ಪ್ರಧಾನ ಸುದ್ದಿ

ಮೋದಿ ಪ್ರಮಾಣಕ್ಕೆ ಸರ್ಪಗಾವಲು

ಮೋದಿ ಪ್ರಮಾಣಕ್ಕೆ ಸರ್ಪಗಾವಲು
Published On :

 ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪಾಕಿಸ್ತಾನ ಸೇರಿದಂತೆ ಸಾರ್ಕ್ ರಾಷ್ಟ್ರಗಳ ಮುಖ್ಯಸ್ಥರು ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದ ಒಳ ಮತ್ತು ಹೊರ ಆವರಣದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. 10,000 ರಕ್ಷಣಾ ಸಿಬ್ಬಂದಿ ನಿಯೋಜಿಸಲಾಗಿದೆ. ದೆಹಲಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ರಾಷ್ಟ್ರಪತಿ ಭವನ ಸಂಪರ್ಕಿಸುವ ಬಹುತೇಕ ರಸ್ತೆಗಳಲ್ಲಿ 500 ಮೀಟರ್ ದೂರದಲ್ಲೇ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ನಾಲ್ಕು ಹಂತಗಳಲ್ಲಿ ಬಿಗಿ ರಕ್ಷಣೆ ಒದಗಿಸಲಾಗಿದೆ. ದೆಹಲಿ ಪೊಲೀಸರು ಹೊರ ವಲಯದಲ್ಲಿ ರಕ್ಷಣೆ ಹೊಣೆ ಹೊತ್ತಿದ್ದರೆ, ಅರೆ ಸೇನಾ ಪಡೆ, ಎಸ್ಪಿಜಿ ಮತ್ತು ಎಸ್‌ಎಸ್‌ಜಿ ಸಿಬ್ಬಂದಿ ರಾಷ್ಟ್ರಪತಿ ಭವನದ ಒಳ ಮತ್ತು ಹೊರ ಆವರಣದ ರಕ್ಷಣಾ ಹೊಣೆ ಹೊತ್ತಿದ್ದಾರೆ.
ಸುರಕ್ಷೆಗೆ ಸವಾಲು: ಸಮಾರಂಭದಲ್ಲಿ  4000 ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ. ಈ ಪೈಕಿ ಸುರಕ್ಷೆ ದೃಷ್ಟಿಯಿಂದ ಅತಿ ಮುಖ್ಯರೆಂದರೆ- ಪಾಕ್ ಪ್ರಧಾನಿ ನವಾಜ್ ಷರೀಫ್, ಅಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜೈ ಹಾಗೂ ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಷೆ.
ಉಗ್ರ ಸಂಘಟನೆಗಳು, ಪ್ರತ್ಯೇಕವಾದಿಗಳು ಷರೀಫ್ ಭೇಟಿ  ಶತಾಯಗತಾಯ ತಡೆಯಲೆತ್ನಿಸುತ್ತಿದ್ದಾರೆ. ಅಫ್ಘಾನಿಸ್ತಾನ ಅಧ್ಯಕ್ಷ ಹಮೀದ್ ಕರ್ಜೈ ಸಹ ತಾಲಿಬಾನ್ ಉಗ್ರರ ಗುರಿಯಾಗಿದ್ದಾರೆ. ಹೀಗಾಗಿ ಸಂಭವನೀಯ ದಾಳಿ ತಡೆ ರಕ್ಷಣಾ ಪಡೆಗೆ ಸವಾಲು. ಎಲ್‌ಟಿಟಿಇ ನಾಯಕ ಪ್ರಭಾಕರನ್ ನಿರ್ಮೂಲನೆ ಮಾಡಿದ ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಷೆ ಬಗ್ಗೆ ತಮಿಳರಲ್ಲಿ ಅಸಮಾಧಾನ ಇದೆ. ಆಹ್ವಾನ ಪ್ರತಿಭಟಿಸಿ ವೈಕೊ ಕಪ್ಪು ಬಾವುಟ ಪ್ರದರ್ಶನಕ್ಕೆ ಸಿದ್ಧ್ದರಾಗಿದ್ದಾರೆ. ಆಹ್ವಾನಿತರ ಎದುರು ಇಂತಹ ಅನುಚಿತ ನಡವಳಿಕೆ ತಡೆಯುವುದು ಸಹ ರಕ್ಷಣಾ ಪಡೆಗೆ ಸವಾಲಾಗಿದೆ.
ಗಣರಾಜ್ಯೋತ್ಸವ ದಿನದಂತೆ ಭೂ- ವಾಯು ಸೇನಾ ರಕ್ಷಣಾ ಪಡೆಗಳನ್ನು ನಿಯೋಜಿಸಲಾಗಿದೆ. ಸಂಭವನೀಯ ವಾಯುದಾಳಿ ತಡೆಯಲು ಭಾರತೀಯ ವಾಯುಪಡೆ ಸನ್ನದ್ಧವಾಗಿದೆ. ರಾಷ್ಟ್ರಪತಿ ಭವನದ ಸುತ್ತಮುತ್ತಲ ಎಲ್ಲ ಬಹುಮಹಡಿ ಕಟ್ಟಡಗಳನ್ನು ತಪಾಸಣೆ ಮಾಡಿದ್ದು, ನಿಗಾ ಇಡಲಾಗಿದೆ. ವಾಯು ದಾಳಿ ನಿರೋಧಕ ಶಸ್ತ್ರಧಾರಿಗಳನ್ನು ರಾಷ್ಟ್ರಪತಿ ಭವನದ ಸುತ್ತಲೂ ನಿಯೋಜಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.