ಪ್ರಧಾನ ಸುದ್ದಿ

ಕೋಮಾದಿಂದ ಕಾಮನ್ ಸ್ಟೇಜಿಗೆ ಫಾರ್ಮುಲಾ ರಾಜಕುಮಾರ

ಕೋಮಾದಿಂದ ಕಾಮನ್ ಸ್ಟೇಜಿಗೆ ಫಾರ್ಮುಲಾ ರಾಜಕುಮಾರ
Published On :

ಬೆರ್ಲಿನ್(ಫ್ರಾನ್ಸ್): ಸ್ಕೀಯಿಂಗ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕೋಮಾ ಸ್ಥಿತಿಗೆ ತಲುಪಿದ್ದ ಖ್ಯಾತ ಮಾಜಿ ಎಫ್1 ಚಾಲಕ ಮೈಕೆಲ್ ಶುಮಾಕರ್ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಅವರ ಮ್ಯಾನೇಜರ್ ಸೋಮವಾರ ತಿಳಿಸಿದ್ದಾರೆ.
ಫ್ರಾನ್ಸ್ ಗ್ರೆನೊಬೆಲ್ ಆಸ್ಪತ್ರೆಯಿಂದ ಶುಮಾಕರ್ ಬಿಡುಗಡೆಯಾಗಿದ್ದಾರೆ ಎಂದು ಅವರ ಮ್ಯಾನೇಜರ್ ಸಬಿನೆ ಕೆಹ್ಮ್ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಆದರೆ ಎಫ್ 1 ಚಾಂಪಿಯನ್ ಶುಮಾಕರ್ ಅವರು ಆಸ್ಪತ್ರೆಯಿಂದ ಎಲ್ಲಿಗೆ ತೆರಳಿದ್ದಾರೆ ಮತ್ತು ಸದ್ಯ ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಕಳೆದ ಡಿಸೆಂಬರ್ 29ರಂದು ನಡೆದ ಅಪಘಾತದಲ್ಲಿ ಶುಮಾಕರ್ ತಲೆ ಕಲ್ಲಿನ ಬಂಡೆಗೆ ಬಡಿದು ಮೆದುಳಿಗೆ ತೀವ್ರವಾದ ಹೊಡೆತ ಬಿದ್ದಿತ್ತು. ಹೀಗಾಗಿ ಅವರನ್ನು ವೈದ್ಯರು ಕೋಮಾದಲ್ಲಿರಿಸಿದ್ದರು. ಈಗ ಶುಮಾಕರ್ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದೆ ಎನ್ನಲಾಗುತ್ತಿದೆ.

ಅಂದು ಆಗಿದ್ದೇನು?

ಡಿಸೆಂಬರ್ 29ರಂದು ಸ್ಕೀಯಿಂಗ್ ಅಪಘಾತದಲ್ಲಿ ಮೈಕೆಲ್ ಶುಮಾಕರ್ ಅವರು ತೀವ್ರವಾಗಿ ಗಾಯಗೊಂಡಿದ್ದರು. ಇಲ್ಲಿನ ಫ್ರೆಂಚ್ ಆಲ್ಬ್ಸ್ ವಲಯದ ಮೆರಿಬೆಲ್ ಸ್ಥಳದಲ್ಲಿ ಸ್ಕೀಯಿಂಗ್ ವೇಳೆ ಆಯತಪ್ಪಿ ಬೀಳುವಾಗ ದೊಡ್ಡಬಂಡೆಗೆ ತಲೆ ಬಡಿಯಿತು. ಸ್ಕೈ ಹೆಲ್ಮೆಟ್ ಧರಿಸಿದ್ದರೂ ಶುಮಾಕರ್ ಅಪಾಯದಿಂದ ಪಾರಾಗಿರಲಿಲ್ಲ. ನಿರಂತರ ಚಿಕಿತ್ಸೆ ಬಳಿಕ ವೈಧ್ಯರು ಮಾರ್ಚ್ 7ರಂದು ಶುಮಾಕರ್ ಸ್ಥಿತಿ ಗಂಭೀರವಾಗಿದೆ ಎಂದು ಸುದ್ದಿಗೋಷ್ಟಿಯಲ್ಲಿ ಹೇಳಿದ್ದರು. ಇದಲ್ಲದೆ ಶುಮಾಕರ್ ಬದುಕಿಯೇ ಬುದುಕುತ್ತಾನೆ ಎಂದು ಅಪರಿಮಿತ ಭರವಸೆ ಇಟ್ಟಿದ್ದು ಆತನ ಪತ್ನಿ ಕೊರಿನ್ನಾ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.