ಜು.7-ಆ.14ರವರೆಗೆ ಮೋದಿ ಸರ್ಕಾರದ ಚೊಚ್ಚಲ ಅಧಿವೇಶನ

ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಮೊದಲ ಸಂಸತ್ ಅಧಿವೇಶನಕ್ಕೆ ಮುಹೂರ್ತ ನಿಗದಿಯಾಗಿದೆ. ಜುಲೈ 7ರಿಂದ ಆಗಸ್ಟ್ 14ರವರೆಗೆ ಅಧಿವೇಶನ ನಡೆಯಲಿದೆ. ರೇಲ್ವೆ ಸಚಿವ ಸದಾನಂದ ಗೌಡ ಜು.8ರಂದು ತಮ್ಮ ಚೊಚ್ಚಲ ರೇಲ್ವೆ ಬಜೆಟ್ ಮಂಡಿಸಲಿದ್ದಾರೆ. ನಂತರ ಜು.10ರಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಕೇಂದ್ರದ ಸಾಮಾನ್ಯ ಆಯವ್ಯಯವನ್ನು ದೇಶದ ಮುಂದಿಡಲಿದ್ದಾರೆ. ಜು.9ಕ್ಕೆ ಆರ್ಥಿಕ ಸಮೀಕ್ಷೆ ವರದಿ ಬಿಡುಗಡೆಯಾಗಲಿದೆ. ಸೋಮವಾರ ನಡೆದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಬಜೆಟ್ ಅಧಿವೇಶನ
ಅಧಿವೇಶನದ ಅವಧಿ ಜು.7-ಆ.14
ರೇಲ್ವೆ ಬಜೆಟ್ ಜು.8
ಆರ್ಥಿಕ ಸಮೀಕ್ಷೆ ಜು.9
ಕೇಂದ್ರ ಬಜೆಟ್ ಜು.10
ಲೇಖಾನುದಾನ ಜು.31
ಅಧಿವೇಶನ ನಡೆಯುವ ಒಟ್ಟು ದಿನ- 28
ಸುಗ್ರೀವಾಜ್ಞೆಯ ಸ್ಥಾನ ತುಂಬಲಿರುವ ಮಸೂದೆಗಳು
ಎಸ್ಸಿ/ಎಸ್ಟಿ ದೌರ್ಜನ್ಯ ತಡೆ
ಪೋಲಾವರಂ ಯೋಜನೆ
ಸೆಬಿ ಸುಗ್ರೀವಾಜ್ಞೆ
ಟ್ರಾಯ್ ಕಾಯ್ದೆ
ಚರ್ಚೆಗೆ ಬರಬಹುದಾದ ಪ್ರಮುಖ ವಿಚಾರ
ರೈಲು ಪ್ರಯಾಣ ದರ, ಸರಕು ಸಾಗಣೆ ದರ ಹೆಚ್ಚಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


