ಪ್ರಧಾನ ಸುದ್ದಿ

97,868 ವಿದ್ಯಾರ್ಥಿಗಳಿಗೆ ವೃತ್ತಿ

97,868 ವಿದ್ಯಾರ್ಥಿಗಳಿಗೆ ವೃತ್ತಿ
Published On :

ಕನ್ನಡಪ್ರಭ ವಾರ್ತೆ |ಬೆಂಗಳೂರು |ಮೇ 27
ವೃತ್ತಿ ಶಿಕ್ಷಣ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ರಾಜ್ಯದ 97,868 ವಿದ್ಯಾರ್ಥಿಗಳು ಅರ್ಹರಾಗಿದ್ದಾರೆ.
ಟಾಪ್-10 ರ್ಯಾಂಕ್‌ಗಳಲ್ಲಿ ಬಾಲಕಿಯರಿಗಿಂತ ಬಾಲಕರೇ ಹೆಚ್ಚು ಸ್ಥಾನ ಗಳಿಸಿದ್ದು, ಬೆಂಗಳೂರಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಹಿಂದಿನ ಬಾರಿಗಿಂತ 4353 ಹೆಚ್ಚಿನ ವಿದ್ಯಾರ್ಥಿಗಳು ವೃತ್ತಿ ಕೋರ್ಸ್‌ಗಳಿಗೆ ಅರ್ಹರಾಗಿದ್ದರೂ, ರಾಜ್ಯದಲ್ಲಿರುವ ಒಟ್ಟು ಎಂಜಿನಿಯರಿಂಗ್ ಸೀಟುಗಳನ್ನು ಇದು ಮೀರುವುದಿಲ್ಲ. ಇದರೊಂದಿಗೆ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಎಂಜಿನಿಯರಿಂಗ್ ಸೀಟುಗಳು ಖಾಲಿ ಉಳಿಯುವುದು ಖಾತ್ರಿಯಾಗಿದೆ. ಕಳೆದ ಮೇ 1 ಮತ್ತು 2ರಂದು ನಡೆದ ಪ್ರವೇಶ ಪರೀಕ್ಷೆಗೆ 1,39,198 ವಿದ್ಯಾರ್ಥಿಗಳು ಹಾಜರಾಗಿದ್ದರು. ಇವರಲ್ಲಿ ವೈದ್ಯ-ದಂತವೈದ್ಯ ಕೋರ್ಸ್‌ಗೆ 21,257 ಹಾಗೂ ಎಂಜಿನಿಯರಿಂಗ್ 96,161 ವಿದ್ಯಾರ್ಥಿಗಳು ಅರ್ಹತೆ ಗಿಟ್ಟಿಸಿದ್ದಾರೆ. ಬಿ-ಫಾರ್ಮಾ ಹಾಗೂ ಫಾರ್ಮಾ-ಡಿ ಕೋರ್ಸ್‌ಗೆ ಅತಿ ಹೆಚ್ಚು ಎಂದರೆ 97,868 ವಿದ್ಯಾರ್ಥಿಗಳು ರ್ಯಾಂಕ್ ಪಡೆದಿದ್ದಾರೆ.
ಬಿಟೆಕ್(ಆಹಾರ) ಕೋರ್ಸ್ ಒಂದು ಹೊರತುಪಡಿಸಿ ಉಳಿದೆಲ್ಲ ವಿಭಾಗಗಳಲ್ಲಿಯೂ ಬೆಂಗಳೂರಿನ ವಿದ್ಯಾರ್ಥಿಗಳೇ ಮೊದಲ ರ್ಯಾಂಕ್ ಗಳಿಸಿದ್ದು, ಟಾಪ್-10 ಪಟ್ಟಿಯಲ್ಲಿ ಕೇವಲ ಮೂವರು ಅಥವಾ ನಾಲ್ಕು ವಿದ್ಯಾರ್ಥಿನಿಯರು ಇದ್ದಾರೆ. ಒಟ್ಟಾರೆ ಫಲಿತಾಂಶ ನೋಡಿದಾಗ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಲ್ಲಿ ಶೇ.68.44  ಬಾಲಕರು ಹಾಗೂ ಶೇ.69.79 ಬಾಲಕೀಯರು ವೃತ್ತಿ ಕೋರ್ಸ್‌ಗಳಿಗೆ ಮಾನ್ಯತೆ ಪಡೆದಿದ್ದಾರೆ.

