ಮೋದಿ ಬಗ್ಗೆ ಗೊತ್ತಾದ 16 ಸಂಗತಿ

ಮೋದಿಯವರ ಜಾತಿ
ಪ್ರಿಯಾಂಕಾ ಗಾಂಧಿ ಮೋದಿಯವರ ರಾಜಕಾರಣವನ್ನು 'ನೀಚ ರಾಜಕಾರಣ' ಎಂದು ಮಾಡಿದ್ದ ಟೀಕೆಗೆ ಪ್ರತ್ಯುತ್ತರ ನೀಡಿದ ಮೋದಿ, 'ನಾನು ನೀಚ (ಕೆಳ) ಜಾತಿಯಲ್ಲಿ ಹುಟ್ಟಿದ್ದಕ್ಕೆ ನನ್ನ ರಾಜಕಾರಣವನ್ನು ನೀಚ ರಾಜನೀತಿ ಎನ್ನಬೇಡಿ. ಕೆಳ ಜಾತಿಯಲ್ಲಿ ಹುಟ್ಟಿದ್ದು ನನ್ನ ತಪ್ಪೇ' ಎಂದು ಪ್ರಶ್ನಿಸಿದ್ದರು.
ಮೋದಿಯವರ ಬಾಲ್ಯ ವಿವಾಹ
ಮೋದಿ ಬಗ್ಗೆ ಹೊರಬಿದ್ದ ಮಾಹಿತಿಗಳಲ್ಲಿ ಎಲ್ಲರ ಮನಕಲಕಿದ್ದು ಅವರ ಬಾಲ್ಯ ವಿವಾಹ. ಚುನಾವಣಾ ನಾಮಪತ್ರದ ವೇಳೆ ಪತ್ನಿಯ ಹೆಸರನ್ನು ಬಿಚ್ಚಿಟ್ಟಿದ್ದರು. ಜಶೋದಾ ಬೆನ್ ಅವರೊಂದಿಗೆ ಮೋದಿ ವಿವಾಹವಾಗಿದ್ದರು ಎಂಬ ಸುದ್ದಿ ಜನರ ಕುತೂಹಲ ಕೆರಳಿಸಿತ್ತು.
ಕುಟುಂಬದಿಂದ ಬೇರ್ಪಟ್ಟಿದ್ದು
ಸುಮಾರು 30 ವರ್ಷಗಳ ಕಾಲ ಮೋದಿ ಅವರು ತಮ್ಮ ಕುಟುಂಬದಿಂದ ಬೇರೆಯಾಗಿದ್ದರು ಎಂಬ ವಿಚಾರ. ಬಾಲ್ಯ ವಿವಾಹವಾದ ಮಾರನೇ ದಿನ ಮುಂಜಾನೆಯೇ ಮನೆಯಿಂದ ಹೊರಬಿದ್ದಿದ್ದರು. ವಡೋದರಾಕ್ಕೆ ಹೋಗಿ, ಕುಟುಂಬದಿಂದ ದೂರವೇ ಉಳಿದಿದ್ದರು.
ಆ ನಾಲ್ವರು ಅಧಿಕಾರಿಗಳು
ಇಡೀ ದೇಶವೇ ಮೆಚ್ಚುವಂತೆ ಗುಜರಾತ್ ಅಭಿವೃದ್ಧಿ ಮಾಡಬೇಕೆನ್ನುವ ಮೋದಿ ಕನಸನ್ನು ನನಸು ಮಾಡಲು ದುಡಿದಿದ್ದು ನಾಲ್ವರು ಐಎಎಸ್ ಅಧಿಕಾರಿಗಳು. ಅವರೆಂದರೆ, ಕುನಿಯಿಲ್ ಕೈಲಾಸನಾಥನ್, ಜಿಸಿ ಮರ್ಮು, ಎ.ಕೆ. ಶರ್ಮಾ ಹಾಗೂ ವಿಜಯ್ ನೆಹ್ರಾ.
