ಕನ್ನಡದಲ್ಲಿರದ ಕಡತ ವಾಪಸು

ಕನ್ನಡಪ್ರಭ ವಾರ್ತೆ ಬೆಂಗಳೂರು ಮೇ 10
ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕೆ ತರದ ಅಧಿ ಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕನ್ನಡ ಅನುಷ್ಠಾನಕ್ಕೆ ಅರಸು ಕಾಲದಿಂದ 300ಕ್ಕೂ ಅಧಿಕ ಸುತ್ತೋಲೆ ಹೊರಡಿಸಲಾಗಿದೆ. ಇನ್ನು ಇದರಿಂದ ಏನೂ ಆಗದು. ಕನ್ನಡ ಅನುಷ್ಠಾನಕ್ಕೆ ತಾರದ ಅಧಿಕಾರಿಗಳ ವಿರುದ್ಧ ಒಮ್ಮೆ ಕ್ರಮಕೈಗೊಂಡರೆ ಎಲ್ಲವೂ ಸರಿಯಾಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೀಡಿರುವ ಶಿಫಾರಸು ಸ್ವೀಕರಿಸಿ ಮುಖ್ಯಮಂತ್ರಿ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಕಚೇರಿಗೆ ಬಹುತೇಕ ಕಡತಗಳು ಕನ್ನಡದಲ್ಲಿ ಬರುತ್ತಿವೆ. ಆದರೆ ಕೆಲ ಆಲಸಿ ಅಧಿಕಾರಿಗಳು ಇಂಗ್ಲಿಷ್ನಲ್ಲಿಯೇ ನೀಡುತ್ತಾರೆ. ಅದಕ್ಕೆ ಸಹಿ ಹಾಕದೇ ಹಿಂತಿರುಗಿಸುತ್ತೇನೆ. ಇದನ್ನು ಸಚಿವ ಸಂಪುಟದ ಪ್ರತಿಯೊಬ್ಬ ಸದಸ್ಯರು ಮಾಡಬೇಕು. ರಾಜಿ ಮನೋಭಾವನೆ ಬಿಡಬೇಕು ಎಂದು ಖಡಕ್ ಆಗಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಕನ್ನಡದಲ್ಲಿ ಮಾತನಾಡಿಸಿದರೆ ಇಂಗ್ಲಿಷ್ನಲ್ಲಿ ಪ್ರತಿಕ್ರಿಯಿಸುವಷ್ಟು ಭಾಷಾ ಪ್ರೇಮಿಗಳು ನಾವು. ಭಾಷೆಯ ಮೇಲಿನ ಆಲಸ್ಯವನ್ನು ಬಿಟ್ಟು ವ್ಯವಹರಿಸಬೇಕು. ಸುತ್ತೋಲೆಗಳಿಂದ ಮಾತ್ರ ಕನ್ನಡ ರಕ್ಷಿಸಲು ಸಾಧ್ಯವಿಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಸರ್ಕಾರದ ಎಲ್ಲ ವಿಭಾಗಗಳಲ್ಲಿ ಕನ್ನಡ ಅನುಷ್ಠಾನವಾಗಬೇಕು. ಕನ್ನಡಿಗರಲ್ಲಿ ಭಾಷಾ ಪ್ರೇಮ ಬರಬೇಕು. ಸರ್ಕಾರವು ಕಡ್ಡಾಯ ಎಂದು ಹೇರುವ ಮುಂಚೆ ಜನರೇ ತಮ್ಮ ದೈನಂದಿನ ವ್ಯವಹಾರದಲ್ಲಿ ಅನುಕರಣೆಗೆ ತರಬೇಕು.
