ಸ್ವಪಕ್ಷೀಯರಿಗೆ ವಸತಿ ಹಂಚಿಕೆ ಸದನಕ್ಕೆ ಕಾವು

ವಿಧಾನಸಭೆ: ಮನೆ ಹಂಚಿಕೆಯಲ್ಲಿ ಸ್ವಪಕ್ಷಪಾತ ಮಾಡಿದ್ದನ್ನೂ ಸಮರ್ಥಿಸಿಕೊಂಡು 'ರೆಬೆಲ್' ಹೇಳಿಕೆಗೇ ಅಂಟಿಕೊಂಡ ವಸತಿ ಸಚಿವ ಅಂಬರೀಷ್ ಅವರಿಂದ ಸರ್ಕಾರ ವಿಧಾನಸಭೆಯಲ್ಲಿ ಮಂಗಳವಾರ 'ಟ್ರಬಲ್' ಅನುಭವಿಸಿತು. 'ಏಳು ವರ್ಷದಿಂದ ನಾವು ಅಧಿಕಾರದಲ್ಲಿ ಇರಲಿಲ್ಲ. ಇದೀಗ ಅಧಿಕಾರಕ್ಕೆ ಬಂದಿದ್ದೇವೆ. ನಮಗೆ ವೋಟ್ ಹಾಕಿದ ಜನರಿಗೆ ಮನೆ ಕೊಡಬಾರದೇ? ಅದಕ್ಕೇ ಕಾಂಗ್ರೆಸ್ ಶಾಸಕರಿಗೇ ವಸತಿ ಯೋಜನೆ ಮನೆಗಳನ್ನು ನೀಡಿದ್ದೇನೆ. ಏನೀಗಾ?' ಎಂದು ರೆಬೆಲ್ಸ್ಟಾರ್ರ 'ಫಿಲ್ಮಿ ಡೈಲಾಗ್'ಗೆ ಪ್ರತಿಪಕ್ಷದ ಸದಸ್ಯರು ಕೆಂಡಾಮಂಡಲರಾದರು. ಬಾವಿಗಿಳಿದು ಧರಣಿ ನಡೆಸಿ, ಧಿಕ್ಕಾರ ಕೂಗಿದರು. ಮಂಗಳವಾರ ಕಲಾಪ ಎರಡು ಬಾರಿ ಮುಂದೂಡಲಾಯಿತು. ಮಾತ್ರವಲ್ಲ ಸುಮಾರು ಮೂರು ತಾಸು ನಿಷ್ಪ್ರಯೋಜಕವಾಯಿತು. ಕಾಂಗ್ರೆಸ್ ಶಾಸಕರಿಗೆ ಮಾತ್ರ ಮನೆ ಮಂಜೂರು ಮಾಡಿರುವುದನ್ನು ಸಚಿವರು ಸ್ಪೀಕರ್ ಕೊಠಡಿಯಲ್ಲೂ ಸಮರ್ಥಿಸಿಕೊಂಡ ಪರಿಣಾಮವಾಗಿ ಸಂಧಾನ ವಿಫಲವಾಯಿತು. ಇದೇ ವೇಳೆ ಬಜೆಟ್ ಬಳಿಕ ವಿವಾದ ಪರಿಹಾರ ಮಾಡುವ ಬಗ್ಗೆ ಅಂಬರೀಷ್ರಿಂದ ಭರವಸೆ ಸಿಕ್ಕ ಮೇಲೆ ಪ್ರತಿಭಟನೆ ಕೈಬಿಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


