ಎನ್ಡಿಎ ಅಧಿಕಾರಕ್ಕೆ ಬಂದ್ರೆ ಭಾರದ್ವಾಜ್ಗೆ ಗೇಟ್ಪಾಸ್

ನವದೆಹಲಿ: ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮೊದಲು ಗಂಟುಮೂಟೆ ಕಟ್ಟುವವರು ಕರ್ನಾಟಕ ರಾಜ್ಯಪಾಲ ಹಂಸರಾಜ್ ಭಾರದ್ವಾಜ್.
ಅವರೊಂದಿಗೆ ಕಾಂಗ್ರೆಸ್ ನಿಷ್ಠ ಅರ್ಧ ಡಜನ್ ರಾಜ್ಯಪಾಲರು ಮನೆಗೆ ಹೋಗಲಿದ್ದಾರೆ. ಕರ್ನಾಟಕದವರೇ ಆದ, ರಾಜಸ್ತಾನ ರಾಜ್ಯಪಾಲೆ ಮರ್ಗಾರೆಟ್ ಆಳ್ವ, ಮಹಾರಾಷ್ಟ್ರರಾಜ್ಯಪಾಲ ಶಂಕರನಾರಾಯಣ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರಮೋದಿ ಪ್ರತಿನಿಧಿಸುತ್ತಿರುವ ಗುಜರಾತ್ ರಾಜ್ಯಪಾಲರಾದ ಕಮಲಾ ಬೆನಿವಾಲ್, ಜಾರ್ಖಂಡ್ ರಾಜ್ಯಪಾಲ ಸಹೀದ್ ಅಹ್ಮದ್, ಕೇರಳದ ರಾಜ್ಯಪಾಲರಾದ ಶೀಲಾದೀಕ್ಷಿತ್ ಮತ್ತು ಪಂಜಾಬ್ ರಾಜ್ಯಪಾಲ ಶಿವರಾಜ್ ಪಾಟೀಲ್ ಅವರು ಗಂಟುಮೂಟೆ ಕಟ್ಟಬೇಕಾಗುತ್ತದೆ. ಹಂಸರಾಜ್ ಭಾರದ್ವಾಜ್ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದೊಂದಿಗೆ ಸಂಘರ್ಷಕ್ಕೆ ಇಳಿದಿದ್ದರು. ಜತೆಗೆ ಆಡಳಿತ ವೈಖರಿ ಬಗ್ಗೆ ಸಾರ್ವಜನಿಕವಾಗಿ ಟೀಕಿಸಿ, ಚಾಟಿ ಬೀಸುವ ಕೆಲಸ ಮಾಡುತ್ತಿದ್ದರು. ವಿಶೇಷ ಎಂದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದಮೇಲೂ ಅವರು ಆಗಾಗ್ಗೆ ಸರ್ಕಾರಕ್ಕೆ ಚಾಟಿ ಏಟು ನೀಡುತ್ತಲೇ ಇದ್ದಾರೆ.
ಸಿದ್ದರಾಮಯ್ಯ ಸರ್ಕಾರದ ಪಾಲಿಗೆ ಭಾರವಾಗಿರುವ ಹಂಸರಾಜ್ ಎತ್ತಂಗಡಿ ಆದರೆ, ಸಿದ್ದರಾಮಯ್ಯ ಸಂಪುಟದ ಸಹೋದ್ಯೋಗಿಗಳು ಸಂತಸ ಪಡಬಹುದು. ಆದರೆ, ಮುಂದೆ ನೇಮಕವಾಗುವ ರಾಜ್ಯಪಾಲರು ಮಗ್ಗುಲ ಮುಳ್ಳಾಗುವುದಿಲ್ಲ ಎಂದು ಹೇಳಲಾಗದು.
-ಕನ್ನಡಪ್ರಭ ಪ್ರತಿನಿಧಿಯಿಂದ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


