ಪ್ರಧಾನ ಸುದ್ದಿ

ಅಜಂ ಖಾನ್‌ನ್ನು ಪಾಕ್‌ಗೆ ಕಳುಹಿಸಿ: ಯೋಗಿ ಆದಿತ್ಯನಾಥ್

ಅಜಂ ಖಾನ್‌ನ್ನು ಪಾಕ್‌ಗೆ ಕಳುಹಿಸಿ: ಯೋಗಿ ಆದಿತ್ಯನಾಥ್
Published On :

ನವದೆಹಲಿ:  ನರೇಂದ್ರ ಮೋದಿ ಅವರ ಸಾಂಸಾರಿಕ ಜೀವನದ ಬಗ್ಗೆ ಟೀಕೆ ಮಾಡಿದ ಸಮಾಜವಾದಿ ಪಕ್ಷದ ನೇತಾರ ಅಜಾಂ ಖಾನ್ ವಿರುದ್ಧ ಕಿಡಿ ಕಾರಿದ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್, ಖಾನ್‌ರನ್ನು ಪಾಕಿಸ್ತಾನಕ್ಕೆ ಕಳುಹಿಸಿ ಎಂದಿದ್ದಾರೆ.

ಮೋದಿ ಅವರಿಗೆ ಕುಟುಂಬ ಇಲ್ಲ, ಆದ್ದರಿಂದ ಅವರಿಗೆ ನೋವು ಗೊತ್ತಾಗಲ್ಲ ಎಂದು ಖಾನ್ ಹೇಳಿದ್ದಕ್ಕೆ ಯೋಗಿ ಆದಿತ್ಯನಾಥ್ ಈ ರೀತಿ ಮರುತ್ತರ ನೀಡಿದ್ದಾರೆ.

ನನಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ನಂಬಿಕೆಯ ದೇವರಿದ್ದಾನೆ..ಮೋದಿ ಅವರಿಗೆ ಇನ್ನೊಬ್ಬರ ಕಷ್ಟಗಳು ಹೇಗೆ ಅರ್ಥವಾಗುತ್ತವೆ? ಎಂದು ಖಾನ್ ಹೇಳಿದ್ದರು.

ಖಾನ್‌ರ ಹೇಳಿಕೆಗೆ ಪ್ರತಿಕ್ರಿಯಿಸಿದ ಗೋರಖ್‌ಪುರ್ ಸಂಸದ ಯೋಗಿ ಆದಿತ್ಯನಾಥ್, "ಖಾನ್ ಒಬ್ಬ ಕಾಗೆ, ಅವರು ಯಾವ ರೆಂಬೆಯಲ್ಲಿ ಕೂರುತ್ತಾರೋ ಆ ರೆಂಬೆಯೇ ಬಾಡಿ ಹೋಗುತ್ತದೆ. ಆತನನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು. ಹಂದಿಗಳೂ ಸಂತಾನೋತ್ಪತ್ತಿ ಮಾಡುತ್ತವೆ, ಅವು ಹೇಗೆ ಸಂತಾನೋತ್ಪತ್ತಿ ಮಾಡುತ್ತವೆ ಎಂಬುದನ್ನು ಅಜಂ ಖಾನ್ ವಿವರಿಸಬೇಕು" ಎಂದು ವಾಗ್ದಾಳಿ  ಮಾಡಿದ್ದಾರೆ.

ಅಜಂ ಖಾನ್ ಪದೇ ಪದೇ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರೆ , ಇತ್ತ  ಯೋಗಿ ಜಮಾ ಮಸೀದಿಯ ಶಾಹೀ ಇಮಾಮ್ ಅವರನ್ನು ಪಾಕ್‌ಗೆ ಕಳುಹಿಸಬೇಕು ಎಂದಿದ್ದರು.

ಆದಾಗ್ಯೂ, ಯೋಗಿ ಮತ್ತು ಅಜಂ ಖಾನ್ ಅವ್ಯಾಚ ಪದಗಳನ್ನು ಬಳಸಿ ಜಗಳ ಆಡಿರುವುದು ಇದು ಮೊದಲನೇ ಬಾರಿಯೇನೂ ಅಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.