ಪ್ರಧಾನ ಸುದ್ದಿ

ರಾಜಕಾರಣಿಗಳೇ ಮೊದಲು ಆಡಂಬರದ ವಿವಾಹಗಳಿಂದ ದೂರ ಇರಿ

ರಾಜಕಾರಣಿಗಳೇ ಮೊದಲು ಆಡಂಬರದ ವಿವಾಹಗಳಿಂದ ದೂರ ಇರಿ
Published On :

ಅದ್ಧೂರಿ ಮದುವೆಗೆ ತೆರಿಗೆ ವಿಧಿಸುವ ರಾಜ್ಯ ಸರ್ಕಾರದ ಪ್ರಸ್ತಾಪದ ವಿರುದ್ಧ ಎಲ್ಲ ವರ್ಗದ ಜನರಿಂದಲೂ ಟೀಕೆಗಳ ಮಹಾಪೂರ ಬರುತ್ತಲೇ ಇದೆ. ಆದರೆ ಅದು ಸರ್ಕಾರವನ್ನಾಗಲೀ, ಇಂಥ ಹೇಳಿಕೆ ನೀಡಿದ ಸಚಿವರನ್ನಾಗಲೀ ತಟ್ಟಿದಂತೆ ಕಾಣುತ್ತಿಲ್ಲ.

ಸಚಿವರೂ ಪಾಲಿಸಲಿ
ಆಡಂಬರದ ಮದುವೆಗಳಿಗೆ ನಾನು ಮೊದಲಿನಿಂದಲೂ ವಿರೋಧಿ. ಹೀಗಾಗಿ ಆಡಂಬರದ ಮದುವೆಗಳು ಸರಿಯಲ್ಲ ಎನ್ನುವ ವಾದದ ಮೂಲಕವೇ ಸರ್ಕಾರದ ನಿರ್ಧಾರವನ್ನು ಒಪ್ಪಿಕೊಳ್ಳುವ ಮುಂಚೆ ಅದು ಸೃಷ್ಟಿಸಿರುವ ಗೊಂದಲಗಳ ಬಗ್ಗೆ ಇಲ್ಲಿ ಹೇಳಬೇಕು. ರಾಜಕಾರಣಿಗಳು ತಮ್ಮ  ಚುನಾವಣೆಯ ಖರ್ಚು ವೆಚ್ಚಗಳನ್ನು ಆಯೋಗಕ್ಕೆ ನೀಡಿದಂತೆ ನಾಳೆ, ಮದುವೆ ಲೆಕ್ಕಗಳು ತಪ್ಪು-ತಪ್ಪಾಗಿ  ಸಿಗೋದಿಲ್ಲ ಎನ್ನುವ ಬಗ್ಗೆ ಅನುಮಾನವಿಲ್ಲ. ಹೀಗಾಗಿ ಮೊದಲು ಕಾನೂನು ರೂಪಿಸುವ ಮುನ್ನ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ. ಸಚಿವರು ಆಡಂಬರದ ಮದುವೆ, ಕಾರ್ಯಕ್ರಮ, ಸಮಾರಂಭಗಳಿಗೆ ಹೋಗುವುದನ್ನು ನಿಲ್ಲಿಸಿ, ಇತರರಿಗೆ ಮೇಲ್ಪಂಕ್ತಿ ಹಾಕಿ ತೋರಿಸಬೇಕಿದೆ. ಏಕೆಂದರೆ ಆಡಂಬರದ ವಿವಾಹಗಳು ಶುರುವಾಗೋದೇ ಈ ರಾಜಕಾರಣಿಗಳಿಂದ. ಇವರೂ ಕೂಡ ತಪ್ಪು ಲೆಕ್ಕ ಕೊಟ್ಟು, ಕಾನೂನುಗಳಿಂದ ನುಣುಚಿಕೊಳ್ಳುವ ಸಾಧ್ಯತೆಯಿದೆ. ಜೊತೆಗೆ ಸರ್ಕಾರ ಮಾಡಬೇಕಾದದ್ದು ಇದು ಮಾತ್ರವೇ ಅಲ್ಲ, ಸಾಕಷ್ಟಿವೆ. ಆ ಕಡೆ ಹೆಚ್ಚು ಗಮನಹರಿಸಲಿ.
-ಪ್ರೊ.ಬರಗೂರು ರಾಮಚಂದ್ರಪ್ಪ, ಬಂಡಾಯ ಸಾಹಿತಿ

