ಪ್ರಧಾನ ಸುದ್ದಿ

ಪ್ರಿಯಾಂಕಾರನ್ನು ಪುತ್ರಿ ಎಂದಿಲ್ಲ

ಪ್ರಿಯಾಂಕಾರನ್ನು ಪುತ್ರಿ ಎಂದಿಲ್ಲ
Published On :

ನವದೆಹಲಿ/ಗಾಂಧಿನಗರ/ಮುಂಬೈ: 'ನರೇಂದ್ರ ಮೋದಿ ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಿಯಾಂಕಾ ವಾದ್ರಾ ತಮ್ಮ ಮಗಳಂತೆ ಎಂಬ ಹೇಳಿಕೆ ನೀಡಿಯೇ ಇಲ್ಲ'
- ಹೀಗೆಂದು ಗಾಂಧಿನಗರದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕಚೇರಿ ಶುಕ್ರವಾರ ಸ್ಪಷ್ಟನೆ ನೀಡಿದೆ. ಜತೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿರಾಜಕೀಯ ಕಾಯದರ್ಶಿ ಅಹ್ಮದ್ ಪಟೇಲ್ ಬಗ್ಗೆಯೂ ಮಾತನಾಡಿದ್ದು ನಿಜ ಎಂದು ಹೇಳಲಾಗಿದೆ. ವಿವಾದಿತ ಹೇಳಿಕೆಯ ಪೂರ್ಣ ಪಾಠ ನೀಡಲಾಗಿದೆ.
ಮೋದಿ ಹೇಳಿದ್ದೇನು? ಸಾಮಾಜಿಕ ಜಾಲ ತಾಣಗಳಲ್ಲಿ ಎಡಿಟ್ ಮಾಡದ ಸಂದರ್ಶನ ಹರಿದಾಡುತ್ತಿದೆ. ಅದರ ಪ್ರಕಾರ 'ನಾನು ಪ್ರಿಯಾಂಕಾ ಟೀಕೆಯನ್ನು ಗಂಭೀರಪರಿಗಣಿಸುವುದಿಲ್ಲ.
ಏಕೆಂದರೆ ಅವರು ತಾಯಿ ಮತ್ತು ಸಹೋದರನ ಜಯಕ್ಕಾಗಿ ಏನು ಮಾಡಬೇಕಿತ್ತೋ ಅದನ್ನೇ ಮಾಡುತ್ತಿದ್ದಾರೆ. ಸಹೋದರ, ತಾಯಿಗಾಗಿ ಪ್ರಿಯಾಂಕಾ ಕೆಲಸ ಮಾಡದಿದ್ದರೆ ಬೇರೆ ಯಾರು ಮಾಡಬೇಕು?
ಹೀಗಾಗಿ ಮಗಳಾಗಿ ಏನು ಹೇಳಿದರೂ ನಾನು ಏನನ್ನೂ ತಿಳಿಯುವುದಿಲ್ಲ. ಇದಕ್ಕಿಂತ ಹತ್ತು ಪಟ್ಟು ಹೆಚ್ಚಿನ ಬೈಗುಳಗಳನ್ನು ಹೇಳಿದರೂ ಸಿಟ್ಟುಗೊಳ್ಳಬಾರದು. ಏಕೆಂದರೆ ಅವರು ಪುತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ' ಎಂದಿದ್ದರು.
ವಿಶ್ವಾಸಾರ್ಹತೆಗೆ ಧಕ್ಕೆ: ಮೋದಿ ಸಂದರ್ಶನಕ್ಕೆ ಕತ್ತರಿ ಪ್ರಯೋಗವಿಲ್ಲ ಎಂದು ದೂರದರ್ಶನದ ಮಾತೃಸಂಸ್ಥೆ 'ಪ್ರಸಾರಭಾರತಿ' ಹೇಳಿಕೊಂಡಿದೆ. ಅದಕ್ಕೆ ಪೂರಕವಾಗಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜವಾಹರ್ ಸರ್ಕಾರ್ ಪ್ರಸಾರ ಭಾರತಿ ನಿರ್ದೇಶಕ ಮಂಡಳಿಗೆ ಪತ್ರ ಬರೆದಿದ್ದಾರೆ.
ವಿವಾದವಾಗುವಂತೆ ವರ್ತಿಸಿಲ್ಲ
ಮೋದಿ ಸಂದರ್ಶನಕ್ಕೆ ಕತ್ತರಿ ಪ್ರಯೋಗವಾಗಿದೆ ಎಂಬ ಬಿಜೆಪಿ ಆರೋಪವನ್ನು ದೂರದರ್ಶನ ತಳ್ಳಿ ಹಾಕಿದೆ. ಈ ಬಗ್ಗೆ ಸ್ಪಷ್ಟನೆ ನೀಡಿ, ಕೇಂದ್ರದ ಸೂಚನೆಯಂತೆ ನಡೆದುಕೊಂಡಿಲ್ಲ. ವೃತ್ತಿಪರವಾಗಿ ವರ್ತಿಸಿದ್ದೇವೆ ಎಂದು ಮೋದಿ
ಅವರನ್ನು ಸಂದರ್ಶಿಸಿದ ಡಿಡಿ ನ್ಯೂಸ್ ಪತ್ರಕರ್ತ ಅಶೋಕ್ ಶ್ರೀವಾಸ್ತವ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.