ನಾಯಕನಾಗಿದ್ದಾಗ ಅನುಭವಿಸಿದ ಸೋಲು ನನ್ನ ಕಂಗೆಡಿಸಿತ್ತು: ಸಚಿನ್

ನವದೆಹಲಿ: ನಾನು ನಾಯಕನಾಗಿದ್ದಾಗ ಅನುಭವಿಸಿದ ಸೋಲುಗಳು ನನ್ನನ್ನು ಕುಗ್ಗಿಸಿದ್ದವು . ನನಗೆ ಭಯ ಕಾಡತೊಡಗಿತ್ತು. ಹೀಗಿರುವಾಗ ನಾನು ಕ್ರೀಡೆಯಿಂದ ಸಂಪೂರ್ಣವಾಗಿ ಹೊರಹೋಗಲು ಬಯಸಿದ್ದೆ. ಹೀಗೆ ಹೇಳಿದವರು ಬೇರ್ಯಾರೂ ಅಲ್ಲ. ಕ್ರಿಕೆಟ್ ಲೋಕದ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ !. ತಮ್ಮ ಆತ್ಮಕಥೆ 'ಪ್ಲೇಯಿಂಗ್ ಇಟ್ ಮೈ ವೇ' ಯಲ್ಲಿ ಸಚಿನ್ ತಮ್ಮ ಮನಸ್ಸಿನ ಮಾತನ್ನು ಬಹಿರಂಗಪಡಿಸಿದ್ದಾರೆ.
ಕಳೆದ ವರ್ಷ ಕ್ರಿಕೆಟ್ ಲೋಕಕ್ಕೆ ನಿವೃತ್ತಿ ಹೇಳಿದ 41ರ ಹರೆಯದ ಸಚಿನ್, 2 ದಶಕಗಳ ತಮ್ಮ ಕ್ರಿಕೆಟ್ ಜೀವನದಲ್ಲಿನ ಘಟನೆಗಳನ್ನು ಈ ಪುಸ್ತಕದಲ್ಲಿ ಬಿಚ್ಚಿಟ್ಟಿದ್ದಾರೆ.
ನಾನು ಸೋಲುವುದನ್ನು ಇಷ್ಟಪಡುವುದಿಲ್ಲ. ನಾನು ನಾಯಕನಾಗಿರುವಾಗ ನನ್ನ ಟೀಂ ಹಲವಾರು ಪಂದ್ಯಗಳನ್ನು ಸೋತಿದೆ. ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲವಲ್ಲಾ? ಎಂಬ ಕೊರಗು ಸದಾ ನನ್ನನ್ನು ಕಾಡುತ್ತಿತ್ತು. ನನಗೆ ಆ ಸೋಲನ್ನು ಹೇಗೆ ಎದುರಿಸಬೇಕೆಂದು ಗೊತ್ತಾಗುತ್ತಿರಲಿಲ್ಲ ಎಂದು ಸಚಿನ್ ತಮ್ಮ ಆತ್ಮಕತೆಯಲ್ಲಿ ಹೇಳಿದ್ದಾರೆ.
ಹೀಗೆ ಗೊಂದಲದಲ್ಲಿರುವಾಗ ನಾನು ಆ ನೋವನ್ನು ಪತ್ನಿ ಅಂಜಲಿ ಜತೆ ಹಂಚಿಕೊಳ್ಳುತ್ತಿದ್ದೆ. ಸೋಲು ನನ್ನಲ್ಲಿ ಭಯ ಹುಟ್ಟಿಸಿತ್ತು. ನಾನೆಷ್ಟೇ ಪರಿಶ್ರಮ ಮಾಡಿದ್ದರೂ ಕೂದಲೆಳೆಯ ಅಂತರದಲ್ಲಿ ಮ್ಯಾಚ್ ಸೋತು ಹೋಗುತ್ತಿತ್ತು. ಇದರಿಂದ ನಾನು ಕುಸಿದು ಹೋದೆ. ಭಯ, ಹತಾಶೆ, ಸೋಲು, ನೋವುಗಳಿಂದ ಕಂಗೆಟ್ಟ ನಾನು ಕ್ರೀಡೆಯಿಂದಲೇ ದೂರ ಸರಿಯುವ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದೆ ಎಂದು ಸಚಿನ್ ಹೇಳಿದ್ದಾರೆ.
ನವೆಂಬರ್ 6ಕ್ಕೆ ಲೋಕಾರ್ಪಣೆಯಾಗಲಿರುವ ಈ ಪುಸ್ತಕ ಈಗಾಗಲೇ ಹೆಚ್ಚು ಸುದ್ದಿ ಮಾಡಿದ್ದು, ಸಚಿನ್ ಜೀವನದ ಬಗ್ಗೆ ಅರಿಯಲು ಓದುಗರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


