ಪ್ರಧಾನ ಸುದ್ದಿ

ಮೋದಿ ಕನಸಿನ ಸೂಪರ್ ಎನ್‌ಡಿಎ

ಮೋದಿ ಕನಸಿನ ಸೂಪರ್ ಎನ್‌ಡಿಎ
Published On :

ನವದೆಹಲಿ: ಎಐಎಡಿಎಂಕೆ ಬೆಂಬಲವನ್ನೂ ಗಿಟ್ಟಿಸಿಕೊಳ್ಳುವ ಮೂಲಕ ಬಿಜೆಪಿ ನೇತೃತ್ವದ ಮೈತ್ರಿಕೂಟವನ್ನು 'ಸೂಪರ್ ಎನ್‌ಡಿಎ' ಮಾಡ ಹೊರಟಿದ್ದಾರೆ ಪ್ರಧಾನಿ.
ತಮಿಳುನಾಡು ಸಿಎಂ ಜಯಲಲಿತಾ ಮತ್ತು ಮೋದಿ ಮಂಗಳವಾರದ ಭೇಟಿ ಇಂಥ ಚರ್ಚೆ ಹುಟ್ಟುಹಾಕಿದೆ. ಬಳಿಕ ಮಾತನಾಡಿದ ಜಯಾ, ರಾಜ್ಯಸಭೆ ಸಂಖ್ಯಾ ಬಲದ ಕುರಿತ ಪ್ರಶ್ನೆಗೆ, 'ಅಂಥ ಸನ್ನಿವೇಶ ಬಂದಾಗ ನೋಡೋಣ' ಎಂದು ನಗುತ್ತ ನುಡಿದರು.
ಲೋಕಸಭೆಯಲ್ಲಿ 37 ಸದಸ್ಯರ ಎಡಿಎಂಕೆ, ಮೂರನೆ ದೊಡ್ಡ ಪಕ್ಷ. ರಾಜ್ಯಸಭೆಯಲ್ಲಿ 10 ಸದಸ್ಯರಿದ್ದಾರೆ. ಇನ್ನು ಲೋಕಸಭೆಯಲ್ಲಿ 34, ರಾಜ್ಯಸಭೆಯಲ್ಲಿ 12 ಸದಸ್ಯರುಳ್ಳ ತೃಣಮೂಲದ ಮಮತಾ ಬ್ಯಾನರ್ಜಿ, 'ಒಳ್ಳೆಯ ಕೆಲಸ ಮಾಡಿದರೆ ಬೆಂಬಲಿಸುತ್ತೇವೆ' ಎಂದಿದ್ದಾರೆ. ಈ ಎರಡೂ ಬೆಂಬಲಿಸಿದರೆ ಲೋಕಸಭೆ ಎನ್‌ಡಿಎ ಬಲ 406ಕ್ಕೆ ಉಬ್ಬಲಿದೆ. ಎಡಿಎಂಕೆ, ಟಿಎಂಸಿ, ಬಿಜೆಡಿ ಸೇರಿದರೆ ರಾಜ್ಯಸಭೆಯಲ್ಲಿ  ಸದಸ್ಯಬಲ 90.  9 ಪಕ್ಷೇತರರು, ಸಣ್ಣ ಪುಟ್ಟ ಪಕ್ಷಗಳ ಬೆಂಬಲ ಗಿಟ್ಟಿಸಿಕೊಳ್ಳುವುದು ಕಷ್ಟವಲ್ಲ.

243 ರಾಜ್ಯಸಭೆಯ ಸದಸ್ಯ ಬಲ
233  ಹಾಲಿ ಸಂಖ್ಯಾಬಲ (10 ಸ್ಥಾನ ಖಾಲಿ)
64 ಬಿಜೆಪಿ(42) ಸೇರಿ ಎನ್‌ಡಿಎ ಸದಸ್ಯರು ಕಾವೇರಿ ನಿರ್ವಹಣಾ  
10 ಎಐಎಡಿಎಂಕೆ
12 ಟಿಎಂಸಿ
4 ಬಿಜೆಡಿ

ಮಂಡಳಿ ರಚನೆಗೆ ಆಗ್ರಹ
ಪ್ರಧಾನಿ ಭೇಟಿ ವೇಳೆ ಕಾವೇರಿ ವಿಷಯ ಪ್ರಸ್ತಾಪಿಸಿದ ಜಯಲಲಿತಾ, ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿದ್ದಾರೆ. ಮತ್ತು ಮುಲ್ಲಾಪೆರಿಯಾರ್ ಅಣೆಕಟ್ಟೆ ಎತ್ತರವನ್ನು 142 ಅಡಿಗೆ ಹೆಚ್ಚಿಸುವ ಸಂಬಂಧ ಸಂಪುಟ ಉಪ ಸಮಿತಿ ರಚನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಒಳಗೊಂಡ 142 ಪುಟಗಳ ಮನವಿಯನ್ನು ಪ್ರಧಾನಿಗೆ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.