ವಿದೇಶದಲ್ಲಿರುವ ಕಪ್ಪುಹಣವನ್ನು ತರುತ್ತೇನೆ; ನನ್ನ ಮೇಲೆ ನಂಬಿಕೆಯಿಡಿ: ಮೋದಿ

ನವದೆಹಲಿ: ನನ್ನನ್ನು ನಂಬಿ. ವಿದೇಶದಲ್ಲಿರುವ ಕಪ್ಪು ಹಣವನ್ನು ವಾಪಸ್ ತಂದೇ ತರುತ್ತೇನೆ. ವಿದೇಶದಲ್ಲಿರುವ ದುಡ್ಡು ಅದು ಬಡವರದ್ದು, ಅದು ಎಷ್ಟೇ ಆದರೂ ಸರಿ ಅದನ್ನು ವಾಪಾಸ್ ತರುವ ಜವಾಬ್ದಾರಿ ನನ್ನದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾನುವಾರ ಬೆಳಗ್ಗೆ 11 ಗಂಟೆಗೆ ಆಕಾಶವಾಣಿಯಲ್ಲಿ ಪ್ರಸಾರವಾದ ಮನ್‌ಕೀಬಾತ್ ಕಾರ್ಯಕ್ರಮದಲ್ಲಿ ಮೋದಿಯವರು ಈ ಮಾತುಗಳನ್ನಾಡಿದ್ದಾರೆ. ಎರಡನೇ ಬಾರಿ ಪ್ರಸಾರವಾಗಿರುವ ಈ ಕಾರ್ಯಕ್ರಮದಲ್ಲಿ ಮೋದಿ ಏನು ಹೇಳಿದರು? ಇಲ್ಲಿದೆ ಪಾಯಿಂಟ್ಸ್...
- ಎಲ್ಲರಿಗೂ ಶುಭಕಾಮನೆಗಳು, ಕಳೆದ ಬಾರಿ ಪ್ರಸಾರವಾದ 'ಮನ್ ಕೀ ಬಾತ್' ನಲ್ಲಿ ನಾನು ಕೆಲವೊಂದು ವಿಷಯಗಳನ್ನು ಹೇಳಿದ್ದೆ. ಎಲ್ಲರೂ ಕೆಟ್ಟವರು ಅನ್ನೋ ಮನಸ್ಥಿತಿಯನ್ನು ನಾವು ಬದಲಿಸಬೇಕಾಗಿದೆ. ಸರ್ಕಾರ ಜನರು ಏನು ಯೋಚಿಸುತ್ತಾರೆ ಎಂಬುದನ್ನು ಮನಗಂಡು ಮನ್ನಡೆ ಇಡುತ್ತಿದೆ.
- ನಮ್ಮ ಯುವಜನಾಂಗ ಏನೋ ಮಾಡಲು ಹೋಗಿ ಏನೋ ಮಾಡುತ್ತಿರುವುದನ್ನು ನೋಡುತ್ತಿದ್ದೇನೆ. ನಾನು ಕಳೆದ ಬಾರಿ ಖಾದಿ ಖರೀದಿ ಮಾಡುವಂತೆ ಹೇಳಿದ್ದೆ, ಅದರರ್ಥ ಎಲ್ಲರೂ ಖಾದೀವಾದಿಗಳಾಗಬೇಕೆಂದಲ್ಲ. ಖಾದಿ ಖರೀದಿಸಿ ಅಂತ ಅಷ್ಟೇ. ಅದರ ನಂತರ ಖಾದಿ ಮಾರಾಟದಲ್ಲೂ ಪ್ರಗತಿ ಕಂಡು ಬಂದಿದೆ. ಖಾದಿ ಮಾರಾಟದಲ್ಲಿ ಅಂದಾಜು 125 ಶೇ. ಹೆಚ್ಚಳವುಂಟಾಗಿದೆ.
