ಪ್ರಧಾನ ಸುದ್ದಿ

25 ಮೋದಿ ಪ್ರಮಾಣದ ಕೌತುಕಗಳು

25 ಮೋದಿ ಪ್ರಮಾಣದ ಕೌತುಕಗಳು
Published On :
  1. ಸ್ಮೃತಿ ಇರಾನಿ ಮೊದಲ ಬಾರಿಗೆ ಕಪಿಲ್ ಸಿಬಲ್ ವಿರುದ್ಧ ಕಣಕ್ಕಿಳಿದು(2004) ಸೋತಿದ್ದರು. 10 ವರ್ಷಗಳ ಬಳಿಕ ಈಗ ಇರಾನಿ ಮಾನವ ಸಂಪನ್ಮೂಲ ಅಭಿವೃದ್ಧಿ(ಎಚ್ಆರ್ಡಿ) ಸಚಿವರಾಗಿದ್ದಾರೆ.
  2. ಜೆಎನ್ ಯುನಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಶಹಜಾದ್ ಇಬ್ರಾಹಿಂ ಈಗ ವಿವಿ ಆವರಣದಲ್ಲೇ ಚಹಾ ಮಾರುತ್ತಾರೆ. ಸಮಾರಂಭಕ್ಕೆ ಈ ಚಾಯ್ವಾಲಾಗೂ ಆಹ್ವಾನ ಬಂದಿತ್ತು. ಇಬ್ರಾಹಿಂಗೆ ಖುಷಿಯೋ ಖುಷಿ.
  3. ಟಿಡಿಪಿ ನಾಯಕ ಅಶೋಕ್ ಗಜಪತಿ ರಾಜು  ಸಚಿವರಾಗಿ ಪ್ರಮಾಣ ಸ್ವೀಕರಿಸುವಾಗ ತಮ್ಮ ಹೆಸರನ್ನೇ ಮರೆತುಬಿಟ್ಟಿದ್ದರು. ಆಗ ರಾಷ್ಟ್ರಪತಿ ಅವರೇ 'ನಿಮ್ಮ ಹೆಸರು ಹೇಳಿ' ಎಂದರು. 'ಹೆಸರಲ್ಲೇನಿದೆ' ಎನ್ನುವಂತಿಲ್ಲ.
  4. ಸಾರ್ವಜನಿಕ ಸಮಾರಂಭದಲ್ಲಿ ಎಲ್ಲ ಅಸಮಾಧಾನ, ಜಗಳ ಮರೆಯಲೇಬೇಕು. ಬಿಜೆಪಿಯ ಬಹುತೇಕ ನಾಯಕರು ಆಡ್ವಾಣಿ ಕಾಲು ಮುಟ್ಟಿ ನಮಸ್ಕರಿಸಿದರು.
  5. ಐಶ್ ಬೇಬಿ ವಿಚಾರದಲ್ಲಿ ಹಿಂದೊಮ್ಮೆ ಕಾದಾಡಿಕೊಂಡು ಪರಸ್ಪರ ಕಣ್ಣೆತ್ತಿ ಕೂಡ ನೋಡದ ಸಲ್ಮಾನ್ ಖಾನ್ ಹಾಗೂ ವಿವೇಕ್ ಒಬೆರಾಯ್ ಇಬ್ಬರೂ ಪಾಲ್ಗೊಂಡಿದ್ದರು. ಆಹಾ ಏನು ಮೋಡಿ ನೋಡಿ, 'ಐಶ್ವರ್ಯಾಳಿಂದ ದೂರವಾಗಿ, ಮೋದಿಯಿಂದ ಒಂದಾದರು'.
  6. ಎಲ್ಲ ಸಚಿವರೂ ದೇವರ ಹೆಸರಲ್ಲೇ ಪ್ರಮಾಣ ಸ್ವೀಕರಿಸಿದರು. ಹಾಗಾಗಿ ಸಚಿವ ಸಂಪುಟದಲ್ಲಿ ನಾಸ್ತಿಕರಾರೂ ಇಲ್ಲ.
  7. ಎಲ್ಲರಿಗೂ ದಾಹವಿತ್ತು, ಆದರೆ ಎಲ್ಲೂ ನೀರಿರಲಿಲ್ಲ. ಬಿಸಿಲು ಹೇಗಿತ್ತೆಂದರೆ ಜೇಟ್ಲಿ ಪುತ್ರ ರೋಹನ್ ಪ್ರಜ್ಞೆ ತಪ್ಪಿಬಿಟ್ಟರು.
  8. ಅಮೃತಸರದಲ್ಲಿ ಸೋಲುಂಡ ಅರುಣ್ ಜೇಟ್ಲಿ ತಮ್ಮ ಕ್ಷೇತ್ರವನ್ನು ಕ್ಷಮಿಸುತ್ತಾರಾ? ತಾವು ಚುನಾವಣೆ ವೇಳೆ ನೀಡಿದ ಆಶ್ವಾಸನೆಈಡೇರಿಸುತ್ತಾರಾ ಎಂದು ಕಾಯುತ್ತಿದ್ದಾರಂತೆ.
