ಕಾಂಗ್ರೆಸ್ ಪ್ರಣಾಳಿಕೆ ಸುಳ್ಳಿನ ಕಂತೆ: ಮೋದಿ

ಗುಮ್ಲಾ/ಸಸಾರಾಂ: ಕಾಂಗ್ರೆಸ್ ಪ್ರಣಾಳಿಕೆ ಕೇವಲ ಸುಳ್ಳಿನ ಕಂತೆ. ಬೆಲೆ ಏರಿಕೆ ನಿಯಂತ್ರಿಸುವುದಾಗಿ ಅವರು ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ಹಾಗಿದ್ದರೆ ಅವರು 10 ವರ್ಷಗಳಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದುಕೊಂಡು ಮಾಡಿದ್ದೇನು ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ.
ಪ್ರಣಾಳಿಕೆ ಬಿಡುಗಡೆ ವೇಳೆ ತಮ್ಮನ್ನು ತರಾಟೆಗೆ ತೆಗೆದುಕೊಂಡಿದ್ದ ಸೋನಿಯಾ, ರಾಹುಲ್ ವಿರುದ್ಧ ಮೋದಿ ಚಾಟಿ ಬೀಸಿದ್ದಾರೆ. ಜಾರ್ಖಂಡ್ ಮತ್ತು ಬಿಹಾರದ ನಕ್ಸಲ್ಪೀಡಿತ ಪ್ರದೇಶಗಳಲ್ಲಿ ಗುರುವಾರ ಸರಣಿ ರ್ಯಾಲಿ ನಡೆಸಿದ ಅವರು ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ತೀವ್ರ ಹರಿಹಾಯ್ದಿದ್ದಾರೆ.
ಮೋದಿ ಹೇಳಿದ್ದೇನು?
ಪ್ರಣಾಳಿಕೆ ಪಕ್ಷಗಳ ಪಾಲಿಗೆ ಭಗವದ್ಗೀತೆ, ಬೈಬಲ್ ಮತ್ತು ಕುರಾನ್. ಅದು ಜನರ ವಂಚಿಸುವ ದಾಖಲೆ ಅಲ್ಲ.
ಸೋನಿಯಾ ಕೂಡ ಒಬ್ಬ ತಾಯಿ. ಆದರೂ ಅವರಿಗೆ ಬಡವರು ಮತ್ತು ಹಸಿವಿನಿಂದ ನರಳುತ್ತಿರುವ ಮಕ್ಕಳ ಬಗ್ಗೆ ಕಾಳಜಿ ಇಲ್ಲ.
ಸೋನಿಯಾ ಹಾಗೂ ಅವರ ಯುವರಾಜನಿಗೆ ರೈತರ ಬಗ್ಗೆ ಕಾಳಜಿಯೇ ಇಲ್ಲ. ಸುಪ್ರೀಂ ಆದೇಶ ಪಾಲಿಸುತ್ತಲೇ ಇಲ್ಲ.
ದೇಶದಲ್ಲಿ ಆದಿವಾಸಿಗಳೂ ವಾಸಿಸುತ್ತಿದ್ದಾರೆ ಎಂಬುದು ಕಾಂಗ್ರೆಸ್ ತಲೆಯಲ್ಲೇ ಇಲ್ಲ. ಇವರ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ ಕುರಿತು ಯೋಚಿಸಿಲ್ಲ. ಬಿಜೆಪಿ ಮಾಡಿದೆ.
ಟವರ್ ಸ್ಫೋಟ
ಗಯಾ: ಮೋದಿ ರ್ಯಾಲಿಗೂ ಮೊದಲು ಮಾವೋವಾದಿಗಳು ಗಯಾದಲ್ಲಿ ಎರಡು ಮೊಬೈಲ್ ಟವರ್ ಸ್ಫೋಟಿಸಿದ್ದಾರೆ. ಮಂಜ್ಹೌಲಿ ಮತ್ತು ದುಮಾರಿಯಾ ಬಜಾರ್ ಗ್ರಾಮಗಳಲ್ಲಿ ಬುಧವಾರ ರಾತ್ರಿ ನೂರಕ್ಕೂ ಹೆಚ್ಚು ಮಂದಿ ಈ ಕೃತ್ಯವೆಸಗಿದ್ದಾರೆ.
ಲಾಠಿಚಾರ್ಜ್: ಗಾಂಧಿನಗರದ ರ್ಯಾಲಿಯಲ್ಲಿ ಸಾರ್ವಜನಿಕರು ಪೊಲೀಸರ ಜತೆಗೆ ಘರ್ಷಣೆಗಿಳಿದ ಘಟನೆ ಗುರುವಾರ ನಡೆಯಿತು. ಈ ವೇಳೆ ಕಲ್ಲು, ಚಪ್ಪಲಿ ಎಸೆದ ಸಾರ್ವಜನಿಕರನ್ನು ಪೊಲೀಸರು ಲಾಠಿ ಚಾರ್ಜ್ ಮೂಲಕ ಚದುರಿಸಿದರು. ಇದೇ ಸ್ಥಳದಲ್ಲಿ ಉಗ್ರರು ಕಳೆದ ಬಾರಿ ಸರಣಿ ಬಾಂಬ್ ಸ್ಫೋಟಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