ರಾಜ್ಯ ಸರ್ಕಾರದಿಂದ  'ಟಾಪ್‌' ಬಹುಮಾನ
ವೈದ್ಯ-ದಂತವೈದ್ಯ, ಎಂಜಿನಿಯರಿಂಗ್, ಐಎಸ್‌ಎಂಎಚ್, ಬಿಎಸ್‌ಸಿ(ಕೃಷಿ), ವಾಸ್ತುಶಿಲ್ಪ, ಬಿಫಾರ್ಮಾ ಹಾಗೂ ಪಶುವೈದ್ಯ ವಿಭಾಗದಲ್ಲಿ ಮೊದಲ 5 ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವೇ ಶುಲ್ಕ ತುಂಬಿಕೊಡುತ್ತದೆ. ರಾಜ್ಯದ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರಿ ಕೋಟಾದ ಸೀಟಿನ ಮೂಲಕ ಪ್ರವೇಶ ಪಡೆದರೆ ಅಂತಹ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಸಂದರ್ಭದಲ್ಲಿ ಉಚಿತ ಪ್ರವೇಶ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ ವೈದ್ಯ ಹಾಗೂ ಎಂಜಿನಿಯರಿಂಗ್ ಕೋರ್ಸ್‌ನಲ್ಲಿ ಮೊದಲ 5 ರ್ಯಾಂಕ್‌ಗಳಿಸಿದ ವಿದ್ಯಾರ್ಥಿಗಳಿಗೆ ಮಾತ್ರ ರಾಜ್ಯ ಸರ್ಕಾರ ಶುಲ್ಕ ಭರಿಸಿಕೊಟ್ಟಿತ್ತು. ಇದನ್ನು ಎಲ್ಲ ವಿಭಾಗಗಳಿಗೂ ವಿಸ್ತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.


ದಾಖಲೆ ಪರಿಶೀಲನಾ ಕೇಂದ್ರ
- ಕರ್ನಾಟಕ ಪರೀಕ್ಷಾ ಪ್ರಾಧಿಕಾರ- ಬೆಂಗಳೂರು
- ಬಾಪೂಜಿ ಎಂಜಿನಿಯರಿಂಗ್ ಮಹಾವಿದ್ಯಾಲಯ- ದಾವಣಗೆರೆ
-ಆರ್‌ಬಿವೈಎಂ ಎಂಜಿನಿಯರಿಂಗ್ ಕಾಲೇಜು- ಬಳ್ಳಾರಿ
- ಎಸ್‌ಎಲ್‌ಎನ್ ಎಂಜಿನಿಯರಿಂಗ್ ಕಾಲೇಜು- ರಾಯಚೂರು
- ವಿಟಿಯು ಸ್ನಾತಕೋತ್ತರ ಕೇಂದ್ರ- ಗುಲ್ಬರ್ಗ
- ಡಾ.ಪಿ.ಜಿ.ಹಳಕಟ್ಟಿ ಕಾಲೇಜು- ಬಿಜಾಪುರ
- ಕೆಎಲ್‌ಇ ಎಂಜಿನಿಯರಿಂಗ್ ಕಾಲೇಜು- ಬೆಳಗಾವಿ
- ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜು- ಧಾರವಾಡ
- ಗಿರಿಜಾಬಾಯಿ ಸೈಲ್ ಎಂಜಿನಿಯರಿಂಗ್ ಕಾಲೇಜು- ಕಾರವಾರ
- ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು- ಮಂಗಳೂರು
- ಜವಾಹರಲಾಲ್ ನೆಹರು ಎಂಜಿನಿಯರಿಂಗ್ ಕಾಲೇಜು- ಶಿವಮೊಗ್ಗ
- ಸರ್ಕಾರಿ ಎಂಜಿನಿಯರಿಂಗ್ ಕಾಲೇಜು- ಹಾಸನ
- ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು- ಮೈಸೂರು

