ಪ್ರಧಾನ ಸುದ್ದಿ

ದಡ ಸೇರಿಸಲು ಕಸರತ್ತು ನಡೆಸಿದ ಅಂಬಿಗ!

ದಡ ಸೇರಿಸಲು ಕಸರತ್ತು ನಡೆಸಿದ ಅಂಬಿಗ!
Published On :

ಮಂಡ್ಯ: ಜೆಡಿಎಸ್ ಭಾರೀ ಗೆಲವಿನ ನಾಗಲೋಟಕ್ಕೆ ಮೂಗುದಾರ ಹಾಕಿದ ಸೂತ್ರದಾರ ಎಂದರೆ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್.
ತಮ್ಮ ತೀವ್ರ ಅನಾರೋಗ್ಯದ ನಡುವೆಯೂ ಚುನಾವಣೆಯ ಕೊನೆ ಎರಡು ದಿನಗಳ ಕಾಲ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಪರ ಪ್ರಚಾರ ನಡೆಸಿ ಜೆಡಿಎಸ್‌ನ ಗೆಲವಿನ ಅಬ್ಬರಕ್ಕೆ ಒಂದಷ್ಟು ಕಡಿವಾಣ ಹಾಕಿದ ಅಂಬರೀಷ್ ತಮ್ಮ ಕ್ಷೇತ್ರದಲ್ಲಿ 6,926 ಮತಗಳನ್ನು ಕಾಂಗ್ರೆಸ್‌ಗೆ ಬರುವಂತೆ ಮಾಡಿದ್ದಾರೆ.
ಒಂದು ಹಂತದಲ್ಲಿ ಅಂಬಿ ಅನಾರೋಗ್ಯದಿಂದಾಗಿ ಲೋಕಸಭಾ ಕ್ಷೇತ್ರದ ಪ್ರಚಾರಕ್ಕೆ ಬರುವುದೇ ಇಲ್ಲ ಎಂಬ ವದಂತಿ ಇತ್ತು. ಆದರೆ, ತಮ್ಮ ಸ್ಥಾನದ ಜವಾಬ್ದಾರಿ ಅರಿತ ಅಂಬಿ ಕೊನೆಯ 2 ದಿನಗಳಲ್ಲಿ ಜಿಲ್ಲೆಗೆ ಆಗಮಿಸಿ ರಮ್ಯಾ ಅವರ ಗೆಲುವಿಗೆ ಶ್ರಮಿಸುವ ಪ್ರಯತ್ನ ಮಾಡಿದರು. ಆದರೆ, ಕ್ಷೇತ್ರದ ಮತದಾರ ನೀಡುವ ಗೌರವಯುತವಾದ ಸೋಲಿಗೆ ಕಾಂಗ್ರೆಸ್ ಒಪ್ಪಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದರು.
ಬಿಜೆಪಿ ಹಾಗೂ ಮೋದಿ ಅಲೆ ಅಬ್ಬರದ ನಡುವೆಯೂ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ 5,18,852 ಮತಗಳನ್ನು ಪಡೆದಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಠೇವಣಿ ಕೂಡ ದಕ್ಕಿಲ್ಲ. ಅಂದರೆ ಮೋದಿ ಅಲೆ ಈ ಕ್ಷೇತ್ರದಲ್ಲಿ ಬೀಸಿಲ್ಲ ಎಂಬುದನ್ನು ಸಾಬೀತು ಮಾಡುವಲ್ಲಿ ಜಿಲ್ಲಾ ಮಂತ್ರಿಗಳು ಯಶಸ್ವಿಯಾಗಿದ್ದಾರೆ. ಇವೆಲ್ಲದರ ನಡುವೆ ಕಾಂಗ್ರೆಸ್ ಬಣಗಳ ನಡುವೆ ಇದ್ದ ತಿಕ್ಕಾಟಗಳನ್ನು ಬದಿಗಿಟ್ಟು ಕಾಂಗ್ರೆಸ್‌ಗೆ ಗೌರವಯುತವಾದ ಮತಗಳು ಬರುವಂತೆ ಮಾಡುವಲ್ಲಿ ಅಂಬಿ ಪ್ರಯತ್ನ ಕೂಡ ಫಲತಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.