ಪ್ರಧಾನ ಸುದ್ದಿ

ವ್ಯಾಪಾರಿ, ರೈತರಿಗೆ ನೀತಿ ಬಿಸಿ

Published On :
-ಗ್ರಾಹಕರು, ವ್ಯಾಪಾರಿಗಳಿಂದ ಬ್ಯಾಂಕ್/ಚೆಕ್ ವ್ಯವಹಾರ ಕಡಿಮೆ

ಕನ್ನಡಪ್ರಭ ವಾರ್ತೆ  ಬೆಂಗಳೂರು ಮಾ.23
ಚುನಾವಣೆ ನೀತಿ ಸಂಹಿತೆಯ ಬಿಸಿ ಗ್ರಾಮೀಣ ಪ್ರದೇಶದ ಪುಡಿ ವ್ಯಾಪಾರಿಗಳು ಹಾಗೂ ರೈತರಿಗೆ ಕಾಡಲು ಆರಂಭಿಸಿದೆ.
ನೀತಿ ಸಂಹಿತೆಯ ನೆಪದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಾರ ಮಾಡುವ ಸಣ್ಣಪುಟ್ಟ ವ್ಯಾಪಾರಿಗಳು ಹಾಗೂ ರೈತರಿಗೆ ಚುನಾವಣೆ ಅಧಿಕಾರಿಗಳು ಕಿರಿಕಿರಿ ಮಾಡುತ್ತಿದ್ದಾರೆ. ನೀತಿ ಸಂಹಿತೆ ಪ್ರಕಾರ 50 ಸಾವಿರಕ್ಕಿಂತಲೂ ಅಧಿಕ ಹಣ ಒಯ್ಯುವಾಗ ಅದರ ಮೂಲದ ಬಗ್ಗೆ ದಾಖಲೆ ಹೊಂದಿರಲೇಬೇಕು.
ಆದರೆ ಗ್ರಾಮೀಣ ಪ್ರದೇಶದ ಆರ್ಥಿಕ ವ್ಯವಹಾರಕ್ಕೆ ದಾಖಲೆ ನೀಡಲು ಸಾಧ್ಯವೇ ಆಗುವುದಿಲ್ಲ.
ವಿಶೇಷವಾಗಿ ಅಡಿಕೆ, ಬಾಳೆ ಸೇರಿದಂತೆ ಕೃಷಿ ಉತ್ಪನ್ನಗಳು, ಚಿನ್ನ- ಬೆಳ್ಳಿ ಸಣ್ಣ ವ್ಯಾಪಾರಿಗಳು, ಗ್ರಾಮಾಂತರ ಪ್ರದೇಶದ ವ್ಯಾಪಾರಿಗಳು ಇದರಿಂದ ತೊಂದರೆಗೆ ಸಿಲುಕಿದ್ದಾರೆ. ಇಲ್ಲಿ ಗ್ರಾಹಕರು ಮತ್ತು ವ್ಯಾಪಾರಿಗಳು ಬ್ಯಾಂಕ್ ಅಥವಾ ಚೆಕ್ ಮೂಲಕ ವ್ಯವಹರಿಸುವುದು ಕಡಿಮೆ. ಎಷ್ಟೋ ಗ್ರಾಹಕರು ಬ್ಯಾಂಕ್ ಖಾತೆಯನ್ನೇ ಹೊಂದಿರುವುದಿಲ್ಲ. ಅಲ್ಲದೇ ಅಡಿಕೆ, ಬಾಳೆ ವ್ಯಾಪಾರಸ್ಥರು ಎಲ್ಲ ವ್ಯಾಪಾರ ಮತ್ತು ಹಣಕ್ಕೆ ಬಿಲ್ ಕೂಡ ಹೊಂದಿರುವುದಿಲ್ಲ. ಚುನಾವಣೆ ನೀತಿ ಸಂಹಿತೆ ಇಂತಹ ವ್ಯಾಪಾರಿಗಳಿಗೆ ಮತ್ತು ಗ್ರಾಹಕರಿಗೆ ತೀವ್ರ ತೊಂದರೆಯಾಗಿ ಪರಿಣಮಿಸಿದೆ.
ಮಲೆನಾಡು ಹಾಗೂ ಕರಾವಳಿ ಪ್ರದೇಶದ ರೈತರು ವರ್ಷದ ಎಲ್ಲ ಸಮಯದಲ್ಲಿ ಕೃಷಿ ಮಾರುಕಟ್ಟೆಗೆ ಹೋಗಿ ವ್ಯವಹಾರ ಮಾಡುವುದಿಲ್ಲ. ಇನ್ನು ಸಣ್ಣ ರೈತರು ಮಾರುಕಟ್ಟೆಗೆ ಹೋಗುವ ಪದ್ಧತಿಯನ್ನೇ ರೂಢಿಸಿಕೊಂಡಿರುವುದಿಲ್ಲ. ಆರ್ಥಿಕ ಕಾರಣಗಳಿಂದ ಸ್ವಸಹಾಯ ಸಂಘದಲ್ಲಿಯೂ ವ್ಯವಹಾರ ನಡೆಸುತ್ತಿರುವುದಿಲ್ಲ. ಆಗ ಅನಿವಾರ್ಯವಾಗಿ ರೈತನು ಪುಡಿ ವ್ಯಾಪಾರಿಯ ಹತ್ತಿರವೇ ವ್ಯವಹಾರ ನಡೆಸಬೇಕಾಗುತ್ತದೆ.
ಇಂತಹ ಸಂದರ್ಭದಲ್ಲಿ ರೈತ ಹಾಗೂ ವ್ಯಾಪಾರಿಯು ದಾಖಲೆಯಿಲ್ಲದೆ ಹಣವನ್ನು ಸಾಗಿಸಬೇಕಾಗುತ್ತದೆ. ರೈತರಿಗೆ ನೀಡಲು ವ್ಯಾಪಾರಿಯು ದೊಡ್ಡ ಮೊತ್ತದ ಹಣವನ್ನು ಸಾಗಿಸಲೇ ಬೇಕಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.