ಉತ್ರಾಯಣ punಕಾಲ
* ಮೊನ್ನೆ ನಿಮ್ಮ ಮಾವ ಸತ್ತುಹೋದ್ರು ಅಂತ ರಜೆ ತಕೊಂಡ್ರಲ್ಲ?
ಉತ್ರ- ಹೌದು
ಅವರು ಇವಾಗ ಚೆನ್ನಾಗಿದ್ದಾರಾ?
* ಹಣ ಎಂದರೇನು?
ಉತ್ರ- ನಾನು ಬಡವ ಸ್ವಾಮಿ, ನನಗೆ ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.
* ಹದಿನೈದು ಹಣ್ಣುಗಳ ಹೆಸರು ಬರೆಯಿರಿ
ಉತ್ರ- ಮೂಸಂಬಿ, ಕಲ್ಲಂಗಡಿ, ಆ್ಯಪಲ್ ಮತ್ತು ಒಂದು ಡಜನ್ ಬಾಳೆಹಣ್ಣು
* ಪ್ರಪಂಚದಲ್ಲಿ ಒಟ್ಟು ಎಷ್ಟುದೇಶಗಳಿವೆ?
ಉತ್ರ - ಪ್ರಪಂಚದಲ್ಲಿ ಇರೋದು ಒಂದೇ ದೇಶ, ಅದು ಭಾರತ...ಮಿಕ್ಕಿದ್ದೆಲ್ಲಾ ವಿದೇಶ.
* ಈ ಛತ್ರಿ ಬಾಳಿಕೆ ಬರುತ್ತಾ?
ಉತ್ರ- ಖಂಡಿತಾ, ಆದ್ರೆ ನೀರಿಗೆ ಹಾಕ್ಬೇಡಿ
* ವಾಸ್ಕೋಡಗಾಮ ಭಾರತಕ್ಕೆ ಯಾಕೆ ಬಂದ?
ಉತ್ರ- ನನ್ನ ಫೇಲ್ ಮಾಡೋಕೆ
* ಕಾಯಿಸಿದಾಗ ಘನ ವಸ್ತುವಾಗಿ ಪರಿವರ್ತನೆ ಹೊಂದುವದ್ರವ ಯಾವುದು?
ಉತ್ರ - ಇಡ್ಲಿ, ದೋಸೆ
* ನಿನ್ನ ಚೂಡಿದಾರ ತುಂಬಾ ಚೆನ್ನಾಗಿದೆ, ಎಲ್ಲಿ ತಗೊಂಡೆ?
ಉತ್ರ- ಬಟ್ಟೆ ಅಂಗಡಿಯಲ್ಲಿ
* ರಾವಣನಿಗೆ ಹತ್ತು ತಲೆ ಇತ್ತು ಅಂದ್ರಲ್ಲ?
ಉತ್ರ- ಹೌದು, ಏನಿವಾಗ
ಎಡಗಡೆ ಎಷ್ಟಿದೆ, ಬಲಗಡೆ ಎಷ್ಟಿದೆ?
* 1983ರ ಕ್ರಿಕೆಟ್ ವಿಶ್ವಕಪ್ ಯಾರಿಗೆ ಸಿಕ್ತು?
ಉತ್ರ - ಗೆದ್ದವರಿಗೆ
* ಕ್ರಿಕೆಟ್ ಬಗ್ಗೆ ಅತೀ ಚಿಕ್ಕದಾದ ಒಂದು ಪ್ರಬಂಧ ಬರೆಯಿರಿ.
ಉತ್ರ- ಮಳೆ ಬಂದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಗಿದೆ.
* ಈ ಸೇಬನ್ನು ಎರಡು ಭಾಗ ಮಾಡಿ ಇಬ್ಬರೂ ತಿನ್ನೋಣವೇ?
ಉತ್ರ : ಬೇಡ, ನಾಲ್ಕು ಭಾಗ ಮಾಡಿ ಎರಡೆರಡು ತಿನ್ನೋಣ, ನಂಗೆ ತುಂಬಾ ಹಸಿವಾಗ್ತಿದೆ.
* ಮಹಾತ್ಮ ಗಾಂಧೀಜಿ ಸಾಯದೇ ಇದ್ದಿದ್ದರೆ?
ಉತ್ರ- ಈಗಲೂ ಬದುಕಿರುತ್ತಿದ್ದರು.
* ಕ್ಲೋರೈಡ್ ಅನ್ನು ಕಾಯಿಸಿದಾಗ ಏನಾಗುತ್ತದೆ?
ಉತ್ರ- ಕಾಯುತ್ತದೆ.
* ಮೊಘಲರು ಎಲ್ಲಿಯವರೆಗೆ ರಾಜ್ಯಭಾರ ಮಾಡಿದರು?
ಉತ್ರ- ಸುಮಾರು 14ನೇ ಪುಟದಿಂದ 22ನೇ ಪುಟಗಳವರೆಗೆ
* ನೀರಿನಿಂದ ಯಾಕೆ ಕರೆಂಟ್ ತೆಗೀತಾರೆ?
ಉತ್ರ-ಸ್ನಾನ ಮಾಡೋವಾಗ ಶಾಕ್ ಹೊಡೆಯುತ್ತೆ ಅಂತ.
* ಮಾವು ಹೆಚ್ಚಾಗಿ ಎಲ್ಲಿ ಬೆಳೆಯುತ್ತದೆ
ಉತ್ರ- ಮರದಲ್ಲಿ
* ಭೂಮಿ ಗುಂಡಗಿದೆ ಎನ್ನುವುದನ್ನು ಹೇಗೆ ನಿರೂಪಿಸುವಿರಿ
ಉತ್ರ- ಭೂಮಿ ಗುಂಡಗಿದೆ ನಿಜ, ನಮ್ಮೇಷ್ಟ್ರು ಹೇಳಿದ್ರು. ಅವರು ಯಾವತ್ತೂ ಸುಳ್ಳು ಹೇಳುವುದಿಲ್ಲ.
* ಏಷ್ಯಾದ ಪ್ರಥಮ ಹಾಕಿ ಪಂದ್ಯ ಎಲ್ಲಿ ನಡೆಯಿತು?
ಉತ್ರ- ಹಾಕಿ ಕ್ರೀಡಾಂಗಣದಲ್ಲಿ
* ಶ್ರೀಕೃಷ್ಣ ಎಷ್ಟು ಹುಡುಗಿಯರನ್ನು ಮದ್ವೆ ಆಗಿದ್ದ
ಉತ್ರ- ಅವನು ಮದ್ವೆಯಾಗಿರೋರೆಲ್ಲಾ ಹುಡುಗಿಯರೇ.
* ಮಾತು ಬರದವರನ್ನು ಮೂಗ ಎಂದು ಕರೆದರೆ, ಕಿವಿಕೇಳಿಸದವನನ್ನು ಹೇಗೆ ಕರೆಯುತ್ತಾರೆ?
ಉತ್ರ- ಹೇಗೆ ಬೇಕಾದರೂ ಕರೆಯಬಹುದು, ಏಕೆಂದರೆ ಅವರಿಗೆ ಕೇಳಿಸಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