-ಮುಖ್ಯಮಂತ್ರಿ ಚಂದ್ರು
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಮುಖ್ಯಮಂತ್ರಿಗೆ ಸಲ್ಲಿಸಲಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಿಫಾರಸುಗಳು
-ಆಡಳಿತದಲ್ಲಿ ಕನ್ನಡ ಕಡ್ಡಾಯ
-ಸರ್ಕಾರಿ ಕಾಯಿದೆಗಳು ಕನ್ನಡದಲ್ಲಿಯೇ ಸಿದ್ಧ
-ಜಿಲ್ಲಾ ಕೇಂದ್ರಗಳಿಗೆ ಕನ್ನಡ ತಿಳಿದ ಅಧಿಕಾರಿಗಳು
- ರಾಜಧಾನಿಯಲ್ಲಿ ಕನ್ನಡ ಕಡ್ಡಾಯ
- ಕನ್ನಡ ಪತ್ರಿಕೆಗಳಲ್ಲಿ ಆಂಗ್ಲ ಜಾಹೀರಾತು ನಿಷೇಧ
- ಎಲ್ಲ ಜಾಹೀರಾತು, ನಾಮಫಲಕದಲ್ಲಿ ಕನ್ನಡ
- ಹೊರ ರಾಜ್ಯದ ಬಸ್ಗಳಲ್ಲಿ ಕನ್ನಡ ನಾಮಫಲಕ, ಬಿಎಂಟಿಸಿಯಲ್ಲಿ ಕನ್ನಡ ಕಡ್ಡಾಯ
- ಪ್ರಾಚೀನ ತಾಳೆ ಓಲೆ ಹಾಗೂ ಹಸ್ತಪ್ರತಿಗಳನ್ನು ಸರ್ಕಾರದ ಸ್ವತ್ತು
- ಕಾಲಮಿತಿಯಲ್ಲಿ ಹಾಗೂ ನಿರ್ದಿಷ್ಟ ಧಾಟಿಯಲ್ಲಿ ನಾಡಗೀತೆ ಹಾಡಲು ಸುತ್ತೋಲೆ
- ಕನ್ನಡ ಧ್ವಜ ನಿಯಮ ರೂಪು
- ಕನ್ನಡ ಮಾಧ್ಯಮದರಿಗೆ ಉದ್ಯೋಗ ಮೀಸಲು
- ಪರಭಾಷಾ ಕಾರ್ಮಿಕರು, ಅಲ್ಪಸಂಖ್ಯಾತರಿಗೆ ಕನ್ನಡ ಕಲಿಕಾ ಕೇಂದ್ರ
- ಡಾ.ಸರೋಜಿನಿ ಮಹಿಷಿ ವರದಿ ಪರಿಷ್ಕರಣೆ
- ಕನ್ನಡ ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದನ
- ಕನ್ನಡದಲ್ಲಿ ಬ್ಯಾಂಕ್ ವ್ಯವಹಾರ
- ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದಾಗ 'ಕನ್ನಡ ಮಾಧ್ಯಮ ಪ್ರಶಸ್ತಿ' ನೀಡುವ ನಿರಂತರ ಪ್ರಕ್ರಿಯೆ
- ವೃತ್ತಿ ಹಾಗೂ ಪದವಿ ಶಿಕ್ಷಣದಲ್ಲಿ ಕನ್ನಡ ಪಠ್ಯ ಕಡ್ಡಾಯ
- ಗಡಿ ತಾಲೂಕುಗಳಲ್ಲಿ ಶಿಕ್ಷಕರಿಗೆ ವಸತಿ ಹಾಗೂ ಕನ್ನಡ ಶಾಲೆಗಳಿಗೆ ಒತ್ತು
- ಹೊರನಾಡು ಕನ್ನಡ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ.
- ಹೊರನಾಡು, ವಿದೇಶಿ ವಿವಿಗಳಲ್ಲಿ ಕನ್ನಡ ಸಂಶೋಧನಾ ಕೇಂದ್ರ
- ನ್ಯಾಯಾಂಗದಲ್ಲಿ ಕನ್ನಡ ಜಾರಿ
- ಗಣಕದಲ್ಲಿ ಕನ್ನಡ ಏಕೀಕರಣ
- ಜಂಗಮವಾಣಿಯಲ್ಲಿ ಕನ್ನಡ
- ಎಲ್ಲ ಜಿಲ್ಲೆಗಳಲ್ಲಿ ಕನ್ನಡ ಭವನ
- ಕನ್ನಡ ಚಿತ್ರಗಳಿಗೆ ಆರ್ಥಿಕ ನೆರವು ನೀಡುವಾಗ ಅಶ್ಲೀಲ, ರಿಮೇಕ್ಗಳಿಗೆ ಅವಕಾಶ ನಿರಾಕರಣೆ
- ಧಾರಾವಾಹಿಗಳಿಗೂ ಚಿತ್ರರಂಗಕ್ಕೆ ನೀಡುವ ಸವಲತ್ತು
- ಗಡಿ ತಾಲೂಕುಗಳ ಅಭಿವೃದ್ಧಿಗೆ ವಿಶೇಷ ಯೋಜನೆ
- ಸಾಂಸ್ಕೃತಿಕ ಕರ್ನಾಟಕದ ಪರಿಕಲ್ಪನೆಗೆ ಒತ್ತು
-ಹೊರನಾಡು ಹಾಗೂ ಗಡಿನಾಡ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದನೆ
-ಹೊರನಾಡು, ವಿದೇಶಿ ಕನ್ನಡಿಗರಿಗಾಗಿ ಕಲಿಕಾ ಕೇಂದ್ರ
-ಶಾಸ್ತ್ರೀಯ ಕನ್ನಡ ಉನ್ನತ ಅಧ್ಯಯನ ಪೀಠ ಮೈಸೂರಿನಿಂದ ಬೆಂಗಳೂರಿಗೆ ಸ್ಥಳಾಂತರ
-ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಬಂಧಿಸಿದ ಅಕಾಡೆಮಿ, ಪ್ರಾಧಿಕಾರದ ಅಧ್ಯಕ್ಷರನ್ನು ಅವಧಿ ಮುಗಿಯುವವರೆಗೆ ಮುಂದುವರಿಕೆ
-ಶತಮಾನೋತ್ಸವ ಹೊಸ್ತಿಲಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ಅಭಿವೃದ್ಧಿಗೆ ವಿಶೇಷ ಯೋಜನ
-'ನಮ್ಮ ಮೆಟ್ರೋ'ದಲ್ಲಿ ದ್ವಿಭಾಷಾ ನೀತಿ ಜಾರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


