ಪ್ರಧಾನ ಸುದ್ದಿ

ಗುರುನಾನಕ್ ಜಯಂತಿ ಆಚರಣೆ: ಪಾಕಿಸ್ತಾನಕ್ಕೆ ೧೦೦೦ ಭಾರತೀಯ ಸಿಕ್ ಬಾಂಧವರು

ಗುರುನಾನಕ್ ಜಯಂತಿ ಆಚರಣೆ: ಪಾಕಿಸ್ತಾನಕ್ಕೆ ೧೦೦೦ ಭಾರತೀಯ ಸಿಕ್ ಬಾಂಧವರು
Published On :

ಲಾಹೋರ್: ಸುಮಾರು ೧೧೦೦ ಸಿಕ್ ಯಾತ್ರಿಗಳು, ಸಿಕ್ ಧರ್ಮದ ಸಂಸ್ಥಾಪಕ ಗುರುನಾನಕ್ ಅವರ ೫೩೪ ನೆ ಜನ್ಮವರ್ಷದ ಆಚರಣೆಯಲ್ಲಿ ಭಾಗಿಯಾಗಲು ವಾಘಾ ಗಡಿಯ ಮೂಲಕ ಮಂಗಳವಾರ ಪಾಕಿಸ್ತಾನ ಪ್ರವೇಶಿಸಿದ್ದಾರೆ.

ಅಮೃತಸರ-ವಾಘಾ-ಲಾಹೋರ್ ಮಾರ್ಗದ ಮೂಲಕ ವಿಷೇಶ ರೈಲಿನಲ್ಲಿ ಕೆಲವು ಸಿಕ್ ಯಾತ್ರಿಕರು ಮತ್ತು ಇನ್ನು ಕೆಲವರು ನಡಿಗೆಯ ಮೂಲಕ, ಭಾನುವಾರ ಆತ್ಮಹತ್ಯಾ ಬಾಂಬ್ ಸ್ಪೋಟದಿಂದ ೬೧ ಜನ ಮೃತಗೊಂಡು ರಕ್ತಸಿಕ್ತವಾಗಿದ್ದ ವಾಘಾ ಗಡಿಯನ್ನು ದಾಟಿ ಪಾಕಿಸ್ತಾನಕ್ಕೆ ಮುಂದುವರೆದರು.

ಪಾಕಿಸ್ತಾನದ ಪಂಜಾಬಿನ ನಾನ್ಕಾನ ಸಾಹಿಬ್ ನಲ್ಲಿ ಗುರುನಾನಕ್ ಜಯಂತಿಯ ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಲು ೩೦೦೦ ಸಿಕ್ ಯಾತ್ರಿಕರಿಗೆ ಪಾಕಿಸ್ತಾನ ಸರ್ಕಾರ ವಿಶೇಷ ವೀಸಾ ನೀಡಿದೆ.

ನವೆಂಬರ್ ೯ ರವರೆಗೆ ನಡೆಯಲಿರುವ ಈ ಆಚರಣೆಗಳಿಗೆ ೧೫೦೦೦ ಪಾಕಿಸ್ತಾನಿ ಸಿಕ್ ಬಾಂಧವರೂ ಕೂಡ ಸೇರಿಕೊಳ್ಳಲಿದ್ದಾರೆ.

ಯಾತ್ರಿಕರು ಗಡಿಯಲ್ಲಿ ಯಾವುದೇ ತೊಂದರೆ ಇಲ್ಲದಂತೆ ಚಲಿಸಲು ವಿಷೇಶ ಭದ್ರತಾ ವ್ಯವಸ್ಥೆಯನ್ನು ವಾಘಾ ಗಡಿಯಲ್ಲಿ ಮಾಡಿದ್ದು ಪ್ಯಾರ ಮಿಲಿಟರಿ ಪಡೆಯನ್ನು ಕೂಡ ನಿಯೋಜಿಸಲಾಗಿದೆ. ಲಾಹೋರಿನಿಂದ ನಾನ್ಕಾನ ಸಾಹಿಬ್ ಪ್ರದೇಶಕ್ಕೆ ವಿಷೇಶ ರೈಲಿನಲ್ಲಿ ಯಾತ್ರಿಕರನ್ನು ಕರೆದೊಯ್ಯಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.