ಬಿಜೆಪಿ ಹೊಸ ವೇಷ ವಿನಾಶಕ್ಕೆ ಅವಕಾಶ

ಜೈಸಲ್ಮೇರ್: 'ಹಿರಿಯ ನಾಯಕರನ್ನು ಕಡೆಗಣಿಸುವಂತಹ ಬಿಜೆಪಿಯ ಹೊಸ ಅವತಾರವು ಪಕ್ಷದ ವಿನಾಶಕ್ಕೆ ಕಾರಣವಾಗಲಿದೆಯೇ ಹೊರತು ಪ್ರಗತಿಗಲ್ಲ'.
ಬಿಜೆಪಿಯಿಂದ 6 ವರ್ಷಗಳ ಅವಧಿಗೆ ಉಚ್ಚಾಟನೆಗೊಂಡ ಹಿರಿಯ ನಾಯಕ ಜಸ್ವಂತ್ ಸಿಂಗ್ ಅವರು ನೋವಿನಿಂದ ಆಡಿದ ಮಾತಿದು.
ಇದು ಲೋಕಸಭೆಯಲ್ಲಿ ನನ್ನ ಕೊನೆಯ ಅವಧಿಯಾಗಿತ್ತು. ತಾಯಿನಾಡಿಗಾಗಿ ಕೊನೆಯ ಬಾರಿ ಸೇವೆ ಸಲ್ಲಿಸುವ ಅವಕಾಶ ನೀಡಿ.
ನನಗೆ ಬಾರ್ಮರ್ನಿಂದ ಟಿಕೆಟ್ ಕೊಡಿ ಎಂದು ಅಲವತ್ತುಕೊಂಡೆ. ಆದರೆ ನನಗೆ ಪಕ್ಷ ಆ ಅವಕಾಶ ನೀಡಲಿಲ್ಲ. ಇದರಿಂದ ತುಂಬಾ ನೋವಾಯಿತು ಎಂದಿದ್ದಾರೆ ಪಕ್ಷೇತರರಾಗಿ ಸ್ಪರ್ಧಿಸಿರುವ ಜಸ್ವಂತ್.
ವ್ಯಕ್ತಿಪೂಜೆ ಬಗ್ಗೆ ಆಕ್ರೋಶ: ಸಂದರ್ಶನವೊಂದರಲ್ಲಿ ಭಾನುವಾರ ಮಾತನಾಡಿದ ಜಸ್ವಂತ್, ಬಿಜೆಪಿಯಲ್ಲಿ ನಡೆಯುತ್ತಿರುವ ವ್ಯಕ್ತಿಪೂಜೆಯನ್ನು ತೀವ್ರವಾಗಿ ಖಂಡಿಸುವ ಮೂಲಕ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು. ವ್ಯಕ್ತಿಪೂಜೆ ನಡೆಸುವುದು ಒಂದು ರಾಜಕೀಯ ಪಕ್ಷದ ಉತ್ತಮ ವರ್ತನೆಯಲ್ಲ. ಈ ಮಾತುಗಳಿಂದ ನಾವು ಕಲಿಯಬೇಕು. ದೇಶಕ್ಕೆ ಸೇವೆ ಸಲ್ಲಿಸುವ ರಾಜಕೀಯ ಪಕ್ಷಗಳು ಒಬ್ಬ ವ್ಯಕ್ತಿಯ ಕೈಗೊಂಬೆ ಆಗಬಾರದು ಎಂದರು ಜಸ್ವಂತ್.
ಆರ್ಥಿಕತೆಯ ಹಾಳುಮಾಡಿದ ವ್ಯಕ್ತಿ ಚಿದು
ಬೆಲೆಯೇರಿಕೆ, ಆರ್ಥಿಕ ಪ್ರಗತಿ, ಉದ್ಯೋಗಕ್ಕೆ ಸಂಬಂಧಿಸಿ 18 ಅಂಶಗಳ ಪ್ರಶ್ನಾವಳಿಯನ್ನು ಯಶವಂತ ಸಿನ್ಹಾ ಚಿದು ಮುಂದಿಟ್ಟಿದ್ದಾರೆ. ಆರೋಗ್ಯಕರವಾಗಿದ್ದ ಆರ್ಥಿಕತೆಯನ್ನು ಹಾಳುಮಾಡುವುದು ಚಿದು ಅವರ ಹವ್ಯಾಸವಾಗಿಬಿಟ್ಟಿದೆ. ಸಬ್ಸಿಡಿ ನೀಡುವ ಮೂಲಕ ಅವರು ಮುಂದಿನ ಸರ್ಕಾರದ ಮೇಲೆ ಭಾರಿ ಹೊರೆಯನ್ನು ಹೊರಿಸಿ ಹೋಗಿದ್ದಾರೆ ಎಂದೂ ಸಿನ್ಹಾ ಆರೋಪಿಸಿದ್ದಾರೆ.
ಜಸ್ವಂತ್ರ ಉಚ್ಚಾಟನೆಯ ಕ್ರಮವು ಬಿಜೆಪಿಯ ಮೇಲೆ ಮೋದಿ ಅವರ ಸ್ವಯಂ ನಾಶದ ಪ್ರಭಾವವನ್ನು ತೋರಿಸುತ್ತಿದೆ.
- ಅಭಿಶೇಕ್ ಸಿಂಘ್ವಿ, ಕಾಂಗ್ರೆಸ್ ವಕ್ತಾರ
ಷೇರು ಮಾರುಕಟ್ಟೆ ಏರಿಕೆ ಕಾಣುತ್ತಿರುವುದು ಸ್ಥಿರ ಯುಪಿಎ ಸರ್ಕಾರ ಹಾಗೂ ಸರ್ಕಾರ ಕೈಗೊಂಡ ಕ್ರಮಗಳಿಂದಲೇ ಹೊರತು ಮೋದಿ ಪ್ರಧಾನಿಯಾಗುತ್ತಾರೆಂಬ ನಿರೀಕ್ಷೆಯಿಂದಲ್ಲ.
- ಪಿ.ಚಿದಂಬರಂ, ಕೇಂದ್ರ ವಿತ್ತ ಸಚಿವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