- ನಾನು ಸ್ವಚ್ಛತಾ ಆಂದೋಲನ ಹೇಗೆ ಜನರಲ್ಲಿ ಪರಿಣಾಮ ಬೀರಿದೆ ಎಂಬುದನ್ನು ಹೇಳುತ್ತೇನೆ ಕೇಳಿ. ಒಬ್ಬ ವ್ಯಕ್ತಿ ನನಗೊಂದು ಪತ್ರ ಬರೆದಿದ್ದರು. ಅವರು ಹೇಳಿದ್ದೇನೆಂದರೆ, ಅವರು ರೈಲಿನಲ್ಲಿ ಪ್ರಯಾಣ ಮಾಡುತ್ತಿರಬೇಕಾದರೆ ಜನರು ಕಸವನ್ನು ಕಂಡ ಕಂಡಲ್ಲಿ ಎಸೆಯದೆ ಅದನ್ನು ಕಸದ ಬುಟ್ಟಿಗೆ ಹಾಕಲು ನೋಡುತ್ತಿದ್ದರು. ಅಲ್ಲಿ ಕಸದ ಬುಟ್ಟಿ ಸಿಗದೇ ಇದ್ದಾಗ ಒಂದು ಮೂಲೆಯಲ್ಲಿ ಎಲ್ಲವನ್ನೂ ರಾಶಿ ಹಾಕಿದರು. ಅಂದರೆ ಅವರೀಗ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ ಎಂದಾಯ್ತು. ಜನರು ದೇಶವನ್ನು ಸ್ವಚ್ಛವಾಗಿಡಲು ನೋಡುತ್ತಿದ್ದಾರೆ ಎಂಬುದನ್ನು ಕೇಳಿ ನನಗೆ ಖುಷಿಯಾಗುತ್ತಿದೆ.
- ನನ್ನನ್ನು ಭೇಟಿ ಮಾಡುವ ವ್ಯಕ್ತಿಗಳೆಲ್ಲರೂ ಈಗ ತಮ್ಮ ವೈಯಕ್ತಿಕ ವಿಷಯಗಳನ್ನು ಬಿಟ್ಟು ಸಮಾಜದ ಪ್ರಗತಿಗೆ, ಸಮಾಜದ ಸೇವೆಯ ಬಗ್ಗೆ ಮಾತನಾಡುತ್ತಾರೆ.
- ನಮ್ಮ ಸುತ್ತುಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವುದು ನಮ್ಮ ಜವಾಬ್ದಾರಿ. ಇದರಿಂದಾಗಿ ನಾವು ಬಡವರಿಗೆ ಸಹಾಯ ಮಾಡುತ್ತೇವೆ. ಕೊಳಕು, ಗಲೀಜುಗಳಿಂದ ರೋಗ ಬೇಗನೆ ಹರಡುವುದು ಶ್ರೀಮಂತರಿಗಲ್ಲ, ಬಡವರಿಗೆ, ಆದ್ದರಿಂದ ನಾವು ಸ್ವಚ್ಛತೆಯನ್ನು ಕಾಪಾಡುವ ಮೂಲಕ ಬಡವರಿಗೆ ಸಹಾಯ ಮಾಡಬಹುದು.