  9. ಬಿಜೆಪಿಯನ್ನು ಕಂಡರಾಗದ ಮುಲಾಯಂ  ಸಮಾರಂಭಕ್ಕೆ ಬಂದಿದ್ದೇಕೆ ಗೊತ್ತಾ? ಮಗನಿಗಾಗಿ. ತಾನು ಬರದಿದ್ದರೆ ಎಲ್ಲಿ ಮೋದಿ ಉತ್ತರಪ್ರದೇಶಕ್ಕೆ ನೀಡುವ ಅನುದಾನ ಕಡಿತಗೊಳಿಸುತ್ತಾರೋ ಎಂಬ ಭಯ ಅವರಲ್ಲಿತ್ತಂತೆ.
  10. ಗೆದ್ದ ಮೋದಿ ಅವರು ಠಾಕುಠೀಕಾದ ವಸ್ತ್ರ ಧರಿಸಿ ಸ್ಟೈಲಾಗಿ ಬಂದರೆ, ಸೋತ ಬಪ್ಪಿ ಲಹಿರಿ ಕೂಡ ಭಾರಿ ಆಭರಣಗಳನ್ನು ತೊಟ್ಟು ತಾನೇನೂ ಕಡಿಮೆಯಿಲ್ಲ ಎಂಬಂತೆ ಕೆಂಪುಹಾಸಿನಲ್ಲಿ ನಡೆದಾಡಿದರು.
  11. ವೆಂಕಯ್ಯ ನಾಯ್ಡು ವೇದಿಕೆ ಹತ್ತುವವರೆಗೆ ಎಲ್ಲರೂ ಹಿಂದಿಯಲ್ಲೇ ಪ್ರಮಾಣ ಸ್ವೀಕರಿಸಿದರು. ನಂತರ ಬಂದ ಹೆಚ್ಚಿನವರು ಇಂಗ್ಲಿಷ್ ಬಳಸಿದರು.
  12. ಬಿಸಿಲ ಬೇಗೆಗೆ ಎಲ್ಲರ ತಲೆಯೂ ಕಾದ ಬಾಣಲೆಯಂತಾಗಿತ್ತು. ಒಮ್ಮೆ ಮುಗಿದರೆ ಸಾಕಿತ್ತು. ಅಧಿಕೃತ ದಾಖಲೆಗೆ ಸ್ಮೃತಿ ಸಹಿ ಹಾಕುತ್ತಿದ್ದರೆ, ಮುಂದಿನ ಹೆಸರು ಘೋಷಣೆ ಮಾಡಿ, ಬೇಗ ಬೇಗ ಮುಗಿಸಿ ಎಂದು ರಾಷ್ಟ್ರಪತಿ ತನ್ನ ಕಾರ್ಯದರ್ಶಿಗೆ ಸೂಚಿಸಿದರು.
  13. ಅದೃಷ್ಟದ ಗಾಲಿ ಹೇಗೆ ತಿರುಗುತ್ತದೆ ನೋಡಿ. ಕಳೆದ ಎನ್ಡಿಎ ಸಂಪುಟದಲ್ಲಿ ಸಚಿವ ಎಂ.ಎಂ. ಜೋಶಿ ಕೈಕೆಳಗೆ ಕೆಲಸ ಮಾಡಿ ರೋಸಿಹೋಗಿದ್ದರು ಉಮಾಭಾರತಿ. ಈ ಬಾರಿ ಸಂಪುಟ ಸೇರಿದ ಉಮಾ ಮುಖದಲ್ಲಿ ನಗು, ಜೋಶಿ ಮುಖ ಬಾಡಿತ್ತು.
  14. ಚಿತ್ರೋದ್ಯಮದ ಅನೇಕರು ಪಾಲ್ಗೊಂಡಿದ್ದರು. ಜಾವೇದ್ ಅಖ್ತರ್, ಸಲ್ಮಾನ್, ಅನುಪಮ್ಖೇರ್, ಹೇಮಾಮಾಲಿನಿ, ಧರ್ಮೇಂದ್ರ, ವಿನೋದ್ ಖನ್ನಾ ಉಪಸ್ಥಿತರಿದ್ದರು. ಅಮಿತಾಭ್, ಜಯಾ ಅನುಪಸ್ಥಿತಿ ಕಾಣುತ್ತಿತ್ತು.
  15. ಅಂಬಾನಿ ಸಹೋದರರು ತಮ್ಮ ಖಾಂದಾನ್ ಜತೆಗೇ ಬಂದಿದ್ದರು. ಮುಕೇಶ್ ಮತ್ತು ಅಂಬಾನಿ ಕುಟುಂಬ ದೂರ ದೂರ ಕುಳಿತಿತ್ತು. ಗೌತಮ್ ಅದನಿ ಮುಂಭಾಗದಲ್ಲೇ ಸ್ಥಾನ ಪಡೆದಿದ್ದರು.