ಪ್ರಾಣಿ ಪ್ರಿಯ
ತಮ್ಮ ಪ್ರಚಾರ ಭಾಷಣಗಳಲ್ಲಿ ತಮ್ಮಲ್ಲಿನ ಪ್ರಾಣಿ ಪ್ರೀತಿಯನ್ನು ಪ್ರಚುರಪಡಿಸಿದ್ದರು ಮೋದಿ. ಅವರೂ ನಮ್ಮ-ನಿಮ್ಮಂತೆಯೇ ಪ್ರಾಣಿ ಪ್ರಿಯರು ಎಂಬುದು ಗೊತ್ತಾಗಿದ್ದೇ ಆಗ.
ಸನ್ಯಾಸಿಯಾಗಲು ಬಯಸಿದ್ದರು!
ಬಾಲಕನಾಗಿದ್ದಾಗಲೇ ಮೋದಿಗೆ ಮುಂದೆ ಸನ್ಯಾಸಿಯಾಗುವ ಹಂಬಲವಿತ್ತು. ಸಾಧುಸಂತರ ಜೊತೆ ಪಶ್ಚಿಮ ಬಂಗಾಳದ ಬೇಲೂರಿನಲ್ಲಿರುವ ರಾಮಕೃಷ್ಣ ಆಶ್ರಮ, ಹಿಮಾಲಯಗಳಲ್ಲೂ ನಿರ್ದಿಷ್ಟ ಉದ್ದೇಶವಿಲ್ಲದೇ ಅಲೆದಾಡಿದ ಮೋದಿ ಆನಂತರ ಸನ್ಯಾಸಿಯಾಗುವ ಆಸೆ ಕೈಬಿಟ್ಟರು.
ಬಾಹ್ಯ ಸೌಂದರ್ಯಕ್ಕೆ ಮಹತ್ವ
ಡ್ರೆಸ್ ಬಗ್ಗೆ ಮೋದಿಗೆ ಹೆಚ್ಚು ಕಾಳಜಿ. ಅರ್ಧ ತೋಳಿನ ಕುರ್ತಾ, ಪೈಜಾಮ ಹಾಗೂ ವೇಸ್ಟ್ ಕೋಟ್ ಅವರ ಬ್ರಾಂಡ್ ದಿರಿಸಾಗಿ ಜನರ ಗಮನ ಸೆಳೆಯಿತು. ಅದರಲ್ಲೂ ಚಿತ್ತಾಕರ್ಷಿಸುವ ಬಣ್ಣಗಳ ಉಡುಪು ಧರಿಸುತ್ತಿದ್ದ ಮೋದಿ ಅವರ ವಸ್ತ್ರಾಭಿರುಚಿ ಎಲ್ಲರ ಹೊಗಳಿಕೆಗೂ ಪಾತ್ರವಾಯಿತು.
ಸೆಕ್ಸ್ ಸಿಂಬಲ್ ಸ್ಟೇಟಸ್
ಮೋದಿ ಒಪ್ಪುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಆದರೆ, ಗುಜರಾತ್ನಲ್ಲಿ ಅವರು ಸೆಕ್ಸ್ ಸಿಂಬಲ್ ಆಗಿ ಪರಿಗಣಿಸಲ್ಪಟ್ಟಿದ್ದಾರೆ ಎಂಬ ವಿಚಾರ ಬಹಿರಂಗವಾಯಿತು. ಗುಜರಾತ್ನಲ್ಲಿ ಅವರನ್ನು ಹೆಚ್ಚು ಇಷ್ಟಪಡುವವರಲ್ಲಿ ಮಹಿಳೆಯರೇ ಅಧಿಕ.
ವರ್ಚಸ್ಸಿಗೆ ಹೆಚ್ಚು ಮಹತ್ವ
'ಸಾರ್ವಜನಿಕ ಸಂಪರ್ಕ'ಕ್ಕೆ ಸಂಬಂಧಪಟ್ಟಂತೆ ಸುಮಾರು ಮೂರು ತಿಂಗಳ ಕಾಲ ತರಬೇತಿ ಪಡೆದ ಮೋದಿ ಅವರು, ತಮ್ಮ ವರ್ಚಸ್ಸು ಕಾಪಾಡಿಕೊಳ್ಳುವುದನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಅಂದಹಾಗೆ, ಅವರು ಸಾರ್ವಜನಿಕ ಸಂಪರ್ಕದ ಬಗ್ಗೆ ಕೋಚಿಂಗ್ ಪಡೆದಿದ್ದು ಅಮೆರಿಕದಲ್ಲಿ.
