ಪ್ರಧಾನ ಸುದ್ದಿ

ಬಿಜೆಪಿ ಪರ ಆರ್‌ಎಸ್‌ಎಸ್ ಪ್ರಚಾರ

ಬಿಜೆಪಿ ಪರ ಆರ್‌ಎಸ್‌ಎಸ್ ಪ್ರಚಾರ
Published On :

ಮಂಗಳೂರು: 'ಬೂತ್ ಜಿತೇಗಾ-ದೇಶ್ ಜಿತೇಗಾ'
ಇದು ಸಂಘ ಪರಿವಾರದ ಈ ಬಾರಿಯ ಚುನಾವಣೆ ಪ್ರಚಾರದ ಘೋಷಣೆ. ಬಿಜೆಪಿ ಅಧಿಕಾರಕ್ಕೆ ಬರಲು ಸಂಘ ಪರಿವಾರವೂ ಬಹಿರಂಗ ಪ್ರಚಾರ ಕಾರ್ಯದಲ್ಲಿ ಕೈಜೋಡಿಸುತ್ತಿದೆ. ಆದರೆ ಇದು ಪ್ರತ್ಯೇಕವಾಗಿ ನಡೆಸುವ ಚುನಾವಣೆ ಪ್ರಚಾರ. ದೇಶಾದ್ಯಂತ ಆರ್‌ಎಸ್‌ಎಸ್‌ನ 40ಕ್ಕೂ ಅಧಿಕ ಪರಿವಾರ ಸಂಘಟನೆಗಳು ಸಾಮೂಹಿಕವಾಗಿ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಇದೇ ಮೊದಲು. ಕೇಂದ್ರದಲ್ಲಿ ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರಬೇಕು, ನರೇಂದ್ರ ಮೋದಿ ಅವರನ್ನು ಪ್ರಧಾನಿ ಪಟ್ಟದಲ್ಲಿ ಕೂರಿಸಬೇಕು, ರಾಷ್ಟ್ರೀಯ ಹಿತಾಸಕ್ತಿ ನೆಲೆಯಲ್ಲಿ ಪ್ರಚಾರಕ್ಕೆ ಧುಮುಕಲು ಸಂಘ ಪರಿವಾರ ನಿಶ್ಚಯಿಸಿದೆ.
ಈ ಚುನಾವಣೆಯಲ್ಲಿ ಸಂಘ ಪರಿವಾರದ ಪ್ರಚಾರ ತಂತ್ರವೂ ವಿಭಿನ್ನ. ನಾಲ್ಕಂಶ ಸೂತ್ರ ಹಿಡಿದುಕೊಂಡು ನಾಲ್ಕು ಹಂತದಲ್ಲಿ ಪ್ರಚಾರ ನಡೆಸಲಿದೆ. ವಿದ್ಯಾರ್ಥಿ ತಂಡ ರಚಿಸಿ ಪ್ರಚಾರ, ಬಿಜೆಪಿಯಿಂದ ದೂರ ಸರಿದವರನ್ನು ಮರಳಿ ಕರೆತರುವುದು, ಬಿಜೆಪಿಗೆ ಮತವಾಗಿ ಪರಿವರ್ತಿಸುವುದು ಹಾಗೂ ಶೇಕಡಾ ನೂರು ಮತದಾನ ಆಗುವಂತೆ ನೋಡಿಕೊಳ್ಳುವುದು ನಾಲ್ಕಂಶ ಸೂತ್ರದಲ್ಲಿ ಸೇರಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಆರ್‌ಎಸ್‌ಎಸ್ ಅಖಿಲ ಭಾರತ ಪ್ರತಿನಿಧಿ ಸಭಾ ಅಧಿವೇಶನದಲ್ಲೂ ಹೇಗಾದರೂ ಮಾಡಿ ಬಿಜೆಪಿ ಗೆಲ್ಲಿಸಿ ಅಧಿಕಾರಕ್ಕೆ ತರುವಂತೆ ನಿರ್ದೇಶನ ನೀಡಲಾಗಿದೆ.
ಯುವಕರು  ಟಾರ್ಗೆಟ್: ಸೋಮವಾರದಿಂದ ಎರಡನೇ ಹಂತದ ಪ್ರಚಾರಕ್ಕೆ ಸಂಘ ಪರಿವಾರ ಅಣಿಯಾಗಿದೆ. 18ರಿಂದ 20ರ ವಯೋವಾನದ ಯುವ ದಂಡು ಬೂತ್ ಸಂಪರ್ಕಕ್ಕೆ ತೆರಳಲಿದೆ. ಎಲ್ಲ ವಾರ್ಡ್‌ಗಳಿಗೆ ಕನಿಷ್ಠ 10 ಮಂದಿ ಪರಿವಾರ ಕಾರ್ಯಕರ್ತರು ತೆರಳುತ್ತಾರೆ. ಮನೆ ಮನೆ ಸಂಪರ್ಕ ಮಾಡುತ್ತಾರೆ.
ದೇಶಕ್ಕೆ ನರೇಂದ್ರ ಮೋದಿ ಪ್ರಧಾನಿಯಾಗಬೇಕಾದ ಅನಿವಾರ್ಯತೆ ಮನದಟ್ಟು ಮಾಡುವುದು ಇವರ ಕೆಲಸ. ಇದಕ್ಕೆ ಯಾವುದೇ ಸಂಭಾವನೆ ಸ್ವೀಕರಿಸುವುದಿಲ್ಲ. ದೇಶ ಸೇವೆಯ ಹೆಸರಲ್ಲಿ ಈ ಮಾದರಿಯ ಪ್ರಚಾರ ಕಾರ್ಯ ನಡೆಸುತ್ತೇವೆ ಎನ್ನುತ್ತಾರೆ ಸಂಘ ಪರಿವಾರದ ಪ್ರಮುಖರೊಬ್ಬರು.


-ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.