  16. ಮೋದಿ ಬೆಂಬಲಿಗರು ಗಂಗಾ ತೀರದಲ್ಲಿ ಸಂಸತ್ನ ಮರಳುಶಿಲ್ಪ ರಚಿಸಿ ಖುಷಿ ಪಟ್ಟರು. ಸಿಹಿ ಹಂಚಿ ಸಂಭ್ರಮಿಸಿದರು.
  17. ಬಿಜೆಪಿ ಪ್ರಧಾನ ಕಾರ್ಯದರ್ಶಿ ಜೆ.ಪಿ. ನಡ್ಡಾ ಅವರೇ ಮುಂದಿನ ಅಧ್ಯಕ್ಷ ಎಂಬ ಗುಸುಗುಸು ಕೇಳಿಬರುತ್ತಿತ್ತು. ನಡ್ಡಾ ಆಗಮಿಸುತ್ತಿದ್ದಂತೆ ಎಲ್ಲರೂ ಅವರಿಗೆ ಅಭಿನಂದಿಸಿದರು. ಅವರು ಮಾತ್ರ ಅದನ್ನು ಅಲ್ಲಗಳೆದರು.
  18. ವಕ್ತಾರರಾಗಿ ಕಾರ್ಯನಿರ್ವಹಿಸಿದ ರವಿಶಂಕರ್ ಪ್ರಸಾದ್, ನಿರ್ಮಲಾ, ಜಾವ್ಡೇಕರ್, ಇರಾನಿ ಎಲ್ಲರಿಗೂ ಸಚಿವ ಸ್ಥಾನ ನೀಡಿ ಅವರ 'ಮಾತಿಗೆ' ಬೆಲೆ ನೀಡಲಾಯಿತು.
  19. ಕುಮಾರಮಂಗಲಂ ಬಿರ್ಲಾ ಆಗಮಿಸಿದಾಗ ಆಸನವೇ ಇರಲಿಲ್ಲ. ತಕ್ಷಣ ಮುಕೇಶ್ ಅಂಬಾನಿಯವರು ತಮ್ಮ ಪಕ್ಕದ ಆಸನವನ್ನು ಬಿರ್ಲಾರಿಗೆ ಮೀಸಲಿರಿಸಿದರು.
  20. ಸೋಮವಾರ ಬೆಳ್ಳಂಬೆಳಗ್ಗೆಯೇ ಸುಷ್ಮಾ ಸ್ವರಾಜ್ ತಮ್ಮ ಟ್ವಿಟರ್ ಹ್ಯಾಂಡಲ್ ಅನ್ನು ಅಖ್ಡಝಟಛಖಢಿಛ್ಠಛಞಇಞಠ ಯಿಂದ ಅಖ್ಡಝಟಛಖಢಿಛ್ಠಛಞ. ಆಗಿ ಬದಲಿಸಿದರು. ಅವರೂ ಸಚಿವರಾಗಿ ಬದಲಾದ್ರಲ್ಲ ಅದಕ್ಕೆ.
  21. ರಾಜೀವ್ ಪ್ರತಾಪ್ ರೂಡಿಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬುದು ಗೊತ್ತಾದೊಡನೆ ಅನೇಕರಿಗೆ ಆಘಾತವಾಯಿತು.
  22. ಕಾಂಗ್ರೆಸ್ನ ಹೆಚ್ಚಿನ ನಾಯಕರೇನೂ ಕಂಡುಬರಲಿಲ್ಲ. ಸಿಂಘ್ವಿ, ಇ. ಅಹ್ಮದ್, ರೇಣುಕಾ ಚೌಧರಿ, ಜೈರಾಂ, ಪಿ.ಜೆ. ಕುರಿಯನ್,  ಚಿದಂಬರಂ ಮತ್ತಿತರ ಮುಖಗಳಷ್ಟೇ.
  23. ಅಸ್ಸಾಂ ಕಲಾವಿದ ಗೌತಮ್ ಬರ್ಧನ್ ತಮ್ಮ ರಕ್ತದಲ್ಲೇ ಮೋದಿ ಚಿತ್ರ ಬಿಡಿಸಿದ್ದರು. 35 ಇಂಚಿನ ರೇಖಾಚಿತ್ರದಲ್ಲಿ ಪಾರಿವಾಳ, ವಿವೇಕಾನಂದರನ್ನೂ ಚಿತ್ರಿಸಲಾಗಿತ್ತು.
  24. ಸ್ಮೃತಿ ಇರಾನಿ ಉಟ್ಟ ಸೀರೆಯಲ್ಲೂ ಪಕ್ಷದ ಬಗೆಗಿನ ಪ್ರೀತಿ ಎದ್ದುಕಾಣುತ್ತಿತ್ತು. ಸೀರೆ ಮೇಲೆ ಕಮಲ ಇತ್ತು.
  25. ಅಮಿತ್ ಷಾ, ಮುಲಾಯಂ ಸಿಂಗ್  ಶುಭಾಷಯ ವಿನಿಯ ಮಾಡು ತ್ತಿರುವುದು ಟ್ವಿಟರ್ರಲ್ಲಿ ಹೆಚ್ಚು ಷೇರ್ ಆಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.