ಪ್ರಧಾನ ಸುದ್ದಿ

ಮತ ಎಣಿಕೆ ವಿಶ್ವಾಸಕ್ಕೆ ಪಾಡು

ಮತ ಎಣಿಕೆ ವಿಶ್ವಾಸಕ್ಕೆ ಪಾಡು
Published On :

 ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ, ಕೊಪ್ಪಳ, ಮೇ 15
ಮತ ಎಣಿಕೆಯ ವಿಶ್ವಾಸಾರ್ಹತೆ ವೃದ್ಧಿಸಲು ಚುನಾವಣೆ ಆಯೋಗ ಮುಂದಾಗಿದೆ. ಈ ಸಾರಿ ಪಾಡು PADU (Printer-Cum Auxilary Display Unit )ಯಂತ್ರ ಬಳಕೆ ಮಾಡುವ ಮೂಲಕ ಪ್ರತಿ ಸುತ್ತಿನ ಮತ ಎಣಿಕೆಯ ವಿವರದ ಯಥಾಪ್ರತಿಯನ್ನು ಏಜೆಂಟರಿಗೆ ನೀಡುವ ಹೊಸ ಪದ್ಧತಿ ಅಳವಡಿಸಿದೆ.
ಈ ವ್ಯವಸ್ಥೆಯನ್ನು ಕರ್ನಾಟಕ ಹಾಗೂ ಆಂಧ್ರ ಪ್ರದೇಶದಲ್ಲಿ ಈ ಸಲ ಮೊದಲ ಬಾರಿಗೆ ಅಳವಡಿಸಲಾಗಿದೆ. ಮುಂದೆ ಎಲ್ಲ ರಾಜ್ಯಗಳಿಗೂ ವಿಸ್ತರಿಸುವ ಗುರಿ ಇದೆ. ಭವಿಷ್ಯದಲ್ಲಿ ಮತದಾನ ಮಾಡಿರುವುದಕ್ಕೆ ಸ್ವೀಕೃತಿ ನೀಡುವುದಕ್ಕೂ 'ಪಾಡು'ದಲ್ಲಿ ಅವಕಾಶವಿದೆ.
ಇನ್ನಷ್ಟು ಪಾರದರ್ಶಕತೆ: ಇದುವರೆಗೂ ಮತ ಎಣಿಕೆ ಸಿಬ್ಬಂದಿ ಮತಯಂತ್ರದ ಕಂಟ್ರೋಲ್ ಯುನಿಟ್ ಬಟನ್ ಒತ್ತಿ, ಯಾರಿಗೆ ಎಷ್ಟು ಮತಗಳು ಬಿದ್ದಿವೆ ಎಂದು ಹೇಳುತ್ತಿದ್ದರು. ಅದನ್ನೇ ಏಜೆಂಟರು ಹಾಗೂ ಎಣಿಕೆ ಸಿಬ್ಬಂದಿಯೂ ಬರೆದುಕೊಳ್ಳುತ್ತಿದ್ದರು. ಹೀಗೆ ಮಾಡುವಾಗ ಹೆಚ್ಚು ಕಡಿಮೆ ಆಗುವ ಸಾಧ್ಯತೆ ಇದೆ ಎನ್ನುವ ಆರೋಪವಿತ್ತು. ಬಟನ್ ಒತ್ತಿದ ಸಿಬ್ಬಂದಿ ಬಿಜೆಪಿಗೆ 100 ಎಂದಾಗ ಸಿಬ್ಬಂದಿ ಅದನ್ನು 10 ಎಂದು ಬರೆದುಕೊಳ್ಳುವ ಸಾಧ್ಯತೆ ಇತ್ತು. ಮತ್ತೊಮ್ಮೆ ಕೇಳುವುದಕ್ಕೂ ಅವಕಾಶ ಇರುತ್ತಿರಲಿಲ್ಲ. ಸಿಬ್ಬಂದಿ ದಾಖಲು ಮಾಡುವುದನ್ನು ಎಜೆಂಟರಿಗೆ ತೋರಿಸುವುದೂ ಆಗುತ್ತಿರಲಿಲ್ಲ.
ಇಂಥ ತಾಪತ್ರಯ ಈಗಿಲ್ಲ. 'ಪಾಡು'ಯಂತ್ರವನ್ನು ಕಂಟ್ರೋಲ್ ಯುನಿಟ್ಗೆ ಅಳವಡಿಸಲಾಗುತ್ತದೆ. ಇದು ಯಾರಿಗೆ ಎಷ್ಟು ಮತ ಬಿದ್ದಿವೆ ಎನ್ನುವುದನ್ನು ತೋರಿಸುತ್ತದೆ. ಅದರ ಮುದ್ರಿತ ಪ್ರತಿಯನ್ನು ನೀಡುತ್ತದೆ. ಯಾವ ಪಕ್ಷಕ್ಕೆ ಎಷ್ಟು ಮತಗಳು ಬಿದ್ದಿವೆ ಎನ್ನುವುದರ ಮುದ್ರಿತ ಪ್ರತಿಯೇ ಸಿಗುವುದರಿಂದ ಗೊಂದಲಕ್ಕೆ ಅವಕಾಶ ಇರುವುದಿಲ್ಲ. ಪ್ರತಿ ಸುತ್ತಿನಲ್ಲೂ ಇದು ನೀಡುವ ವಿವರಗಳನ್ನು ಏಜೆಂಟರು ಹಾಗೂ ಸಿಬ್ಬಂದಿ ಕಾಯ್ದುಕೊಳ್ಳಬಹುದು. ಯಾವ ಅಭ್ಯರ್ಥಿಗೆ ಎಷ್ಟು ಮತ ಬಂದಿವೆ ಎಂಬುದು ಗೊತ್ತಾಗಿಬಿಡುತ್ತದೆ.

ದೇಶದಲ್ಲಿ ಇದೇ ಮೊದಲ ಬಾರಿ ಆಂಧ್ರ ಮತ್ತು ಕರ್ನಾಟಕದಲ್ಲಿ 'ಪಾಡು' ಯಂತ್ರ ಬಳಕೆ ಮಾಡಲಾಗುತ್ತದೆ. ಈ ಸಾರಿ ಪ್ರತಿ ಸುತ್ತಿನ ವಿವರವನ್ನು ಪಾಡು ಮುದ್ರಿಸಿ ನೀಡಿದ ಮತ ಎಣಿಕೆಯ ವಿವರದ ಝರಾಕ್ಸ್ ಪ್ರತಿಯನ್ನು ಅಲ್ಲಿಯೇ ನೀಡಲಾಗುತ್ತದೆ. ಇದಕ್ಕಾಗಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
- ಕೆ.ಪಿ. ಮೋಹನರಾಜ್, ಜಿಲ್ಲಾಧಿಕಾರಿ, ಕೊಪ್ಪಳ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.