ಶುಲ್ಕ ಹಾಗೂ ಸೀಟು ಹಂಚಿಕೆ ಬದಲಾವಣೆಯಿಲ್ಲ

ಸರ್ಕಾರಿ, ಕಾಮೆಡ್-ಕೆ ಸೀಟುಗಳ ಹಂಚಿಕೆಹಾಗೂ ಶುಲ್ಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಖಾಸಗಿ ಕಾಲೇಜುಗಳ ವೈದ್ಯದಲ್ಲಿ ಶೇ.40, ದಂತವೈದ್ಯದಲ್ಲಿ ಶೇ.35 ಹಾಗೂ ಎಂಜಿನಿಯರಿಂಗ್‌ನಲ್ಲಿ ಶೇ.45 ಸರ್ಕಾರಿ ಸೀಟುಗಳಿರುತ್ತವೆ. ಅಲ್ಪಸಂಖ್ಯಾತ ಕಾಲೇಜುಗಳ ವೈದ್ಯ-ದಂತವೈದ್ಯ ಕೋರ್ಸ್‌ಗಳಲ್ಲಿ ಶೇ.25 ಹಾಗೂ ಎಂಜಿನಿಯರಿಂಗ್‌ನಲ್ಲಿ ಶೇ.40 ಸೀಟುಗಳು ಸರ್ಕಾರಿ ಕೋಟಾಕ್ಕೆ ಸಿಗುತ್ತವೆ. ಇನ್ನು ಎಂಜಿನಿಯರಿಂಗ್‌ನಲ್ಲಿ ಮಾತ್ರ ಶೇ.5ರಷ್ಟು ಸೂಪರ್ ನ್ಯೂಮರಿಕ್ ಕೋಟಾವಿರುತ್ತದೆ. ಶುಲ್ಕವು ಕಳೆದ ಬಾರಿಯಂತೆ ಮುಂದುವರಿಯಲಿದೆ.

ವಿದ್ಯಾರ್ಥಿಗಳಿಗೆ ಸೂಚನೆ
-ಅರ್ಜಿಯಲ್ಲಿ ದಾಖಲಿಸಿದ ಜಾತಿ, ಆದಾಯ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಕುರಿತಂತೆ ಅದೇ ದಾಖಲೆಗಳನ್ನು ನೀಡಬೇಕು. ತಿದ್ದುಪಡಿಗೆ ಅವಕಾಶವಿಲ್ಲ.
- ದಾಖಲೆ ಪರಿಶೀಲನೆಗೆ ವಿದ್ಯಾರ್ಥಿಗಳು ಖುದ್ದು ಹಾಜರಾಗಬೇಕು.
- ದಾಖಲೆ ಪರಿಶೀಲನೆಗೆ ಹಾಜರಾಗಿ ಪ್ರಮಾಣಪತ್ರ ಹಾಗೂ ಪಾಸ್‌ವರ್ಡ್ ಪಡೆಯದಿದ್ದರೇ ಆಪ್ಶನ್ ಎಂಟ್ರಿ ಅಸಾಧ್ಯ.
-  ಮೂಲ ದಾಖಲೆಗಳನ್ನು ತಿದ್ದಲು ಹೋಗಿ ಜೈಲು ಪಾಲಾಗುವ ದುಸ್ಸಾಹಸಕ್ಕೆ ಕೈಹಾಕಬೇಡಿ.
- ದಾಖಲೆ ಪರಿಶೀಲನೆಗೆ ಬೆಂಗಳೂರಿಗೆ ಬರಬೇಕಿಲ್ಲ, ರಾಜ್ಯದ 13 ಕೇಂದ್ರಗಳಲ್ಲಿ ದಾಖಲೆ ಪರಿಶೀಲನೆ ಮಾಡಬಹುದು.
- ಎಲ್ಲಕ್ಕಿಂತ ಮೊದಲು ಪ್ರಾಧಿಕಾರವು ನಿಮಗೆ ನೀಡಿರುವ ಮಾರ್ಗದರ್ಶಿ ಪುಸ್ತಕ ಸಂಪೂರ್ಣವಾಗಿ ಓದಿ.

