ಮೋದಿ ಪ್ರಧಾನಿಯಾಗಬೇಕೇ ಬೇಡವೇ?

ಈಗ ಎಲ್ಲೆಡೆ ಚರ್ಚೆ ನಡೆಯುತ್ತಿರುವ ವಿಷಯ- ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿಯಾಗಬೇಕೇ ಬೇಡವೇ? ಇದನ್ನು ನೀವು ನಿರ್ಧರಿಸುವ ಮುನ್ನ ಇಲ್ಲಿರುವ ಸುಭಾಷಿತ ಓದಿ. ಏಕೆಂದರೆ ಯಾರನ್ನು ಅಧಿಕಾರದಲ್ಲಿ ಕೂರಿಸಬೇಕು, ಯಾರನ್ನು ಕೂರಿಸಬಾರದು ಎಂದು ಇದು ಹೇಳುತ್ತದೆ.
ಮೂರ್ಖಂ ವ್ಯಸನಿನಂ ಲುಬ್ಧಮಪ್ರಗಲ್ಭಂ ಭಯಾಕುಲಮ್ ॥
ಕ್ರೂರಮನ್ಯಾಯಕರ್ತಾರಂ ನಾಧಿಪತ್ಯೇ ನಿಯೋಜಯೇತ್ ॥
- ಮೂರ್ಖನನ್ನು, ಚಟಗಳಲ್ಲಿ ಮುಳುಗಿರುವವನನ್ನು, ಆಸೆಬುರುಕನನ್ನು, ಪ್ರತಿಭೆ ಇಲ್ಲದವನನ್ನು, ಭಯಪಡುವವನನ್ನು, ಕ್ರೂರಿಯನ್ನು, ಅನೀತಿವಂತನನ್ನು ಯಾವತ್ತೂ ಅಧಿಕಾರದಲ್ಲಿ ಕೂರಿಸಬಾರದು.
ನಿಜ, ಇಂಥವರಿಗೆ ಅಧಿಕಾರ ಕೊಡಬಾರದು. ಆದರೆ, ನಮ್ಮ ದುರಂತ ಏನೆಂದರೆ, ಈಗ ಅಧಿಕಾರದಲ್ಲಿರುವವರಲ್ಲಿ ಹೆಚ್ಚಿನವರೆಲ್ಲ ಈ ಮೇಲೆ ಹೇಳಿದಂಥವರೇ ಆಗಿರುತ್ತಾರೆ. ಏಕೆಂದರೆ ನೀತಿವಂತರು ರಾಜಕೀಯಕ್ಕೆ ಬರುವುದಿಲ್ಲ. ಬಂದವರು ಸಂದರ್ಭಕ್ಕೆ ತಕ್ಕಂತೆ ಕ್ರೂರಿಯಾಗದಿದ್ದರೆ ರಾಜಕೀಯದಲ್ಲಿ ಉಳಿಯುವುದಿಲ್ಲ. ಅವರು ಆಸೆಬುರುಕನಾಗಿರದಿದ್ದರೆ ರಾಜಕೀಯದಲ್ಲಿದ್ದೂ ಅವರಿಗೆ ಅಧಿಕಾರ ಸಿಗುವುದಿಲ್ಲ. ಅವರು ಚಟವಾನರಾಗಿರದಿದ್ದರೆ ರಾಜಕೀಯದಲ್ಲಿ ಅವರಿಗೆ ಸ್ನೇಹಿತರೇ ಸಿಗುವುದಿಲ್ಲ.
ಒಳ್ಳೆಯವನಾಗಿರಲು ಇಷ್ಟೆಲ್ಲ ಕಷ್ಟವಿದೆಯಾದರೆ ಯಾರು ತಾನೇ ಆದರ್ಶ ರಾಜಕಾರಣಿಯಾಗಿ ಹೆಸರು ಬಿಟ್ಟು ಮತ್ತೇನನ್ನೂ ಗಳಿಸದೆ ವೃದ್ಧರಾಗಲು ಬಯಸುತ್ತಾರೆ?
ಕಾಲವೇ ರಾಜಕೀಯವನ್ನು ಕೆಡಿಸಿದೆ ಎಂದು ಹೇಳಿ ಕೈತೊಳೆದುಕೊಳ್ಳುವುದು ಸುಲಭ. ಆದರೆ, ಅದನ್ನು ಯಾವುದಾದರೂ ಒಂದು ಹಂತದಲ್ಲಿ ಶುದ್ಧೀಕರಿಸಲು ಆರಂಭಿಸಬೇಕಲ್ಲವೇ? ಇದು ಚುನಾವಣೆಯಲ್ಲಿ ಮಾತ್ರ ಸಾಧ್ಯ. ರಾಜಕೀಯ ಕಲುಷಿತವಾಗಲು ಮೊದಲ ಕಾರಣ ಮತದಾರ. ಅವನು ಆಮಿಷಗಳಿಗೆ ಬಲಿಯಾಗಿ ಮತ ಮಾರಿಕೊಳ್ಳುವುದನ್ನು ಬಿಟ್ಟರೆ ತನ್ನಿಂತಾನೇ ಎಲ್ಲವೂ ಸರಿಯಾಗುತ್ತದೆ.
ಪ್ರಾಮಾಣಿಕವಾಗಿ ಮತ ಹಾಕುವ ಸಂಕಲ್ಪ ಮಾಡಿದ ನಂತರದ ಹಂತ ಪ್ರಾಮಾಣಿಕರನ್ನು ಹಾಗೂ ಸಮರ್ಥರನ್ನು ಆರಿಸುವುದು. ಯಾರು ಸಮರ್ಥ ಆಡಳಿತಗಾರ ಎಂಬುದನ್ನು ನಮ್ಮ ಅನುಭವದಿಂದಲೇ ನಿರ್ಧರಿಸಬಹುದು. ಅದು ಸಾಧ್ಯವಾಗದಿದ್ದರೆ ಮಾಧ್ಯಮಗಳಲ್ಲಿ ನಡೆಯುವ ಚರ್ಚೆಗಳನ್ನು ಗಮನಿಸಬಹುದು. ಮೋದಿ ಪ್ರಧಾನಿಯಾಗಬೇಕೋ ರಾಹುಲ್ ಗಾಂಧಿ ಆಗಬೇಕೋ ಎಂಬುದನ್ನು ಮೇಲಿನ ಸುಭಾಷಿತವನ್ನು ಇನ್ನೊಮ್ಮೆ ಓದಿಕೊಂಡರೆ ನೀವೇ ನಿರ್ಧರಿಸುತ್ತೀರಿ.
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555 ಸಖಿ ಖರೀದಿಗಾಗಿ http://www.magzter.com/IN/Express-Network-Private-Limited/Sakhi/Women%27s-Interest/40309 ಗೆ ಭೇಟಿನೀಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


