ಗಂಗಾ ಶುದ್ಧ ಸುಳ್ಳು; ವ್ಯಯಿಸಿದ್ದು ಶೇ.5 ಹಣ ಮಾತ್ರ

ನವದೆಹಲಿ: ಗಂಗೆ ಶುದ್ಧ ಮಾಡುತ್ತೇವೆ ಎಂದು 3 ದಶಕಗಳಿಂದ ಕೇಂದ್ರ ಸರ್ಕಾರ ಶುದ್ಧ ಸುಳ್ಳು ಹೇಳುತ್ತಿದೆ!
ಕೇಂದ್ರ ಹಾಗೂ 5 ರಾಜ್ಯ ಸರ್ಕಾರಗಳು 30 ವರ್ಷಗಳಲ್ಲಿ ಗಂಗೆ ಶುಚಿಗೊಳಿಸಲು ಖರ್ಚು ಮಾಡಿದ ಹಣ ಕೇವಲ ರೂ.967 ಕೋಟಿ! ಮೀಸಲಿಟ್ಟ ಅನುದಾನ ಬರೋಬ್ಬರಿ ರೂ.20 ಸಾವಿರ ಕೋಟಿ! ಅಂದರೆ ಅದರಲ್ಲಿ ಗಂಗೆಯ ಮಡಿಲಿಗೆ ಹಾಕಿದ್ದು ಶೇ.5ರಷ್ಟು ಮಾತ್ರ.
ವಿಚಿತ್ರವೆಂದರೆ ಬೇರೆ ಕಾಮಗಾರಿಗಳಲ್ಲಿ ರಾಜಕಾರಣಿಗಳು ತಮ್ಮ ಜೇಬು ತುಂಬಿಸಿಕೊಳ್ಳಲಾದರೂ ಹಣ ಖರ್ಚು ಮಾಡುತ್ತಾರೆ, ಆದರೆ ಗಂಗೆಯ ವಿಚಾರದಲ್ಲಿ ಅದಕ್ಕೂ ಹೆದರಿದಂತಿದೆ. ಕೇಂದ್ರ ಪರಿಸರ ಇಲಾಖೆ ಮೂಲಗಳ ಪ್ರಕಾರ ಶುದ್ಧೀಕರಣಕ್ಕೆ ಸಾವಿರಾರು ಕೋಟಿ ಸುರಿದಿರುವುದೇ ದೊಡ್ಡ ಸುಳ್ಳು. ಕಾರ್ಯ ಯೋಜನೆ ಮೊದಲ ಎರಡೂ ಹಂತದ ಯಾವೊಂದು ಕಾರ್ಯಕ್ರಮವೂ ಅಂತ್ಯಗೊಂಡಿಲ್ಲ. ಸಾವಿರಾರು ಕೋಟಿಯ ಮಾತನಾಡುವ ಸರ್ಕಾರಗಳು ವರ್ಷವೊಂದಕ್ಕೆ ವ್ಯಯಿಸಿದ್ದು ಕೇವಲ ರೂ.30 ಕೋಟಿ.
ಪ್ರಧಾನಿ ನೇತೃತ್ವದ ರಾಷ್ಟ್ರೀಯ ನದಿ ಸಂರಕ್ಷಣಾ ಪ್ರಾಧಿಕಾರ 10 ವರ್ಷದಲ್ಲಿ ಒಮ್ಮೆಯೂ ಸಭೆ ಸೇರಿಲ್ಲ. ನೆಪಕ್ಕೂ ಪ್ರಗತಿ ಪರಿಶೀಲನೆ ಮಾಡಿಲ್ಲ. ಉತ್ತರಪ್ರದೇಶ, ಉತ್ತರಾಖಂಡ, ಬಿಹಾರ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳವೂ ಅಸಡ್ಡೆ ತೋರಿಸಿವೆ.
ಚರಂಡಿ ನೀರಿಗೆ ಸೀಮಿತ: ರಾಜೀವ್ ಗಾಂಧಿ ಅವಧಿಯಿಂದ ಇರುವ ಯೋಜನೆಯಲ್ಲಿ ಇವತ್ತಿನವರೆಗೆ ಸರ್ಕಾರಿ ಪ್ರಾಧಿಕಾರಗಳ ಕೆಲಸ ಕೇವಲ ಚರಂಡಿ ನೀರಿಗೆ ಸೀಮಿತ. ಪ್ರಗತಿ ವರದಿ ಪರಿಶೀಲಿಸಿದರೆ ಶೇ.30 ಕಾರ್ಯ ಮಾತ್ರ ಪೂರ್ಣ.
ಯೋಜನೆ ಹಳ್ಳ ಹಿಡಿಯಲು ಇಲಾಖೆಗಳ ಸಮನ್ವಯ ಕೊರತೆ ಹಾಗೂ ಪಂಚ ರಾಜ್ಯಗಳು ಕೇಂದ್ರದೊಂದಿಗೆ ಮಾತುಕತೆ ನಡೆಸದಿರುವುದೇ ಕಾರಣ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ. ಈ ಹಿನ್ನೆಲೆಯಲ್ಲಿ ನೂತನ ಸರ್ಕಾರ ಸಂಬಂಧಪಪಟ್ಟ ಇಲಾಖೆಗಳನ್ನು ಒಗ್ಗೂಡಿಸಿ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲು ಮುಂದಡಿ ಇಟ್ಟಿದೆ.
ಗಂಗಾ ಕಾರ್ಯ ಯೋಜನೆ
-461 ಕೋಟಿ ಮೊದಲ ಹಂತದಲ್ಲಿ ವ್ಯಯ
- 869 ದಶಲಕ್ಷ ಲೀ. ಚರಂಡಿ ನೀರು ನಿಯಂತ್ರಣ
- 506 ಕೋಟಿ ಎರಡನೇ ಹಂತದಲ್ಲಿಖರ್ಚು
- 229 ದಶಲಕ್ಷ ಲೀ. ಚರಂಡಿ ನೀರಿನ ನಿಯಂತ್ರಣ
- 3000 ದಶಲಕ್ಷ ಲೀ. ನೀರಿನ ಸಂಸ್ಕರಣೆ ಕಾರ್ಯ ಯೋಜನೆ ಗುರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