ಸಿಇಟಿ ಅಂಕಿಅಂಶ
ಅರ್ಜಿ ಸಲ್ಲಿಸಿದವರು
1,40,496
ಪರೀಕ್ಷೆಗೆ ಹಾಜರಾದವರು
1,39,198
ವೈದ್ಯ ಹಾಗೂ ದಂತವೈದ್ಯ
ವಿಭಾಗದಲ್ಲಿ ರ್ಯಾಂಕ್ ಪಡೆದವರು
21,257
ಐಎಸ್‌ಎಂಎಚ್
69,507
ಎಂಜಿನಿಯರಿಂಗ್
96,161
ಬಿಎಸ್‌ಸಿ(ಕೃಷಿ)
70,686
ಬಿವಿಎಸ್‌ಸಿ
70,060
ಬಿಟೆಕ್(ಆಹಾರ)
68,986
ಬಿಟೆಕ್(ಕೃಷಿ)
97,356
ಬಿ-ಫಾರ್ಮಾ ಮತ್ತು ಫಾರ್ಮಾ ಡಿ
97,868
ವಾಸ್ತು ಶಿಲ್ಪ
1276


ಬಿಎಸ್‌ಸಿ(ಕೃಷಿ)
-  ಗಿರಿಜಾ ಅಗರ್ವಾಲ್, ನಾರಾಯಣ ಪಿಯು ಕಾಲೇಜು, ಬೆಂಗಳೂರು
-  ನೇಹಾ ಎಚ್.ವಿ, ಎಂಇಎಸ್ ಪಿಯು ಕಾಲೇಜು, ಬೆಂಗಳೂರು
-  ಸೂರ್ಯ ವಿ.ಕೆ, ಎಕ್ಸ್‌ಪರ್ಟ್ ಪಿಯು ಕಾಲೇಜು, ಬೆಂಗಳೂರು
-  ವಿಶಾಲ್ ಧರ್ಪುರ್, ಎಸ್ ಬಸವೇಶ್ವರ ರೇಸಿ ಪಿಯು ಕಾಲೇಜು, ಗುಲ್ಬರ್ಗ
-  ಪ್ರಣವ್ ಎಸ್ ಕುಮಾರ್, ಎಕ್ಸ್‌ಪರ್ಟ್ ಪಿಯು ಕಾಲೇಜು, ಬೆಂಗಳೂರು
ಬಿವಿಎಸ್‌ಸಿ
-  ಗಿರಿಜಾ ಅಗರ್ವಾಲ್, ನಾರಾಯಣ ಪಿಯು ಕಾಲೇಜು, ಬೆಂಗಳೂರು
-  ನೇಹಾ ಎಚ್.ವಿ, ಎಂಇಎಸ್ ಪಿಯು ಕಾಲೇಜು, ಬೆಂಗಳೂರು
-  ಸೂರ್ಯ ವಿ.ಕೆ, ಎಕ್ಸ್‌ಪರ್ಟ್ ಪಿಯು ಕಾಲೇಜು, ಬೆಂಗಳೂರು
-  ವಿಘ್ನೇಶ್ ನಾರಾಯಣ ಆರ್, ವೆಂಕಟ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆ, ಬೆಂಗಳೂರು
-  ವಿಶಾಲ್ ಧರ್ಪುರ್, ಎಸ್ ಬಸವೇಶ್ವರ ರೇಸಿ ಪಿಯು ಕಾಲೇಜು, ಗುಲ್ಬರ್ಗ