ಚಿಂತನೆ ಸರಿ, ಕಾಯ್ದೆ ತಪ್ಪು

ಮದುವೆಗಳು ಸರಳವಾಗಿರಬೇಕು ಎನ್ನುವ ಸರ್ಕಾರದ ಚಿಂತನೆ ಸರಿಯಾಗಿದೆ. ಆದರೆ ಅದಕ್ಕಂತಲೇ ಕಾನೂನು ಜಾರಿಗೆ ತಂದು ಅನುಷ್ಠಾನಗೊಳಿಸುವುದು ತುಂಬಾ ಕಷ್ಟವಿದೆ. ಕಾನೂನು ತಂದಾಕ್ಷಣ ಎಲ್ಲವೂ ಸರಳವಾಗಿರುತ್ತೆ ಎನ್ನುವುದಕ್ಕೆ ಸಾಧ್ಯವಿಲ್ಲ. ಅದಕ್ಕೂ ಮುನ್ನ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ. ಸರ್ಕಾರದಿಂದ ಮೊದಲು ಆ ಕೆಲಸವಾಗಲಿ.
-ಡಾ.ಎಂ.ಚಿದಾನಂದಮೂರ್ತಿ,
ಸಾಹಿತಿ, ಸಂಶೋಧಕ

ಅರಿವು ಬೇಕಿದೆ

ಸರ್ಕಾರದ ಈ ನಿಲುವಿನಲ್ಲಿ ಎರಡು ವಿಚಾರಗಳಿವೆ. ಒಂದು, ದುಬಾರಿ ಮದುವೆಗಳು ಬೇಡ. ಯಾರೋ ಶ್ರೀಮಂತರ ಮಾಡುವುದನ್ನು ನೋಡಿ ಬಡವರೂ ಅದ್ಧೂರಿಯಾಗಿ ಮದುವೆ ಮಾಡಲು ಹೋಗುತ್ತಾರೆ. ಇದರಿಂದ ಸಾಲಗಳು ಜಾಸ್ತಿಯಾಗಿ, ಬಡವರು ತಮ್ಮ ಮೇಲೆ ತಾವೇ ಆರ್ಥಿಕ ಹೊರೆ ಹೊತ್ತುಕೊಳ್ಳುತ್ತಾರೆ. ಹೀಗಾಗಿ ದುಬಾರಿ ಮದುವೆ ಬೇಡ ಎನ್ನುವುದು ಸರಿ. ಎರಡನೆಯದು, ಇಂಥ ಸಂಪತ್ತಿನ ಸುಪ್ಪತ್ತಿಗೆಯಲ್ಲಿ ಮದುವೆಗಳು ನಡೆದರೆ ಕಪ್ಪು ಹಣ ಹೊರಗೆ ಬರುತ್ತದೆ. ನೂರಾರು ಮಂದಿಗೆ ಕೆಲಸ ಸಿಗುತ್ತದೆ ಎನ್ನುವ ಅಭಿಪ್ರಾಯವಿದೆ. ಇದಕ್ಕೆ ಕಡಿವಾಣ ಹಾಕಬೇಕು ಅಂತ ಹೊರಟರೆ ಅದು ಜಾರಿಯಾಗುತ್ತದೆಯೇ? ಯಾಕೆಂದರೆ ದುಬಾರಿ ಮದುವೆಗಳನ್ನು ಎಲ್ಲರೂ ಒಪ್ಪಿಕೊಂಡು ಆಗಿದೆ. ಹೀಗಾಗಿ ದುಬಾರಿ ಮದುವೆಗಳ ಸರಿ, ತಪ್ಪುಗಳ ಬಗ್ಗೆ, ಅವುಗಳ ಅಗತ್ಯತೆಗಳ ಕುರಿತು ವ್ಯಾಪಕ ಚರ್ಚೆಯಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಿದೆ. ಅದನ್ನು ಮಾಡದೆ ಕಾಯ್ದೆ ತರುತ್ತೇವೆ ಎನ್ನುವುದು ಎಷ್ಟು ಸರಿ?
-ಎಸ್.ಸುರೇಶ್ ಕುಮಾರ್, ಮಾಜಿ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.