ನಾವು ಪಾಂಡವರಿದ್ದೇವೆ, ಸೊಕ್ಕಿನಿಂದ ಮೆರೆಯಬೇಡಿ

ನವದೆಹಲಿ: 'ನಾವು ಕೇವಲ 44 ಜನ ಇರಬಹುದು. ಆದರೆ ಪಾಂಡವರು ಕೌರವರಿಗೆ ಎಂದೂ ಹೆದರಲಿಲ್ಲ ಎನ್ನುವುದನ್ನು ಮರೆಯಬೇಡಿ...'
ಹೀಗೆ ತಮ್ಮ ಪಕ್ಷವನ್ನು ಪಾಂಡವರಿಗೂ, ಬಿಜೆಪಿಯನ್ನು ಕೌರವರಿಗೂ ಹೋಲಿಸಿಕೊಂಡು ಸರ್ಕಾರದ ಕಿವಿ ಹಿಂಡಿದವರು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ.
'ಕೆಟ್ಟ ಆಡಳಿತದಿಂದಾಗಿ ನಿಮ್ಮ ಪಕ್ಷ ಪ್ರಾದೇಶಿಕ ಪಕ್ಷದ ಸ್ಥಿತಿ ತಂದುಕೊಂಡಿದೆ' ಎಂಬ ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಡಿ ವ್ಯಂಗ್ಯೋಕ್ತಿಗೆ ಉತ್ತರಿಸಲು ಅವರು ಬಳಸಿಕೊಂಡಿದ್ದು ಮಹಾಭಾರತದ ಉದಾಹರಣೆ. ಖರ್ಗೆ ಈ ಮಾತುಗಳನ್ನು ಹೇಳುತ್ತಿದ್ದಂತೆ ಸೋನಿಯಾ ಸಹಿತ ಪ್ರತಿಪಕ್ಷಗಳ ಸಾಲಿನಲ್ಲಿದ್ದವರು ಮೇಜು ಕುಟ್ಟಿ ಬೆಂಬಲ ಸೂಚಿಸಿದರು. ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಚರ್ಚೆಯಲ್ಲಿ ಭಾಗವಹಿಸಿದ ಖರ್ಗೆ 45 ನಿಮಿಷ ಮಾತನಾಡಿದರು. ನಮ್ಮದೇ ನಕಲು: ರಾಷ್ಟ್ರಪತಿ ಭಾಷಣದಲ್ಲಿ ಹೊಸತೇನೂ ಇಲ್ಲ. ನಾವು ಈಗಾಗಲೇ ಮಾಡಿರುವುದನ್ನು ಮೋದಿ ಇನ್ನೊಂದು ರೀತಿಯಲ್ಲಿ ಹೇಳಿದ್ದಾರೆ. ಮಾರ್ಕೆಟಿಂಗ್ನಲ್ಲಿ ಬಿಜೆಪಿ ಪಳಗಿದೆ ಎಂದು ಹೇಳಿದರು. ಭಾರಿ ಬಹುಮತ ಸಿಕ್ಕಿದೆ ಎನ್ನುವ ಸೊಕ್ಕು ಪ್ರದರ್ಶಿಸಬೇಡಿ. ಬರಿಯ ಘೋಷಣೆಗಳಿಂದ ಪ್ರಯೋಜನವಿಲ್ಲ. ಭರವಸೆಗಳನ್ನು ಈಡೇರಿಸಲು ಗಮನ ಕೊಡಿ ಎಂದು ಖರ್ಗೆ ಕಿವಿಮಾತು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