ಬಿಟೆಕ್(ಆಹಾರ)
-  ಸೂರ್ಯ ವಿ.ಕೆ, ಎಕ್ಸ್‌ಪರ್ಟ್ ಪಿಯು ಕಾಲೇಜು, ಬೆಂಗಳೂರು
-   ಗಿರಿಜಾ ಅಗರ್ವಾಲ್, ನಾರಾಯಣ ಪಿಯು ಕಾಲೇಜು, ಬೆಂಗಳೂರು
-  ಸೂರಜ್ ಆರ್.ಎಸ್, ಎಂಇಎಸ್ ಪಿಯು ಕಾಲೇಜು, ಬೆಂಗಳೂರು
-  ಯಶಸ್ವಿನಿ ಮೂರ್ತಿ, ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜು, ಬೆಂಗಳೂರು
-  ವಿಶಾಲ್ ಧರ್ಪುರ್, ಎಸ್ ಬಸವೇಶ್ವರ ರೇಸಿ ಪಿಯು ಕಾಲೇಜು, ಗುಲ್ಬರ್ಗ

ಬಿಫಾರ್ಮಾ, ಫಾರ್ಮಾ ಡಿ

- ಶ್ರಿನಿಧಿ ಪ್ರಭು, ನಾರಾಯಣ ಪಿಯು ಕಾಲೇಜು, ಬೆಂಗಳೂರು
-  ರೌನಕ್ ಭಿರಂಗಿ, ಚೇತನಾ ಪಿಯು ಕಾಲೇಜು, ಬೆಂಗಳೂರು
-  ಸುಮಿತ್, ಶಾರದಾ ಪಿಯು ಕಾಲೇಜು, ಮಂಗಳೂರು
-  ಮಿಟಿಕಿರಿ ಪ್ರವೀಣ್‌ಕುಮಾರ್, ನಾರಾಯಣ ಶ್ರೀ ಚೈತನ್ಯ ಪಿಯು ಕಾಲೇಜು, ಹೈದ್ರಾಬಾದ್
-  ಅನಿಂದ್ಯಾ ಶರ್ಮಾ, ನ್ಯಾಷನಲ್ ಪಬ್ಲಿಕ್ ಸ್ಕೂಲ್, ಬೆಂಗಳೂರು

ಮೇ 30ರಿಂದ  ದಾಖಲೆ ಪರಿಶೀಲನೆ
ವೃತ್ತಿ ಶಿಕ್ಷಣ ಪದವಿ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಮೇ 30ರಿಂದ ಪ್ರಾರಂಭವಾಗುತ್ತಿದೆ. ಮೇ 30ರಿಂದ ಜೂನ್ 17ರವರೆಗೆ ದಾಖಲೆ ಪರಿಶೀಲನೆ ನಡೆಯಲಿದೆ. ಜೂ.14ರಿಂದ 30ರವರೆಗೆ ಮೊದಲನೇ ಹಂತದ ಕೌನ್ಸೆಲಿಂಗ್, ಜು.2ರಿಂದ 10ರವರೆಗೆ ಎರಡನೇ ಹಂತದ ಕೌನ್ಸೆಲಿಂಗ್ ಹಾಗೂ ಜು.12ರಿಂದ 19ರವರೆಗೆ ಅಂತಿಮ ಹಂತದ ಕೌನ್ಸೆಲಿಂಗ್ ನಡೆಯಲಿದೆ. ಎಲ್ಲ ಕೋರ್ಸ್‌ಗಳ ಸೀಟು ಹಂಚಿಕೆಯು ಜೂನ್ ಮೊದಲ ವಾರದಲ್ಲಿ ಪ್ರಕಟಿಸುತ್ತೇವೆ ಎಂದು ದೇಶಪಾಂಡೆ ತಿಳಿಸಿದ್ದು, ಕಾಮೆಡ್-ಕೆ ಕೌನ್ಸೆಲಿಂಗ್‌ಗೂ ಮೊದಲು ಪ್ರವೇಶ ಪ್ರಕ್ರಿಯೆ ಮುಗಿಸುತ್ತೇವೆ ಎಂಬ ಭರವಸೆ ನೀಡಿದ್ದಾರೆ.

