ಪ್ರಧಾನ ಸುದ್ದಿ

ಪರಿಷತ್‌ಗೆ ಕೆ.ಪಿ. ನಂಜುಂಡಿ ಕಳುಹಿಸಿ

ಪರಿಷತ್‌ಗೆ ಕೆ.ಪಿ. ನಂಜುಂಡಿ ಕಳುಹಿಸಿ
Published On :

ಬೆಂಗಳೂರು: ವಿಶ್ವಕರ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಬೇಕು. ಅದಕ್ಕೆ ನಮ್ಮ ಸಮುದಾಯದ ನಾಯಕ ಕೆ.ಪಿ. ನಂಜುಂಡಿಯೇ ಆಗಬೇಕು. ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡುವಂತೆ ವಿಶ್ವಕರ್ಮ ಸಮಾಜ ಸೇವಾ ಟ್ರಸ್ಟ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯ ಯುವ ಘಟಕ ರಾಜ್ಯಾಧ್ಯಕ್ಷ ಆರ್. ಶ್ರೀನಿವಾಸ ವಿಶ್ವಕರ್ಮ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬರಲು ವಿಶ್ವಕರ್ಮ ಸಮುದಾಯ ಬೆಂಬಲ ಅವಶ್ಯಕ. ಅದಕ್ಕೆ ಪೂರಕವಾಗಿ ನಂಜುಂಡಿಯವರನ್ನು ಬಳಸಿಕೊಂಡು ಅಧಿಕಾರಕ್ಕೆ ಬರಲು ಯಶಸ್ವಿಯಾಗಿದೆ. ಪಕ್ಷ ಅಧಿಕಾರಕ್ಕೆ ಬರಲು ಮಾತ್ರ ನಮ್ಮ ಸಮುದಾಯ ಹಾಗೂ ನಾಯಕನ್ನು ಬಳಸಿಕೊಳ್ಳುತ್ತಿದ್ದು, ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯತೆ ನೀಡುವಲ್ಲಿ ಸರ್ಕಾರ ನಮ್ಮನ್ನು ವಂಚಿಸುತ್ತಿದೆ ಎಂದು ಆರೋಪಿಸಿದರು.
ಚಾಮುಂಡಿ ಆಣೆ ಮುರಿದ ಪರಮೇಶ್ವರ್: ಈ ಹಿಂದೆ 8 ಬೇಡಿಕೆಗಳು ಈಡೇರಿಸುವಂತೆ ಒತ್ತಾಯಿಸಿ ಚಾಮುಂಡಿ ಬೆಟ್ಟದಿಂದ ಪಾದಯಾತ್ರೆ ಕೈಗೊಳ್ಳುವಾಗ ನಿಮ್ಮ ಬೇಡಿಕೆಗಳನ್ನು ಅಧಿಕಾರ ಬಂದ ಅರ್ಧ ತಾಸಿನಲ್ಲಿ ಈಡೇರಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ನವರು ವಾಗ್ದಾನ ನೀಡಿದ್ದರು. ನಂಜುಂಡಿಯವರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡುವುದು ಬೇಡಿಕೆಯಲ್ಲೊಂದು ಎಂಬುದನ್ನು ಪರಮೇಶ್ವರ್‌ರವರಿಗೆ ಮತ್ತೆ ನೆನಪಿಸಿದರು.
ಕುರುಬ ಸಮುದಾಯ ನಂತರ ದೊಡ್ಡ ಸಮುದಾಯ ನಮ್ಮದು. ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯತೆ ನೀಡಲು ನಮ್ಮ ಸಮುದಾಯದವರನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಜೇನುಗೂಡು ವಿಶ್ವಕರ್ಮ ಬಳಗ ಅಧ್ಯಕ್ಷ ಮಾತನಾಡಿ, ಸಮಸ್ತ ವಿಶ್ವಕರ್ಮ ಸಮುದಾಯವು ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ತಮ್ಮ ಸರ್ವಸ್ವವನ್ನು ಮುಡುಪಾಗಿಟ್ಟು ಗೆಲುವಿಗೆ ಸಹಕರಿಸಿವೆ. ಇದರ ಋಣ ತೀರಿಸುವ ಅವಕಾಶವಿದ್ದು, ವಿಧಾನಪರಿಷತ್‌ಗೆ ನಮ್ಮ ಸಮುದಾಯದ ನಾಯಕನನ್ನೇ ನಾಮನಿರ್ದೇಶನ ಮಾಡಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಗರದ ಶ್ರೀ ಕಾಳಿಕಾದೇವಿ ಮಹಿಳಾ ವಿಶ್ವಕರ್ಮ ಸಂಘದ ಮಹಿಳಾ ಅಧ್ಯಕ್ಷ ಕುಮಾರಿ, ದೊಡ್ಡಬಳ್ಳಾಪುರದ ವಿಶ್ವಕರ್ಮ ಸಮಾಜ ಯುವಕರ ಸಂಘದ ಸೇವಾಧ್ಯಕ್ಷ ಎಚ್.ವಿ. ಷಣ್ಮುಗಾಚಾರ್ ಹಾಗೂ ಹೊಸಕೋಟೆ ತಾಲೂಕು ವಿಶ್ವಕರ್ಮ ಸಮಾಜ ಟ್ರಸ್ಟ್ ಅಧ್ಯಕ್ಷ ಅಣ್ಣಯ್ಯಚಾರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.