- ದೇಶದ ಜನರು ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದಾಗ ನಾನು ಸಿಯಾಚಿನ್‌ಗೆ ಹೋಗಿದ್ದೆ. ಅಲ್ಲಿನ ಜವಾನರೊಂದಿಗೆ ಸಮಯ ಕಳೆದೆ. ನಾವಿಲ್ಲಿ ನೆಮ್ಮದಿಯಾಗಿರುವುದು ಅವರ ಕಾರಣದಿಂದಲೇ ಅಲ್ಲವೆ? ನಾನು ಆ ಜವಾನರಿಗೆ ಸೆಲ್ಯೂಟ್ ಮಾಡ್ತೀನಿ
- ಇವತ್ತು ನಾನೊಂದು ವಿಷಯವನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಾನು ಈ ಮಾತನ್ನಾಡುವಾಗ ನೀವು ಜನರು ನನ್ನನ್ನು ವಿಶ್ವಾಸ ಮಾಡುತ್ತೀರಿ ಎಂದು ನಾನು ನಂಬಿದ್ದೀನಿ. ನಾನೀಗ ಹೇಳಲಿಚ್ಛಿಸುತ್ತಿರುವುದು ಕಪ್ಪು ಹಣದ ಬಗ್ಗೆ. ವಿದೇಶದಲ್ಲಿರುವ ಕಪ್ಪು ಹಣ ಬಡವರದ್ದು. ಹೀಗಿರುವಾಗ ಬಡವರ ದುಡ್ಡನ್ನು ನಾನು ವಾಪಸ್ ತಂದೇ ತರುತ್ತೇನೆ. ಈ ಪ್ರಧಾನ್ ಸೇವಕ್‌ನನ್ನು ನಂಬಿ.
- ವಿದೇಶದಲ್ಲಿ ಎಷ್ಟು ಕಪ್ಪು ಹಣ ಇದೆ ಎಂದು ನಿಮಗೂ ಗೊತ್ತಿಲ್ಲ, ನಮ್ಮ ಸರ್ಕಾರಕ್ಕೂ ಗೊತ್ತಿಲ್ಲ, ಹಿಂದಿನ ಸರ್ಕಾರಕ್ಕೂ ಗೊತ್ತಿರಲಿಲ್ಲ. ಆದರೆ ನನಗೆ ಸಿಕ್ಕಿದ ಮಾಹಿತಿಯ ಪ್ರಕಾರ ನಾವೀಗ ಸರಿಯಾದ ದಾರಿಯಲ್ಲೇ ಕ್ರಮಿಸುತ್ತಿದ್ದೇವೆ. ನಾನು ಪ್ರಧಾನಿಯಾಗಿದ್ದುಕೊಂಡು ನನ್ನಿಂದಾದ ಕೆಲಸಗಳನ್ನು ಮಾಡುತ್ತೇನೆ.
- ನನಗೊಂದು ಪತ್ರ ಸಿಕ್ಕಿದೆ. ಇದರಲ್ಲಿ ಮಾದಕ ವ್ಯಸನದ ಬಗ್ಗೆ ಹೇಳಲಾಗಿದೆ. ನಾನು ಪ್ರಧಾನಿಯಾಗುವ ಮುಂಚೆಯೇ ಈ ವಿಷಯದ ಬಗ್ಗೆ ಯೋಚಿಸುತ್ತಿದೆ. ನನ್ನ ಮುಂದಿನ ಕಾರ್ಯಕ್ರಮದಲ್ಲಿ ನಾನು ಈ ಬಗ್ಗೆ ಹೇಳುವೆ. ನೀವು ನಿಮ್ಮ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಳ್ಳಿ, ಮಾದಕವಸ್ತುಗಳ ಬಳಕೆಯನ್ನು ತಡೆಗಟ್ಟುವ ಬಗ್ಗೆ ನಾನು ಕ್ರಮ ಕೈಗೊಳ್ಳುತ್ತೇನೆ. ಯಾವುದೇ ವಿಷಯವಾಗಲಿ ಸಮಾಜಕ್ಕೆ ಮಾರಕವಾಗಿರುವುದಾದರೆ ಅದರ ಬಗ್ಗೆ ಹೇಳಲು ಅಂಜಿಕೆ ಬೇಡ. ನೀವು ನಿಮ್ಮ ಅಭಿಪ್ರಾಯಗಳನ್ನು ನನ್ನೊಂದಿಗೆ ಹಂಚಿಕೊಳ್ಳುವುದಾದರೆ ನೀವು ಭಾರತದ ಬಗ್ಗೆ ಕಾಳಜಿ ವಹಿಸಿದ್ದೀರಿ ಎಂದರ್ಥ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