ಎಂಜಿನಿಯರಿಂಗ್, ಬಿಟೆಕ್(ಕೃಷಿ)
ಶ್ರಿನಿಧಿ ಪ್ರಭು,
ನಾರಾಯಣ ಪಿಯು ಕಾಲೇಜು, ಬೆಂಗಳೂರು
 ರೌನಕ್ ಭಿರಂಗಿ, ಚೇತನಾ ಪಿಯು ಕಾಲೇಜು, ಬೆಂಗಳೂರು
 ಸುಮಿತ್,
ಶಾರದಾ ಪಿಯು ಕಾಲೇಜು, ಮಂಗಳೂರು
ಮಿಟಿಕಿರಿ
ಪ್ರವೀಣ್‌ಕುಮಾರ್, ನಾರಾಯಣ ಶ್ರೀ
ಚೈತನ್ಯ ಪಿಯು ಕಾಲೇಜು, ಹೈದರಾಬಾದ್
ಅರ್ಜುನ್ ಕೆ,
ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜು, ಬೆಂಗಳೂರು

ವೈದ್ಯ-ದಂತವೈದ್ಯ, ಐಎಸ್‌ಎಂಎಚ್
ಗಿರಿಜಾ ಅಗರ್ವಾಲ್,
ನಾರಾಯಣ ಪಿಯು ಕಾಲೇಜು, ಬೆಂಗಳೂರು
ನೇಹಾ ಎಚ್.ವಿ,
ಎಂಇಎಸ್ ಪಿಯು ಕಾಲೇಜು, ಬೆಂಗಳೂರು
ಸೂರ್ಯ ವಿ.ಕೆ,
ಎಕ್ಸ್‌ಪರ್ಟ್ ಪಿಯು ಕಾಲೇಜು, ಬೆಂಗಳೂರು
 ವಿಘ್ನೇಶ್ ನಾರಾಯಣ ಆರ್,
ವೆಂಕಟ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆ,
ಬೆಂಗಳೂರು
 ವಿಶಾಲ್ ಧರ್ಪುರ್,
ಎಸ್ ಬಸವೇಶ್ವರ
ರೇಸಿ ಪಿಯು ಕಾಲೇಜು,
ಗುಲ್ಬರ್ಗ

ವಾಸ್ತುಶಿಲ್ಪ
ಸಂಹಿತಾ ಕೊಟ್ಟ ಮಸು, ನಾಷನಲ್ ಹಿಲ್ ವ್ಯೂವ್ ಪಬ್ಲಿಕ್ ಕಾಲೇಜು, ಬೆಂ.
ದೀಪ್ಶಿಕಾ ಕೆ, ಸಿಎಂಆರ್ ನ್ಯಾಷನಲ್ ಪಬ್ಲಿಕ್
ಶಾಲೆ, ಬೆಂಗಳೂರು
ಉದಿಕ್ಷಾ ಕಪಾನಿ,
ಜೈನ್ ಪಿಯು ಕಾಲೇಜು, ಬೆಂಗಳೂರು
ಅಂಕಿತಾ
ಸಿಂಹನ್,
ಮಿರಂಡ ಪಿಯು ಕಾಲೇಜು,
ಬೆಂಗಳೂರು
ಅನುಷಾ ಎಸ್, ಕೇದ್ರೀಯ
ವಿದ್ಯಾಲಯ,
 ಬೆಂಗಳೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.