗುತ್ತಿದೆ. ಸ್ಮಾರ್ಟ್ಫೋನ್, ಸ್ಮಾರ್ಟ್ಕಾರ್ಡ್... ಈ ಇತ್ಯಾದಿಗಳ ನಂತರ ಈಗ ಸ್ಮಾರ್ಟ್ಕೇನ್ ಕಾಲಿಡುತ್ತಿದೆ. ಆದರೀ ತಂತ್ರಜ್ಞಾನ ಎಲ್ಲರಿಗೂ ಅಲ್ಲ. ಅಂಧರಿಗೆ ಮಾತ್ರ. ಈ ಮೂಲಕ ಅವರು ಸುಲಭವಾಗಿ ನಡೆದಾಡಬಹುದು, ಎಂಥದ್ದೇ ವಾಹನದಟ್ಟಣೆ ಇದ್ದರೂ ದಾಟಿಕೊಂಡು ಹೋಗಬಹುದು. ಇದುದೆಹಲಿಯಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆಯ ಆವಿಷ್ಕಾರ.
ಅದು ಮಾಯಾ ಕೋಲು: ಇದು ಕುರುಡರಿಗಾಗಿಯೇ ಮಾಡಿರುವ ವಿಶೇಷ ಕೋಲು. ಊರುಗೋಲುಗೆ ಸಿಕ್ಕ ತಾಂತ್ರಿಕ ಹೊಳಪು. ಕುರುಡರು ಬಳಸುವ ಬೆಳ್ಳನೆಯ ತೆಳುವಾದ ಕೋಲನ್ನು ನೀವೂ ನೋಡಿದ್ದೀರಿ. 1930ರಲ್ಲಿ ಪರಿಚಯಗೊಂಡು ವಿಶ್ವದಲ್ಲಿನ ಎಲ್ಲ ಕುರುಡರಿಗೆ ಹಲವು ಬಗೆಯಲ್ಲಿ ನೆರವಾದ ಸಾಧನವದು.
ಇದೇ ಸಾಧನಕ್ಕೀಗ ಹೊಸ ಕಳೆ ಸಿಕ್ಕಿದೆ. ಹೊಸ ಸಾಧನದಲ್ಲಿ ಸೆನ್ಸರ್ಗಳನ್ನು ಅಳವಡಿಸಲಾಗಿದ್ದು, ಇದು ಕುರುಡರು ನಡೆಯುವ ಹಾದಿಯಲ್ಲಿನ ಗುಂಡಿ, ಕಲ್ಲು, ವಾಹನಗಳು, ಪ್ರಾಣಿ- ಮನುಷ್ಯರು ಸೇರಿದಂತೆ ಎಲ್ಲ ರೀತಿಯ ಅಡೆ-ತಡೆಗಳನ್ನು ಇನ್ನೂ 10 ಅಡಿಗಳಷ್ಟು ದೂರದಲ್ಲೇ ಗುರುತಿಸಿ, ಕುರುಡರಿಗೆ ಧ್ವನಿಯ ಮೂಲಕ ಎಚ್ಚರಿಸುತ್ತದೆ. ಸೂಕ್ತ ದಾರಿ ಯಾವ ಕಡೆಗಿದೆ ಎನ್ನುವುದನ್ನೂ ಸೂಚಿಸುತ್ತದೆ.
ಕಾರ್ಯ ನಿರ್ವಹಣೆ ಹೇಗೆ?
ಈ ಕೋಲಿನಿಂದ ಅಲ್ಟ್ರಾಸೌಂಡ್ ಶಬ್ದ ತರಂಗಗಳನ್ನು ಸುತ್ತಲಿನ ಪರಿಸರಕ್ಕೆ ಹರಿಸಲಾಗುತ್ತದೆ. ಈ ಶಬ್ದ ತರಂಗಗಳು ಕುರುಡರು ನಡೆಯುವ ಹಾದಿಯಲ್ಲಿ ಮೊಣಕಾಲಿನಿಂದ ಮೇಲಕ್ಕಿರುವ ಅಡೆ-ತಡೆಗಳಿಗೆ ಬಡಿದು ಮತ್ತೆ ಬಂದ ದಿಕ್ಕಿನಲ್ಲೇ ವಾಪಸಾಗುತ್ತವೆ. ಹಾಗೆ ವಾಪಸ್ ಬಂದ ತರಂಗಳನ್ನು ಕೇನ್ನಲ್ಲಿನ ಸೆನ್ಸರ್ಗಳು ಹೀರಿಕೊಂಡು ಅಡೆ-ತಡೆಯ ದೂರವನ್ನು ಲೆಕ್ಕಹಾಕಿ, ಕುರುಡರಿಗೆ ಈ ಬಗ್ಗೆ ಸಂದೇಶ ಸಾರುತ್ತವೆ. ಸುಮಾರು 1 ಇಂಚಿನಷ್ಟು (3 ಸೆಂ.ಮೀ.) ತಡೆಯನ್ನೂ ಈ ಕೇನ್ ಗುರುತಿಸಬಲ್ಲದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

