

ಮೀರತ್: ಮೀರತ್ ನ ಲಿಸಡಿ ಗೇಟ್ ಪ್ರದೇಶದಲ್ಲಿ ನಾಲ್ಕು ಜನ ಕುಟುಂಬದವರೇ ೨೦ ವರ್ಷದ ಹುಡುಗಿಯನ್ನು ಒತ್ತೆಯಾಳಾಗಿರಿಸಿಕೊಂಡು ಗ್ಯಾಂಗ್ ರೇಪ್ ಮಾಡಿರುವ ಘಟನೆ ಬೆಳಕಿಗೆ ಬಂದಿರುವುದನ್ನು ಪೊಲೀಸರು ಇಂದು ಇಲ್ಲಿ ತಿಳಿಸಿದ್ದಾರೆ.
ಲಾಖಿಪುರದ ನಿವಾಸಿ ಅತ್ಯಾಚಾರಕ್ಕೆ ಬಲಿಯಾಗಿರುವ ಯುವತಿಯ ತಂದೆ ನೂರುದ್ದೀನ್ ಮತ್ತು ಮಕ್ಕಳು ಕೊಟ್ಟಿರುವ ದೂರಿನ ಪ್ರಕಾರ ವಸೀಮ್, ಸಾಕಿಬ್ ಮತ್ತು ಆನಸ್, ಲಿಸಡಿ ಗೇಟ್ ನ ಬಳಿಯಿಂದ ತನ್ನ ಮಗಳನ್ನು ಅಪಹರಿಸಿದ್ದಾರೆ. ಈ ದೂರು ಏಪ್ರಿಲ್ ೧೭ ರಂದು ದಾಖಲಾಗಿದೆ. ಅಂದಿನಿಂದ ಆ ಹುಡುಗಿ ಆರೋಪಿಗಳ ಒತ್ತೆಯಾಳಾಗಿದ್ದಳೆ.
೧೫ ವರ್ಷದ ವಸೀಮ್ ಒತ್ತಾಯದಿಂದ ಹುಡುಗಿಯನ್ನು ಮದುವೆಯಾಗಿದ್ದ. ಮತ್ತು ಈಗ ಆರೋಪಿಗಳಾಗಿರುವ ನಾಲ್ಕೂ ಜನ ಹಲವಾರು ಬಾರಿ ಹುಡುಗಿಯನ್ನು ರೇಪ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನೆನ್ನೆ ಹುಡುಗಿ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಬಂದು ನಡೆದದ್ದನ್ನೆಲ್ಲಾ ತನ್ನ ಕುಟುಂಬದ ಮುಂದೆ ವಿವರಿಸಿದಾಗ, ನಾಲ್ಕು ಜನರ ಮೇಲೆ ಕೇಸ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಯುವತಿಯನ್ನು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಿದ್ದು, ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆ ಜಾರಿಯಲ್ಲಿದೆ ಎಂದಿದ್ದಾರೆ ಪೊಲೀಸರು.