ಪ್ರಧಾನ ಸುದ್ದಿ

ಯುವರಾಜನಿಗೆ ಸಾಮೂಹಿಕ ರಕ್ಷೆ

ಯುವರಾಜನಿಗೆ ಸಾಮೂಹಿಕ ರಕ್ಷೆ
Published On :

ನವದೆಹಲಿ: ಚುನಾವಣೋತ್ತರ ಸಮೀಕ್ಷೆಗಳು ಹೀನಾಯ ಸೋಲನ್ನು ಖಚಿತಪಡಿಸುತ್ತಿರುವಂತೆ 'ಸಾಮೂಹಿಕ ಹೊಣೆಗಾರಿಕೆ' ಪ್ರಸ್ತಾಪಿಸುವ ಮೂಲಕ ಕಾಂಗ್ರೆಸ್ ಪಾಳಯದಲ್ಲಿ ಪ್ರಧಾನಿ ಡಾ.ಮನಮೋಹನ ಸಿಂಗ್ ಮತ್ತು ಚುನಾವಣೆ ಪ್ರಚಾರದ ಸಾರಥ್ಯ ವಹಿಸಿದ್ದ ರಾಹುಲ್ ಗಾಂಧಿ ಅವರನ್ನು ಟೀಕೆಗಳಿಂದ ಪಾರು ಮಾಡುವ ಪ್ರಯತ್ನ ಆರಂಭವಾಗಿದೆ.
ಬೆಳಗ್ಗೆ ಪ್ರಧಾನಿಯನ್ನು ಹೊಣೆ ಮಾಡುವ ಪ್ರಯತ್ನಗಳಾದವು. 'ಫಲಿತಾಂಶ ನಮ್ಮ ವಿರುದ್ಧವಾಗಿ ಬಂದರೂ ಪ್ರಧಾನಿ ಅವರನ್ನು ದೂಷಿಸದೇ ಸಮರ್ಥಿಸಿಕೊಳ್ಳಿ' ಎಂದು ಸೋನಿಯಾ ಗಾಂಧಿ ಆಣತಿ ನೀಡುತ್ತಿದ್ದಂತೆ, 'ಅತ್ಯಂತ ಕಷ್ಟದ ಕಾಲದಲ್ಲಿ ಮನಮೋಹನ ಸಿಂಗ್ ದೇಶವನ್ನು ಮುನ್ನಡೆಸಿದ್ದಾರೆ' ಎಂಬ ಹೇಳಿಕೆ ಪಕ್ಷದಿಂದ ಹೊರಬಿತ್ತು. 'ರಾಹುಲ್ ಸರ್ಕಾರದ ಭಾಗವಾಗಿರಲಿಲ್ಲ. ಹೀಗಾಗಿ ಸೋಲಿನ ಹೊಣೆಗಾರಿಕೆಯನ್ನು ನಾಯಕರೆಲ್ಲರೂ ಸಾಮೂಹಿಕವಾಗಿ ಹೊತ್ತುಕೊಳ್ಳಬೇಕು' ಎಂದು ಸಚಿವರಾದ ಕಮಲನಾಥ್ ಮತ್ತು ಜೈರಾಮ್ ರಮೇಶ್ ಹೇಳಿದರು.
ತನಗೆ ವಿರುದ್ಧವಾಗಿರುವ ಚುನಾವಣೋತ್ತರ ಸಮೀಕ್ಷೆ ಒಪ್ಪಿಕೊಳ್ಳಲು ಹಿಂದೇಟು ಹಾಕಿರುವ ಕಾಂಗ್ರೆಸ್, '80 ಕೋಟಿ ಮತದಾರರಿರುವ ದೇಶದಲ್ಲಿ ಕೆಲವೇ ಲಕ್ಷ ಜನರ ಅಭಿಪ್ರಾಯ ಆಧರಿಸಿ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ' ಎಂದಿದೆ. ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ಕುಮಾರ್ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.