ಕೆಳ ಮಧ್ಯಮ ವರ್ಗದಲ್ಲಿ ಜನನ
ಮೋದಿಯವರು ಕೆಳ ಮಧ್ಯಮ ವರ್ಗದ ದಂಪತಿಗೆ ಜನಿಸಿದವರು ಎಂಬ ವಿಚಾರ ಪ್ರಚಾರಕ್ಕೆ ಬಂತು. ಅವರ ಜೀವನ ಚರಿತ್ರೆಯ ಪ್ರಕಾರ, ಅವರು ಬಾಲ್ಯದಲ್ಲಿ ಟೀ ಮಾರುತ್ತಾ ತಮ್ಮ ಕುಟುಂಬದ ಆದಾಯಕ್ಕೆ ನೆರವಾಗಿದ್ದರು.
ಮೋದಿ ಮನೋಧರ್ಮ
ಆಧ್ಯಾತ್ಮಿಕ ಅನ್ವೇಷಣೆಯ ಇಚ್ಛೆಯಿಂದ ಹಿಮಾಲಯ ಮುಂತಾದ ಕಡೆ ಸಾಧುಗಳ ಜೊತೆ ಸುತ್ತಾಡಿದ ಅನುಭವ, ಮೋದಿಯವರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಲು ಪ್ರೇರೇಪಿಸಿತು.
ಮಾತೃದೇವೋಭವ ಜಪ
ಯಾವುದೇ ಪ್ರಯತ್ನಕ್ಕೆ ಕೈ ಹಾಕುವ ಮುನ್ನ ಮೋದಿ ಅವರು ತಮ್ಮ ತಾಯಿಯ ಆಶೀರ್ವಾದ ಪಡೆಯದೇ ಹೆಜ್ಜೆ ಮುಂದಿಡುವುದಿಲ್ಲ. ತಾಯಿಯೆಂದರೆ ಮೋದಿಗೆ ಅತ್ಯಂತ ಗೌರವ, ಪ್ರೀತಿ.
ವಿವೇಕಾನಂದರೇ ಆದರ್ಶ
2012ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ 182 ಕ್ಷೇತ್ರಗಳಲ್ಲಿ ಮೋದಿ ವಿವೇಕಾನಂದ ಯುವ ವಿಕಾಸ ಯಾತ್ರೆ ನಡೆಸಿ ಯಶಸ್ಸು ಕಂಡಿದ್ದರು.
ಆರೋಗ್ಯದ ಗುಟ್ಟು ಯೋಗ
ಟ್ರಿಮ್ ಮಾಡಿದ ಬಿಳಿಗಡ್ಡ, ಅಪ್ರತಿಮ ಮಾತುಗಾರಿಕೆ, ಉತ್ತಮ ವಸ್ತ್ರಾಭಿರುಚಿಗಳಿಂದ ಎಲ್ಲರ ಮನಸ್ಸನ್ನೂ ತಮ್ಮೆಡೆಗೆ ಸೆಳೆಯುವಂಥ ವ್ಯಕ್ತಿ ಮೋದಿ. ಇವರ ಉತ್ಸಾಹ ಹಾಗೂ ಆರೋಗ್ಯದ ಗುಟ್ಟು ಯೋಗ.
ಕವಿ ಹಾಗೂ ಬರಹಗಾರ
ಜನರನ್ನು ಮುಟ್ಟುವಂತೆ ಬರೆಯುವ ಚಾತುರ್ಯ ಉಳ್ಳವರು ಮೋದಿ. ಆದರೆ, ಅವರು ಗುಜರಾತಿ ಭಾಷೆಯಲ್ಲೇ ಬರೆಯುವುದರಿಂದ ಮಾಧ್ಯಮಗಳು ಅದಕ್ಕೆ ಹೆಚ್ಚು ಒತ್ತು ನೀಡಲಿಲ್ಲ.
ಮದ್ಯ, ಮಾಂಸದಿಂದ ದೂರ
ಮೋದಿ ಯಾವತ್ತೂ ಸಸ್ಯಾಹಾರಿ. ಮದ್ಯದಿಂದ ದೂರ. ಇದೇ ಅವರ ಸದೃಢ ಕಾಯಕದ ಮತ್ತೊಂದು ಗುಟ್ಟು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


